ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆರಂಭವಾಗಲಿದೆ ಪ್ರತ್ಯೇಕ ಬಸ್ ಲೇನ್!

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಸಂಚಾರದ ವೇಗವನ್ನು ಕೊಂಚ ಹೆಚ್ಚಿಸುವ ಸಲುವಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಪ್ರತ್ಯೇಕ ಬಸ್ ಲೇನ್ ಅನ್ನು ಜಾರಿಗೆ ತರಲಾಗುತ್ತಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 19: ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಸಂಚಾರದ ವೇಗವನ್ನು ಕೊಂಚ ಹೆಚ್ಚಿಸುವ ಸಲುವಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಪ್ರತ್ಯೇಕ ಬಸ್ ಲೇನ್ ಅನ್ನು ಜಾರಿಗೆ ತರಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಲೇನ್ ಅನ್ನು ಬಿಎಂಟಿಸಿ, ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಗಳು ಬಳಸಿಕೊಳ್ಳಬಹುದು.

ಮೊದಲು ಇದನ್ನು ಪ್ರಾಯೋಗಿಕವಾಗಿ ಆರಂಭಿಸಿ, ಉಪಯುಕ್ತ ಎನ್ನಿಸಿದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಆರ್. ಹಿತೆಂದ್ರ ತಿಳಿಸಿದ್ದಾರೆ. ಬಸ್ಸುಗಳಿಗೆ ಒಂದು ಸರಿಯಾದ ಲೇನ್ ಇಲ್ಲದಿರುವುದರಿಂದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಸ್ ಗಳು ಓಡಾಡುತ್ತಿವೆ. ಇದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿರುವುದಷ್ಟೇ ಅಲ್ಲದೆ, ಇತರ ವಾಹನ ಚಾಲಕರಿಗೂ ಕಷ್ಟವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಇತೀಶ್ರೀ ಹಾಡುವ ದೃಷ್ಟಿಯಿಂದ ಬಸ್ ಲೇನ್ ಪದ್ಧತಿ ಜಾರಿಗೆ ತರಲಾಗುತ್ತಿದೆ.[ಬೆಂಗಳೂರಿಗೆ 'ಪಾಡ್ ಕಾರ್', ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ತಂತ್ರ]

A separate lane for buses in Bengaluru will be introduced soon

ಬೆಂಗಳೂರಿನಲ್ಲಿ ಪೀಕ್ ಅವರ್ ಗಳಲ್ಲಿ ವಾಹನಗಳು ಗಂಟೆಗೆ ಕೇವಲ 4 ಕಿ.ಮೀ. ವೇಗದಲ್ಲಿ ಓಡುತ್ತಿವೆ! ಈಗಾಗಲೇ ಹಲವು ರಸ್ತೆಗಳಲ್ಲಿ ಆಟೋಗಳಿಗೆ ಪ್ರತ್ಯೇಕ ಲೇನ್ ಮಾಡಲಾಗಿದ್ದು, ಬಸ್ ಲೇನ್ ಕೂಡ ಆದರೆ ರಸ್ತೆಯಲ್ಲಿ ಶಿಸ್ತಿರುತ್ತದೆ, ವಾಹನಗಳ ವೇಗವನ್ನೂ ಹೆಚ್ಚಿಸಬಹುದು, ಮಾತ್ರವಲ್ಲ, ಬೆಂಗಳೂರಿಗರ ಪ್ರಮುಖ ಸಮಸ್ಯೆ ಎನ್ನಿಸಿರುವ ಟ್ರಾಫಿಕ್ ಸಮಸ್ಯೆಯೂ ತಗ್ಗಬಹುದು.

English summary
Bengaluru traffic police have decided to introduce separate lane for buses. To control traffic problem in the city, traffic police department has decided to introduce this system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X