ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ -ಸಕ್ರಮ ಯೋಜನೆಗೆ ಸುಪ್ರೀಂನಿಂದ ತಡೆಯಾಜ್ಞೆ

ಅಕ್ರಮ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಲಾಗಿದೆ.

By Mahesh
|
Google Oneindia Kannada News

ನವದಹಲಿ/ಬೆಂಗಳೂರು, ಜನವರಿ 13: ಅಕ್ರಮ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಲಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಈ ತಡೆಯಾಜ್ಞೆ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ಅಕ್ರಮ-ಸಕ್ರಮ ಯೋಜನೆಗೆ ನೀಡಿದ್ದ ತೀರ್ಪಿಗೆ ಮುಖ್ಯ ನ್ಯಾಯಮೂರ್ತಿ ಖೆಹರ್ ಸಿಂಗ್ ನೇತೃತ್ವದ ಪೀಠ ಶುಕ್ರವಾರ ತಡೆಯಾಜ್ಞೆ ನೀಡಿದೆ.[ಅಕ್ರಮ ಸಕ್ರಮ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್]

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಫೌಂಡೇಶನ್ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ ತೀರ್ಪಿಗೆ ತಡೆಯಾಜ್ಞೆ ನೀಡಿ ಇಡೀ ಯೋಜನೆ ಕುರಿತು ಸುದೀರ್ಘ ವಿಚಾರಣೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

AkramaSakrama case setback for Karnataka govt: Supreme court grants complete stay on the operation

ನ್ಯಾಯಾಲಯದ ತಡೆಯಾಜ್ಞೆ ಇರುವವರೆಗೂ ಅಕ್ರಮ-ಸಕ್ರಮ ಯೋಜನೆಯ ಯಾವುದೇ ಅರ್ಜಿಗಳನ್ನು ಸಾರ್ವಜನಿಕರಿಂದ ಯಾವುದೇ ರೀತಿಯ ಅರ್ಜಿಗಳನ್ನು ಸ್ವೀಕರಿಸಬಾರದೆಂದು ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

ಈಗಾಗಲೇ ನಗರ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಬದಲು ಪ್ರದೇಶವಾರು ಶುಲ್ಕ ವಿಧಿಸಿ ಕಾನೂನು ಬದ್ಧಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ನ್ಯಾಯಪೀಠಕ್ಕೆ ಸರ್ಕಾರದ ಪರ ಖ್ಯಾತ ವಕೀಲ ಬಸವ ಪ್ರಭುಪಾಟೀಲ್ ವಾದ ಮಂಡಿಸಿದರು.[ನಗರ ಪ್ರದೇಶದಲ್ಲಿ ಅಕ್ರಮ-ಸಕ್ರಮ : ಏನು, ಹೇಗೆ?]

ಸರ್ಕಾರದ ಈ ಯೋಜನೆ ಅವೈಜ್ಞಾನಿಕವಾಗಿದೆ. ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದೇ ಕಾನೂನು ಬಾಹಿರ.

ಕೇವಲ ದಂಡ ಪಾವತಿಸಿ ತಕ್ಷಣ ಸಕ್ರಮಗೊಳಿಸುವುದು ಸರಿಯಲ್ಲ. ಇದು ಸುದೀರ್ಘ ವಿಚಾರಣೆ ನಡೆಯಬೇಕೆಂದು ಅರ್ಜಿದಾರರ ಪರ ಖ್ಯಾತ ವಕೀಲ ಅಭಿಷೇಕ್ ಮನುಸಿಂಗ್ವಿ ವಾದ ಮಂಡಿಸಿದರು. ಎರಡು ವಾದ ಪ್ರತಿವಾದ ಆಲಿಸಿದ ನ್ಯಾ ಖೇಹರ್ ಅವರಿದ್ದ ನ್ಯಾಯಪೀಠ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದೆ.

English summary
AkramaSakrama case: SC hands #Bengaluru a huge win; grants complete stay on the operation of the scheme until appeal is heard by the court tweets Namma Bengaluru foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X