ಬಿಬಿಎಂಪಿ: ಕಾರ್ಪೊರೇಟರ್ಸ್ ಅಂಕಪಟ್ಟಿಗಾಗಿ ಸಮೀಕ್ಷೆ
ಬೆಂಗಳೂರು, ಜುಲೈ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಎಲ್ಲಾ ಚುನಾವಣೆಗಳಂತೆ ಈ ಚುನಾವಣೆಗೂ ಮುನ್ನ ಕ್ಷೇತ್ರದ ಸಮಸ್ಯೆ, ಕ್ಷೇತ್ರದ ಜನತೆಯ ಬೇಡಿಕೆ, ಅಲ್ಲಿರುವ ಹಾಲಿ ಕಾರ್ಪೊರೇಟರ್ಸ್ ಕಾರ್ಯಕ್ಷಮತೆಯ ವರದಿ ತಯಾರಿಸಲು ಊರ್ವಾಣಿ ಸಂಸ್ಥೆಯ ಸಿಟಿಜನ್ ಮ್ಯಾಟರ್ಸ್ ಸಜ್ಜಾಗಿದೆ.
ಸಿಟಿಜನ್ ಮ್ಯಾಟರ್ಸ್ ಬಿಬಿಎಂಪಿ ಚುನಾವಣಾಪೂರ್ವ ಸಮೀಕ್ಷೆ ಮೂಲಕ ಬೆಂಗಳೂರಿಗರ ನಾಡಿಮಿಡಿತ ತಿಳಿಯುವ ಪ್ರಯತ್ನ ಇದಾಗಿದೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಘೋಷಣೆ]
ಒಂದು ಅರ್ಜಿಯನ್ನು ತುಂಬಿ ಮತ್ತು ಈ ಸಮೀಕ್ಷೆಯ ಬಗ್ಗೆ ಇತರರಿಗೂ ತಿಳಿಸುವ ಮೂಲಕ ಹೆಚ್ಚೆಚ್ಚು ಜನ ಜಾಗೃತಿ ಸಾಧ್ಯ. ಬೆಂಗಳೂರು ಸಧ್ಯದಲ್ಲೇ ಎದುರಿಸಲಿರುವ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಇದು ಸೂಕ್ತ ವೇದಿಕೆಯಾಗಿದೆ.
ಚುನಾವಣೆಗಾಗಿ ಕಾಯುವ ಕಾಲ ಮುಗಿಯಿತು. ಬಿಬಿಎಂಪಿ ಚುನಾವಣೆ ಮತ್ತೆ ನಿಮ್ಮ ಮುಂದಿದೆ. ಓದುಗರು ಈ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾಗವಹಿಸಲು ಕೋರುತ್ತೇವೆ. [ಬಿಬಿಎಂಪಿ ಚುನಾವಣೆ ಮಕ್ಕಳಾಟವಲ್ಲ: ದೇವೇಗೌಡ]

ನಿಮ್ಮ ಭಾಗವಹಿಸುವಿಕೆ ನೀವು ಸ್ಥಳೀಯ ಆಡಳಿತವನ್ನು ಹೇಗೆ ಗ್ರಹಿಸುತ್ತೀರಿ ಎನ್ನುವುದನ್ನು ನಮಗೆ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಅದರೊಂದಿಗೆ ನಿಮ್ಮ ಇತ್ತೀಚಿನ ಕಾರ್ಪೊರೇಟರ್ ಬಗ್ಗೆ ನಾಗರಿಕ ವರದಿ ತಯಾರಿಸಲು ನಮಗೆ ಸಹಾಯ ಮಾಡುತ್ತದೆ. [ಬಿಬಿಎಂಪಿ ವೆಬ್‌ಸೈಟ್‌ನ ಹೊಸ ವಿನ್ಯಾಸ ನೋಡಿ]
* ಕಳೆದ ಚುನಾವಣೆಯಲ್ಲಿ ಗೆದ್ದವರು ಯಾರೆಂದು ನೋಡಲು ನಿಮಗೆ ಈ ಲಿಂಕ್ ಸಹಾಯ ಮಾಡುತ್ತದೆ.
* ಈ ಮ್ಯಾಪನ್ನು ಬೆಂಗಳೂರಿನ ಸಾಫ್ಟ್‌ವೇರ್ ಪರಿಣತ ತೇಜೇಶ್ ಜಿ ಎನ್ ತಯಾರಿಸಿದ್ದಾರೆ.
* ಈ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮ ಜಿ ಮೇಲ್ ಅಕೌಂಟ್ ನಿಂದ ಲಾಗ್ ಇನ್ ಆಗಬೇಕು.
* ಈ ಸಮೀಕ್ಷೆಯ ಅರ್ಜಿಯನ್ನು ಒಮ್ಮೆ ಮಾತ್ರ ತುಂಬಬಹುದು.
* ಅರ್ಜಿ ಕೆಳಗೆ ಕಾಣಿಸದಿದ್ದರೆ ಈ ಲಿಂಕ್ ನ್ನು ಒತ್ತಿ.
(ಒನ್ ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications