ಕಮರ್ಷಿಯಲ್ ಸ್ಟ್ರೀಟ್ 'ಹ್ಯಾಪಿ ಸ್ಟ್ರೀಟ್' ಆಗಿ ಬದಲಾದ ಚಿತ್ರಗಳು

Posted By:
Subscribe to Oneindia Kannada

ಬೆಂಗಳೂರು, ಜ. 31: ಬೆಂಗಳೂರಿಗರ ಪಾಲಿನ ಶಾಪಿಂಗ್ ಸ್ವರ್ಗ ಕಮರ್ಷಿಯಲ್ ಸ್ಟ್ರೀಟ್ ಭಾನುವಾರ (ಜನವರಿ 31) ತನ್ನ ಬಣ್ಣ ಬದಲಾಯಿಸಿ ರಂಗು ರಂಗೇರಿತ್ತು. ವಾಹನ ಸಂಚಾರ ಇಲ್ಲದ, ಮಕ್ಕಳು, ವೃದ್ಧರು, ಹದಿಹರೆಯದವರು ಹಾಡಿ ನಲಿವ ತಾಣವಾಗಿ ಈ ವ್ಯಾಪಾರಿ ಪ್ರದೇಶ ಮಾರ್ಪಾಟಾಗಿತ್ತು. ಇದೀಗ ಇದೇ ರೀತಿ ಹ್ಯಾಪಿ ಸ್ಟ್ರೀಟ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಭಾನುವಾರದ ದಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಹಬ್ಬದ ವಾತಾವರಣವಿತ್ತು. ಫೆಬ್ರವರಿಯಲ್ಲಿ ನಡೆಯುವ ಗೋವಾ ಕಾರ್ನಿವಲ್ ಏನಾದರೂ ಬೆಂಗಳೂರಿಗೆ ಶಿಫ್ಟ್ ಆಯಿತೇ ಎನ್ನುವಂತಿತ್ತು. ಪಾದಚಾರಿಗಳು ಕಾಲಿಡಲು ಯೋಚನೆ ಮಾಡುವ ಕಮರ್ಷಿಯಲ್ ಸ್ಟ್ರೀಟ್ ಸಂಪೂರ್ಣ ವಾಹನ ಮುಕ್ತವಾಗಿತ್ತು.

ಹ್ಯಾಪಿ ಸ್ಟ್ರೀಟ್: ದೆಹಲಿ, ಮುಂಬೈ, ಹೈದರಾಬಾದ್, ನಾಗ್ಪುರ ಹಾಗೂ ಕೊಯಮತ್ತೂರಿನಲ್ಲಿ ಈ ಮುಂಚೆ ಈ ರೀತಿ ಐಡಿಯಾ ಅಳವಡಿಸಿ ಜನಮೆಚ್ಚುಗೆ ಪಡೆಯಲಾಗಿದೆ. ಸ್ಥಳೀಯ ಮಾಧ್ಯಮ ಸಂಸ್ಥೆಗಳ ಆಯೋಜನೆಯಲ್ಲಿ ಒಂದರ್ಧ ದಿನ ವಾಹನಮುಕ್ತ ರಸ್ತೆಯಲ್ಲಿ ಹೊಸ ಲೋಕಸೃಷ್ಟಿಸಲಾಗುತ್ತದೆ. ಬೆಂಗಳೂರಿನಲ್ಲಿ ಟೈಮ್ಸ್ ಸಮೂಹ ಈ ಹ್ಯಾಪಿ ಸ್ಟ್ರೀಟ್ ಆಯೋಜನೆಯ ಹೊಣೆ ಹೊತ್ತುಕೊಂಡಿತ್ತು.

ಬೆಂಗಳೂರಿನಲ್ಲಿ ನೋ ವೆಹಿಕಲ್ ಡೇ ಆಚರಣೆ ನಂತರ ಈ ರೀತಿ ಹ್ಯಾಪಿ ಸ್ಟ್ರೀಟ್ ಕಲ್ಪನೆ ಮೆಚ್ಚುಗೆ ಪಡೆದುಕೊಂಡಿದೆ. ವಾರಾಂತ್ಯದಲ್ಲಾದರೂ ವಾಹನಗಳ ಸಂಚಾರ ದಟ್ಟಣೆಯಿಂದ ಮುಕ್ತರಾಗಿ ನೆಮ್ಮದಿಯಿಂದ ಕಾಲಕಳೆಯಲು ಪರಿಸರ ಉಳಿಸಲು ಇಂಥದ್ದೊಂದು ಡೇ ಬೇಕು ಎನಿಸುತ್ತಿದೆ.

ಟ್ರಾಫಿಕ್ ಪೊಲೀಸ್ ಕಮಿಷನರ್ ಎಂಎ ಸಲೀಮ್

ಟ್ರಾಫಿಕ್ ಪೊಲೀಸ್ ಕಮಿಷನರ್ ಎಂಎ ಸಲೀಮ್

ಟ್ರಾಫಿಕ್ ಪೊಲೀಸ್ ಕಮಿಷನರ್ ಎಂಎ ಸಲೀಮ್ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಕಮರ್ಷಿಯಲ್ ಸ್ಟ್ರೀಟ್ ಹೀಗೆ ಹ್ಯಾಪಿ ಸ್ಟ್ರೀಟ್ ಆಗಿ ಇರಲಿ. ಜನರು ತಮ್ಮ ವಾಹನಗಳನ್ನು ಬಿಟ್ಟು ಇಲ್ಲಿ ಬಂದು ಯೋಗ, ಸೈಕಲಿಂಗ್, ವಿವಿಧ ರೀತಿ ಆಟೋಟಗಳಲ್ಲಿ ತೊಡಗಿಕೊಂಡು ಉತ್ಸಾಹದಿಂದ ಸಂಭ್ರಮಿಸಿದ್ದಾರೆ. ಹಲವು ಕಲಾವಿದರ ಸೃಜನಶೀಲತೆಗೆ ಇಂಥ ಕಾರ್ಯಕ್ರಮ ಬೇಕಾಗಿದೆ.

ಮಕ್ಕಳು ಆಟದ ತಾಣವಾದ ವ್ಯಾಪಾರಿಗಳ ರಸ್ತೆ

ಮಕ್ಕಳು ಆಟದ ತಾಣವಾದ ವ್ಯಾಪಾರಿಗಳ ರಸ್ತೆ

ಕಮರ್ಷಿಯಲ್ ಸ್ಟ್ರೀಟ್ 'ಹ್ಯಾಪಿ ಸ್ಟ್ರೀಟ್' ಆಗಿ ಬದಲಾದ ಮೇಲೆ ಮಕ್ಕಳು ಆಟದ ತಾಣವಾಗಿ ಕಾಣಿಸಿತು.

ನೋ ವೆಹಿಕಲ್ ಡೇ ಯಶಸ್ವಿ

ನೋ ವೆಹಿಕಲ್ ಡೇ ಯಶಸ್ವಿ

ಈ ಹಿಂದೆ ಬೆಂಗಳೂರಿನ ಎಚ್ ಎಸ್ ಆರ್ ಲೇಔಟಿನಲ್ಲಿ ನೋ ವೆಹಿಕಲ್ ಡೇ ಯಶಸ್ವಿಯಾಗಿದೆ. ಫ್ಲೇ ಓವರ್ ಮೇಲೆ ಸೈಕಲ್ ಬಿಟ್ಟು ಬೇರೆ ವಾಹನಗಳು ಚಲಿಸಿರಲಿಲ್ಲ. ಇದರ ಜೊತೆಗೆ ಕಬ್ಬನ್ ಪಾರ್ಕ್ ಪ್ರತಿ ಭಾನುವಾರ ಈಗ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಇನ್ನಷ್ಟು ಹೆಚ್ಚಾಗಬೇಕು ಎಂಬ ಬೇಡಿಕೆ

ಇನ್ನಷ್ಟು ಹೆಚ್ಚಾಗಬೇಕು ಎಂಬ ಬೇಡಿಕೆ

ಇಂಥ ಆಚರಣೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಆಟೋಟಗಳು ಮೈದುಂಬಿಕೊಂಡು ಹಸಿರು ಪರಿಸರ ಉಳಿಸಲು ಸಹಾಯಕವಾಗಿದೆ. ಹೀಗಾಗಿ ಇಂಥ ದಿನಾಚರಣೆಗಳು ಇನ್ನಷ್ಟು ಹೆಚ್ಚಾಗಬೇಕು ಎಂಬ ಬೇಡಿಕೆ ಇದ್ದೇ ಇದೆ.

ಸ್ಥಳೀಯ ನಿವಾಸಿ ಮೋಕ್ಷಾ ಅವರ ಪ್ರತಿಕ್ರಿಯೆ

ಸ್ಥಳೀಯ ನಿವಾಸಿ ಮೋಕ್ಷಾ ಅವರ ಪ್ರತಿಕ್ರಿಯೆ

ಸ್ಥಳೀಯ ನಿವಾಸಿ ಮೋಕ್ಷಾ ಅವರು ಒನ್ ಇಂಡಿಯಾ ಪ್ರತಿನಿಧಿ ಜೊತೆ ಪ್ರತಿಕ್ರಿಯಿಸಿ, ಕಮರ್ಷಿಯಲ್ ಸ್ಟ್ರೀಟ್ ಇಷ್ಟು ಸಂತೋಷದಿಂದ ಇದ್ದದ್ದು ಇಲ್ಲಿ ತನಕ ನೋಡೇ ಇಲ್ಲ. ಟ್ರಾಫಿಕ್ ಜಾಮ್ ನಿಂದ ತಲೆಚಿಟ್ಟು ಹಿಡಿದುಬಿಡುತ್ತಿತ್ತು. ಈಗ ಕೆಲ ಕಾಲವಾದರೂ ನೆಮ್ಮದಿಯಿಂದ ಉಸಿರಾಡಬಹುದು. ಎಲ್ಲರ ಮೊಗದಲ್ಲಿ ನಗೆ ಕಾಣಬಹುದು.

ಬೆನ್ಸನ್ ಟೌನ್ ನಿವಾಸಿ ಪೂಜಾ ದತ್ತ

ಬೆನ್ಸನ್ ಟೌನ್ ನಿವಾಸಿ ಪೂಜಾ ದತ್ತ

ಬೆನ್ಸನ್ ಟೌನ್ ನಿವಾಸಿ ಪೂಜಾ ದತ್ತ ಮಾತನಾಡಿ, ಹ್ಯಾಪಿ ಸ್ಟ್ರೀಟ್ ಅಭಿಯಾನದ ಬಗ್ಗೆ ತಿಳಿದ ಕೂಡಲೇ ನನ್ನ ಮಕ್ಕಳೊಂದಿಗೆ ಇಲ್ಲಿಗೆ ಬಂದು ಸಂತೋಷದಿಂದ ಕಾಲ ಕಳೆದಿದ್ದೇವೆ. ಇಂಥ ಆಚರನೆ ಎಲ್ಲೆಡೆ ಹಬ್ಬಲಿ ಹಾಗೂ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.

ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಗಿಫ್ಟ್

ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಗಿಫ್ಟ್ ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲಾಯಿತು.

ಹ್ಯಾಪಿ ಸ್ಟ್ರೀಟ್ ನಲ್ಲಿ ಕಲಾವಿದ ಬಾದಲ್

ತಮ್ಮ 'ರಸ್ತೆ ರಚನೆ' ಮೂಲಕ ಟ್ರಾಫಿಕ್ ಪೊಲೀಸರನ್ನು ಎಚ್ಚರಿಸುವ ವಿಶಿಷ್ಟ ಕಲಾವಿದ ಬಾದಲ್ ಅವರು ಹ್ಯಾಪಿಸ್ಟ್ರೀಟ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ..

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಯೋಗ ದಿನಾಚರಣೆ

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಯೋಗ ದಿನಾಚರಣೆ ನಡೆಯುವಂತೆ ಕಾಣುತ್ತಿತ್ತು. ರಸ್ತೆಯಲ್ಲೇ ಸರಣಿ ಯೋಗ ಪ್ರದರ್ಶನ ಆಯೋಜನೆಗೊಂಡಿತ್ತು.

ಸೆಲೆಬ್ರಿಟಿಗಳನ್ನು ಸೆಳೆದ ಹ್ಯಾಪಿಸ್ಟ್ರೀಟ್

ನಟಿ ಸಂಜನಾ ಗಲ್ ರಾಣಿ ಅವರ ಜೊತೆ ಬೆಂಗಳೂರು ಟೈಮ್ಸ್ ಸಂಪಾದಕಿ ಕಾವ್ಯ ಕ್ರಿಸ್ಟೋಫರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the help of Bengaluru city police, the Commercial Association has organised 'Happy Street' initiative to transform busy traffic street into traffic-free street from 7 am to 2 pm on Sunday, Jan 31.
Please Wait while comments are loading...