Yash: ಬಳ್ಳಾರಿಯಲ್ಲಿ ಕಾಣಿಸಿಕೊಂಡ ಯಶ್ ಮತ್ತು ಎಸ್‌ಎಸ್ ರಾಜಮೌಳಿ; ವಿವರ
ಬಳ್ಳಾರಿಯ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಎಸ್‌ಎಸ್ ರಾಜಮೌಳಿ, ಅವರ ಪತ್ನಿ ರಮಾ ಭಾಗವಹಿಸಿದ್ದರು. ಮೂವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ಮತ್ತು ವೀಡಿಯೊಗಳು ಈಗ ಎಕ್ಸ್‌ನಲ್ಲಿ ವೈರಲ್ ಆಗುತ್ತಿವೆ.
ರಾಜಮೌಳಿ ಮತ್ತು ಯಶ್ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡರು. ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಕುರ್ತಾ-ಪೈಜಾಮಾ ಸೆಟ್‌ನಲ್ಲಿ ನೀಲಿ ಬಣ್ಣದ ಬಂಡಾನಾ ಮತ್ತು ಸನ್‌ಗ್ಲಾಸ್‌ನೊಂದಿಗೆ ಕಾಣಿಸಿಕೊಂಡರು. ರಾಜಮೌಳಿ ಸಾಂಪ್ರದಾಯಿಕವಾಗಿ ಬಿಳಿ ಧೋತಿ ಮತ್ತು ಶಾಲನ್ನು ಧರಿಸಿದ್ದರು ಮತ್ತು ರಮಾ ಕೆಂಪು ಸೀರೆ ಧರಿಸಿ ಮಿಂಚಿದರು.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಯಶ್ ಅವರ ಜೊತೆ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಯಶ್, ರಾಜಮೌಳಿ, ರಮಾ ಸಮಾರಂಭದಲ್ಲಿ ಪಾಲ್ಗೊಂಡರು ಮತ್ತು ಆವರಣದಿಂದ ಹೊರಡುವ ಮೊದಲು ಸ್ಫಟಿಕ ಶಿಲೆಯಿಂದ ಮಾಡಿದ ವಿಗ್ರಹಕ್ಕೆ ಪ್ರಾರ್ಥಿಸಿದರು. ಈ ದೇವಾಲಯವನ್ನು ಚಲನಚಿತ್ರ ನಿರ್ಮಾಪಕ ಸಾಯಿ ಕೊರ್ರಪಾಟಿ ನಿರ್ಮಿಸಿದ್ದಾರೆ.
ಯಶ್ ಮುಂದಿನ ಸಿನಿಮಾ
ಕೆಜಿಎಫ್ 2 ಬಳಿಕ ದೀರ್ಘಕಾಲ ಗ್ಯಾಪ್ ಪಡೆದುಕೊಂಡ ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದು, ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಮೂತೂನ್ ಖ್ಯಾತಿಯ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದ ಕೆಲಸ ನಡೆಯುತ್ತಿದ್ದು. ಉಳಿದ ತಾರಾಗಣ ಮತ್ತು ಸಿಬ್ಬಂದಿಯನ್ನು ಇನ್ನೂ ಘೋಷಿಸಬೇಕಾಗಿದೆ. 2025 ರಲ್ಲಿ ಟಾಕ್ಸಿಕ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಿಗ್ ಬಜೆಟ್ ಸಿನಿಮಾದಲ್ಲಿ ರಾಜಮೌಳಿ
ಆರ್ ಆರ್ ಆರ್ ಸಿನಿಮಾದ ಬಳಿಕ ನಿರ್ದೇಶಕ ರಾಜಮೌಳಿ ಸದ್ಯ ದೊಡ್ಡ ಬಜೆಟ್ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಪ್ರಸಾದ ಸಿನಿಮಾ ಕಥೆ ಬರೆದಿದ್ದು, ಮಹೇಶ್ ಬಾಬು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇಂಡಿಯಾನಾ ಜೋನ್ಸ್ ಮಾದರಿಯಲ್ಲೇ ಇರುವ ಈ ಸಾಹಸಮಯ ಸಿನಿಮಾವನ್ನು 2024ರ ಮಧ್ಯದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಚಿತ್ರದ ಪ್ರೀ-ಪ್ರೊಡಕ್ಷನ್ ಪ್ರಗತಿಯಲ್ಲಿದೆ ಮತ್ತು ಉಳಿದ ತಾರಾಗಣವನ್ನು ಇನ್ನೂ ಘೋಷಿಸಬೇಕಿದೆ. ಚಿತ್ರಕ್ಕೆ ಮಹಾರಾಜ ಎಂದು ಹೆಸರಿಡಲಾಗಿದೆ ಎಂದು ವದಂತಿಗಳಿವೆ, ಆದರೆ ನಿರ್ಮಾಪಕರು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.












Click it and Unblock the Notifications