ಬೆಂಗಳೂರು: ಮಳೆ ಕೊರತೆ - ತರಕಾರಿ ಬೆಲೆ ಏರಿಕೆ
ಬೆಂಗಳೂರು,ಜು.8:ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದಂತೆ ಇತ್ತ ತರಕಾರಿಗಳ ಬೆಲೆ ಏರಿಕೆಯಾಗತೊಡಗಿದೆ. ಪ್ರತಿ ತಿಂಗಳು ತರಕಾರಿ ಬೆಳೆ ಹೆಚ್ಚಳವಾಗುತ್ತಿದ್ದು, ಜನಸಾಮಾನ್ಯರು ತರಕಾರಿಯನ್ನು ಕೇವಲ ನೋಡಿಕೊಂಡು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೇ ಕೊನೆಯ ವಾರದಲ್ಲಿ ಗಗನಕ್ಕೆ ಏರಿದ ತರಕಾರಿ ಬೆಲೆ ಮುಂಗಾರು ಮಳೆ ಭರ್ಜರಿಯಾದರೆ ಇಳಿಯಬಹುದು ಎಂದು ಹೇಳಲಾಗುತಿತ್ತು. ಆದರೆ ಮುಂಗಾರು ಕೈಕೊಟ್ಟದ್ದರಿಂದ ತರಕಾರಿ ಬೆಲೆ ಮತ್ತಷ್ಟು ಏರಿಕೆಯಾಗಿದೆ.[ಪೆಟ್ರೋಲ್ 1.69 ರೂ. ಡೀಸೆಲ್ 50 ಪೈಸೆ ಹೆಚ್ಚಳ]
ಮಾರುಕಟ್ಟೆ, ಸಣ್ಣ ತರಕಾರಿ ಅಂಗಡಿಗಳು ಹಾಗೂ ಮಾಲ್ಗಳಲ್ಲಿ ತರಕಾರಿ ಬೆಲೆ ಹಾಪ್ಕಾಮ್ಸ್ಗಿಂತ ಶೇ.30 ರಷ್ಟು ಹೆಚ್ಚಳವಾಗಿದೆ. ಇದು ಕೂಡ ಗ್ರಾಹಕರ ಜೇಬಿಗೆ ಸರಿಯಾಗಿಯೇ ಕತ್ತರಿ ಹಾಕಿದೆ. ಹಾಪ್ಕಾಮ್ಸ್ ಮಳಿಗೆಗಳಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಗ್ರಾಹಕರಿಗೆ ನೀಡಲಾಗುತ್ತಿದೆ. ಆದ್ದರಿಂದ ದರ ಸ್ಪಲ್ಪ ಕಡಿಮೆ ದರದಲ್ಲಿ ತರಕಾರಿ ಮಾರಾಟವಾಗುತ್ತಿದ್ದರೂ ಈಗ ಹಾಪ್ಕಾಮ್ಸ್ ಮಳಿಗೆಗಳಲ್ಲೂ ತರಕಾರಿ ಬೆಲೆ ಹೆಚ್ಚಾಗಿದೆ.[ಅಕ್ಟೋಬರ್ನಲ್ಲಿ ಈರುಳ್ಳಿ ಬೆಲೆ 100 ರೂಪಾಯಿ!]

ಹೀಗಾಗಿ ಇಲ್ಲಿ ಹಾಪ್ಕಾಮ್ಸ್ನ ಒಂದು ತಿಂಗಳ ಹಿಂದಿನ ದರ(ಜೂ.7) ಮತ್ತು ಪ್ರಸ್ತುತ ದರ(ಜು.7) ನೀಡಲಾಗಿದೆ.
ಬದನೆ ---- 38(28)
ಬಿಟ್ರೋಟ್-- 46(31)
ಬೆಂಡೆಕಾಯಿ -- 38(28)
ಬಟಾಟೆ ---- 37(32)
ಟೊಮೇಟೊ --- 36(11)
ಸೌತೆಕಾಯಿ ----- 48(31)
ಊಟಿ ಕ್ಯಾರೇಟ್--- 58(49)
ಕ್ಯಾಬೇಜ್ ---- 24(22)
ಮೆಂತೆಸೊಪ್ಪು-- 107(92)
ಈರುಳ್ಳಿ ದೊಡ್ಡದು ---42(36)
(ಆವರಣದ ಒಳಗಡೆ ಇರುವುದು ಜೂನ್ ತಿಂಗಳ ದರ)
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಮಾಡಬಹುದು:www.hopcoms.kar.nic.in
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications