1200 ಚದರ ಅಡಿಯಲ್ಲಿ ಕಟ್ಟಿದ ಮನೆಯೂ ಸಕ್ರಮವಾಗಲಿದೆ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 17: ಉದ್ಯಾನ ನಗರಿಯ ಜನರು ಬಹು ಕಾತರದಿಂದ ಕಾಯುತ್ತಿರುವ ಅಕ್ರಮ ಸಕ್ರಮದ ಕುರಿತು ಮತ್ತೆ ಚರ್ಚೆ ಎದ್ದಿದೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ 1200 ಚದರ ಅಡಿ ಜಾಗದಲ್ಲಿ ಕಟ್ಟಲಾದ ಮನೆಯನ್ನೂ ಸಕ್ರಮ ಮಾಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಇದುವರೆಗೂ 600 ಚದರ ಅಡಿ ಜಾಗದಲ್ಲಿ ನಿರ್ಮಾಣವಾದ ಮನೆಯನ್ನಷ್ಟೇ ಸಕ್ರಮ ಮಾಡಲಾಗುತ್ತಿತ್ತು.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳಲ್ಲಿ ಸಹ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ 1200 ಚದರ ಅಡಿ ಜಾಗದಲ್ಲಿ ನಿರ್ಮಾಣವಾದ ಮನೆಗಳನ್ನು ಸಕ್ರಮಗೊಳಿಸಲಾಗಿತ್ತಿದೆ.[ನಗರ ಪ್ರದೇಶದಲ್ಲಿ ಅಕ್ರಮ-ಸಕ್ರಮ : ಏನು, ಹೇಗೆ?]

Akrama Sakrama is in discussion again

ಆದರೆ ಅರಣ್ಯ ಇಲಾಖೆ, ಕೆರೆ, ಗೋಮಾಳಗಳಿಗೆ ಸಂಬಂಧಿಸಿದ ಭೂಮಿಯಲ್ಲಿ ನಿರ್ಮಾಣವಾದ ಮನೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ನಗರ ಪ್ರದೇಶದ 18 ಕಿ.ಮೀ.ವ್ಯಾಪ್ತಿಯಲ್ಲಿ ಬರುವ ಮನೆಗಳಿಗಷ್ಟೇ ಇದು ಅನ್ವಯ.[ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ: ಕಾಗೋಡು ತಿಮ್ಮಪ್ಪ]

ಈ ನಿಯಮದಿಂದ ಬೆಂಗಳೂರಿನಂಥ ಮೆಟ್ರೊಪೊಲಿಟಿನ್ ನಗರಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡ ಲಕ್ಷಾಂತರ ಬಿಲ್ಡರ್ಸ್ ಗಳು ನಿಟ್ಟುಸಿರು ಬಿಡಬಹುದು. ತಮ್ಮ 'ಬಿ' ಖಾತಾ ಮನೆಗಳನ್ನು 'ಎ' ಖಾತಾ ಆಗಿ ಬದಲಿಸಿಕೊಳ್ಳಲು ಸರ್ಕಾರಕ್ಕೆ ಶುಲ್ಕ ಕಟ್ಟಿದರೆ ಸಾಕು![ಅಕ್ರಮ -ಸಕ್ರಮ ಯೋಜನೆಗೆ ಸುಪ್ರೀಂನಿಂದ ತಡೆಯಾಜ್ಞೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state government has decided to legalise, illegal houses which has built in 1200 sq ft area under Akrama Sakrama. The rule is only aplicable to the houses which are built in revenue department land.
Please Wait while comments are loading...