ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತ್ರಸ್ತ ನೇಪಾಳಿಗಳಿಗಾಗಿ ಬೆಂಗಳೂರಲ್ಲಿ ಸೂಫಿ ಸಂಗೀತ

By Mahesh
|
Google Oneindia Kannada News

ಬೆಂಗಳೂರು, ಜುಲೈ, 04: ಸೂಫಿ ಸಂಗೀತ ಇಷ್ಟಪಡುವರು ಮುಂದಿನ ವಾರ ಚೌಡಯ್ಯ ಸ್ಮಾರಕ ಭವನದಲ್ಲಿ ಗಾಯಕಿ ಕವಿತಾ ಸೇಠ್ ಅವರ ಗಾನಸುಧೆಯಲ್ಲಿ ಮುಳುಗೇಳಬಹುದು. ನೇಪಾಳದ ಭೂಕಂಪ ಸಂತ್ರಸ್ತರಿಗಾಗಿ ಕವಿತಾ ಅವರು ದೇಣಿಗೆ ಸಂಗ್ರಹಿಸಲು ಈ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಸ್ಪಿರಿಟ್ ಆಫ್ ಸ್ಕ್ಯಾಕ್ರಿಫೈಸ್ ಹೆಸರಿನ ಈ ಗಾಯನ ಕಾರ್ಯಕ್ರಮವನ್ನು ಪರಿಕ್ರಮ ಫೌಂಡೇಷನ್, ಕಾಲಿಯೋಪ್ ಇವೆಂಟ್ಸ್ ಹಾಗೂ ಎನಿ ಫೌಂಡೇಷನ್ ಆಯೋಜಿಸುತ್ತಿದೆ. ಒನ್ ಇಂಡಿಯಾ ಕೂಡಾ ಈ ಸಾಮಾಜಿಕ ಕಳಕಳಿ ಕಾರ್ಯಕ್ರಮಕ್ಕೆ ಕೈಜೋಡಿಸಿದೆ.

ನೇಪಾಳದಲ್ಲಿ ಭೂಕಂಪಪೀಡಿತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ದೃಷ್ಟಿಯಿಂದ ಪರಿಕ್ರಮ ವಿದ್ಯಾರ್ಥಿಗಳು ಈ ಸಂಗೀತ ಆಯೋಜನೆಯ ಬಗ್ಗೆ ಉತ್ಸುಕರಾಗಿದ್ದರು. ಕಾಲಿಯೋಪ್ ಇವೆಂಟ್ಸ್ ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಕುಮಾರ್ ಅವರು ಕೂಡಾ ನೆರವು ನೀಡಲು ಮುಂದಾದರು.

An evening with Sufi singer Kavita Seth in Bengaluru

ನೇಪಾಳದಲ್ಲಿ ಭೂಕಂಪದಿಂದ ರಕ್ಷಿಸಬಲ್ಲ ಶಾಲೆಗಳ ನಿರ್ಮಾಣಕ್ಕೆ ಎಎನ್ ಐ ಫೌಂಡೇಷನ್ ಮುಂದಾಗಿದೆ. ಇದಕ್ಕೆ ಇತರೆ ಸಮಾನ ಮನಸ್ಕ ಸಂಸ್ಥೆಗಳು ಕೈಜೋಡಿಸಿವೆ. ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಭವ ಹೊಂದಿರುವ ಕ್ಯಾಲಿಯೋಪ್ ಇವೆಂಟ್ಸ್ ಸಂಸ್ಥೆ ಈಗ ಜುಲೈ 11ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸೂಫಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮಕ್ಕೆ ಒನ್ ಇಂಡಿಯಾ.ಕಾಂ ಅಲ್ಲದೆ ಸಿಎಎನ್ ಐಬಿಎನ್, ಐಡೆಂಟಿಟಿ, ರೇಡಿಯೋ ಸಿಟಿ, ಬುಕ್ ಮೈಶೋ, ಹಾನಿಕೂಂಬ್ ಕೂಡಾ ಸಹ ಪ್ರಾಯೋಜಕರಾಗಿದ್ದಾರೆ. Kavita Seth Live Fund Raiser for Nepal School ಕಾರ್ಯಕ್ರಮದ ಟಿಕೆಟ್ ಗಾಗಿ ಕ್ಲಿಕ್ ಮಾಡಿ... ಕವಿತಾ ಅವರ ಗಾಯನದ ಝಲಕ್ ಇಲ್ಲಿದೆ:

(ಒನ್ ಇಂಡಿಯಾ ಸುದ್ದಿ)

English summary
If you are a Sufi music lover or a fan of famous Sufi singer Kavita Seth then you can an event dedicated to Sufi singing at Bengaluru's Chowdiah Memorial Hall on 11 July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X