ಆಯುಷ್ ನಿಂದ ಎಲ್ಲ ಭಾಷೆಗಳಲ್ಲೂ ಯೋಗ ಕಲಿಯಿರಿ: ರಾಮ್ ದೇವ್

Posted By:
Subscribe to Oneindia Kannada

ಬೆಂಗಳೂರು, ಜನವರಿ 16: ಭಾರತದ ಸಂಸ್ಕೃತಿ, ಆಚಾರ- ವಿಚಾರ, ಯೋಗ, ಧ್ಯಾನ, ಪ್ರಾಣಾಯಾಮ ಕಾರ್ಯ್ರಮವನ್ನು ಪ್ರಸಾರ ಮಾಡುವ ಕಾಮದೇನು ಟೆಲಿಫಿಲ್ಸ್ ನ ಆಯುಷ್ ಚಾನೆಲ್ ಅನ್ನು ಬೆಂಗಳೂರಿನಲ್ಲಿ ಬಾಬಾ ರಾಮ್ ದೇವ್ ಲೋಕಾರ್ಪಣೆ ಗೊಳಿಸಿದರು.

ಬರಿ ಆಸ್ತಾ ಟಿವಿಯಲ್ಲಿ ಹಿಂದಿಯಲ್ಲಿ ಮಾತ್ರ ಯೋಗ ಹೇಳಿಕೊಡುತ್ತಿದ್ದೆ. ಫೆ.1ರಿಂದ ಪ್ರತಿದಿನ ಆಯುಷ್ ವಾಹಿನಿಯಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಧ್ಯಾನ, ಆಧ್ಯಾತ್ಮ, ಯೋಗ, ಪ್ರಾಣಾಯಾಮವನ್ನು ಅಭ್ಯಾಸಿಸಲಾಗುವುದು. ಆಯುಷ್ ಚಾನೆಲ್ ಮೂಲಕ ಪ್ರತಿದಿನ ಇಡೀ ವಿಶ್ವಕ್ಕೆ ಯೋಗವನ್ನು ಪಸರಿಸಲಾಗುವುದು ಎಂದರು.[ರಾಮ್ ದೇವ್ ಫುಟ್ಬಾಲ್ ಕಿಕ್, ರಾಜಕಾರಣಿಗಳಿಗೆ ಸೋಲು]

AYUSH TV

ಪ್ರತಿ ಮುಂಜಾನೆ ಯೋಗಾಭ್ಯಾಸ ಮಾಡುವುದರಿಂದ ಸರ್ವರೋಗಗಳಿಂದ ಮುಕ್ತರಾಗಬಹುದು. ಯೋಗದಲ್ಲಿ ಶಕ್ತಿ ಇದೆ. ಅದರಿಂದ ದೇಹ, ಆತ್ಮ ಶುದ್ಧಿಯಾಗಿ ಆರೋಗ್ಯ ಲಭ್ಯವಾಗುತ್ತದೆ ಎಂಬ ಸತ್ಯವನ್ನು ಅರಿಯಬೇಕು.

ನಾನು ಭಾರತೀಯ ಸಂಸ್ಕೃತಿಯಲ್ಲಿ ಉಲ್ಲೇಖೀತವಾದ, ಪರಿಸರದಿಂದ ಸಿಗುವ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ವಿವಿಧ ಪತಂಜಲಿ ಉತ್ಪನ್ನಗಳನ್ನು ತಯಾರಿಸಿ ಕೊಡುತ್ತಿದ್ದೇನೆ. ಅದರಿಂದ ನನಗೆ ಒಂದು ಪೈಸೆಯೂ ಬರುವುದಿಲ್ಲ. ವಿದೇಶಿ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶಿ ಉತ್ನ್ನಗಳನ್ನು ಮಾಡಿದ್ದು ಇದರಿಂದ ವಿದೇಶಕ್ಕೆ ಹೋಗುವ ಹಣ ದೇಶದಲ್ಲಿಯೇ ಉಳಿಯುತ್ತಿದೆ ಎಂದರು.[ಗೋದ್ರೇಜ್, ಡಾಬರ್‌ಗೆ ಬಾಬಾ ರಾಮ್‌ದೇವ್ ಶಾಕ್]

Baba ram dev

ವೈದ್ಯ ವಿಜ್ಞಾನದಲ್ಲಿ ಆಗುತ್ತಿರುವ ಸಂಶೋಧನೆಗಳಿಂದ ಸಾಮಾನ್ಯ ಮನುಷ್ಯನಿಗೆ ಪರಿಹಾರ ಸಿಗದಿದ್ದರೆ ಅಂತಹ ಸಂಶೋಧನೆಗಳ ಅಗತ್ಯವಿದೆಯೇ?. ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ನೀತಿ ಸಂಹಿತೆಯನ್ನೇ ಮರೆತು ಹಲವು ವೈದ್ಯರು ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಪ್ರಶ್ನಿಸಿದರು.

ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದಗಳು ಮನುಷ್ಯ ಹೇಗಿರಬೇಕು ಎಂಬುದನ್ನು ಪ್ರಾಚೀನ ಕಾಲದಲ್ಲಿಯೇ ಹೇಳಿದೆ. ಹಿಂದಿದ್ದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಈಗ ಇಲ್ಲ. ಪ್ರಕೃತಿಯೇ ಎಲ್ಲಕ್ಕೂ ಪರಿಹಾರ ಮತ್ತು ಚಿಕಿತ್ಸೆ ನೀಡುತ್ತದೆ ಅದನ್ನು ಅರಿಯಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

upendra

ಈ ವೇಳೆ ಹಾಜರಿದ್ದ ನಟ ಉಪೇಂದ್ರ ಅವರು ಬಾಬಾ ರಾಮ್ ದೇವ್ ಅವರ ಬಳಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AYUSH to learn all the languages of yoga says Baba Ramdev lanch the AYUSH tv channel in bengaluru Jan.15
Please Wait while comments are loading...