ಬೆಂಗಳೂರು: ಅಜ್ಜಿಯನ್ನು ಕೊಂದು 7 ತಿಂಗಳು ಕಬೋರ್ಡಿನಲ್ಲಿಟ್ಟದ್ದ ಮೊಮ್ಮಗ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 13: ಮೊಮ್ಮಗನೇ ತನ್ನಜ್ಜಿಯನ್ನು ಕೊಂದು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದ ಕೆಂಗೇರಿ ಮರ್ಡರ್ ಸ್ಟೋರಿ ನಡೆದದ್ದು ಕಳೆದ ಆಗಸ್ಟ್ ತಿಂಗಳಿನಲ್ಲೇ. ಆದರೆ ಕೊಲೆಗೆ ಕಾರಣವೇನು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರಲಿಲ್ಲ್.

ಕೊಲೆ ನಡೆದು ಆಗಲೇ ಒಂಬತ್ತು ತಿಂಗಳು ಕಳೆದಿದೆ. ಇತ್ತೀಚೆಗಷ್ಟೇ ಮೃತ ವೃದ್ಧೆಯ ಮೊಮ್ಮಗ ಸಂಜಯ್ ಎಂಬುವವರ ಸ್ನೇಹಿತನೊಬ್ಬ ಸಂಜಯನೇ ತನ್ನಜ್ಜಿಯನ್ನು ಕೊಂದು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದ ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಿದ್ದಾನೆ. ಈ ಮೂಲಕ ಕೆಂಗೇರಿ ಕಬೋರ್ಡ್ ಮರ್ಡರ್ ಕೇಸ್ ಗೆ ರೋಚಕ ತಿರುವು ಸಿಕ್ಕಿದೆ. [ಕೆಂಗೇರಿಯ ಮನೆ ವಾರ್ಡ್ ರೋಬ್ ನಲ್ಲಿ ಮಹಿಳೆಯ ಅಸ್ಥಿಪಂಜರ ]

Bengaluru boy kills her own grandmother

ತಾನು ಕೊಟ್ಟ ಊಟವನ್ನು ಅಜ್ಜಿ ಬಿಸಾಡಿದ್ದನ್ನು ಕಂಡು ಕೋಪಗೊಂಡ ಮೊಮ್ಮಗ ತನ್ನ ಕಬ್ಬಿಣದ ರಾಡ್ ನಿಂದ ಅಜ್ಜಿಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದಾನೆ! ಆಕೆಯ ಶವ ಕಬೋರ್ಡಿನಲ್ಲಿದ್ದಂತೆಯೇ ತಾನು ಯಾವ ಭಯವಿಲ್ಲದೆ, ಪಾಪಪ್ರಜ್ಞೆಯಿಲ್ಲದೆ ಅದೇ ರೂಮಿನಲ್ಲಿ ಮಲಗುತ್ತಿದ್ದ![ಮೇ 22ರ ವರೆಗೆ ಬಾಂಬ್ ನಾಗ ಮತ್ತು ಮಕ್ಕಳು ಪೊಲೀಸ್ ಕಸ್ಟಡಿಗೆ]

ನಂತರ ಶವದ ವಾಸನೆ ತಅಳಲಾರದೆ ರೂಮು ಖಾಲಿ ಮಾಡಿ, ನಾಪತ್ತೆಯಾಗಿದ್ದ ಸಂಜಯ್ ಬಂಧನಕ್ಕೆ ಇದೀಗ ಕೆಂಗೇರಿ ಪೊಲೀಸರು ಬಲೆಬೀಸಿದ್ದಾರೆ. ದೇವರಂತೆ ನೋಡಬೇಕಾದ ಅಜ್ಜಿಯನ್ನೇ ಕೊಂದ ಪಾಪಿ ಮೊಮ್ಮಗನ ಕತೆ ನಿಜಕ್ಕೂ ಆಘಾತಕಾರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A grand son kills his own grand mother and kept her body in a cupboard!
Please Wait while comments are loading...