ಹಂಪಿಯನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕು:ಯದುವೀರ ಒಡೆಯರ್

ಬಳ್ಳಾರಿ, ಫೆಬ್ರವರಿ 05: ಹಂಪಿ ಸ್ಮಾರಕಗಳ ರಕ್ಷಣೆಗೆ ಆಗ್ರಹಿಸಿ ಕಮಲಾಪುರ ಪಟ್ಟಣದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಕಚೇರಿ ಎದುರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆವಹಿಸಿ, ಎಲ್ಲಾ ಕಡೆಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಹಾಗೆಯೇ, ಹೆಚ್ಚಿನ ಸಿಬ್ಬಂದಿ ನೇಮಿಸಬೇಕು, ಕಲ್ಲಿನ ಕಂಬಗಳನ್ನು ಕೆಡವಿದ ಆರೋಪಿತರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪುರಾತತ್ವ ಇಲಾಖೆ ಉಪ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮೈಸೂರಿನ ಯುವರಾಜ ಯದುವೀರ ಒಡೆಯರ್ ಮತ್ತು ಆನೆಗೊಂದಿ ರಾಜ ಶ್ರೀಕೃಷ್ಣದೇವರಾಯ ಭಾಗಿಯಾಗಿದ್ದು ವಿಶೇಷ.

Yaduveer Wadiyar, Krishnadeva Raya join protest against vandalism at Hampi

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ಯುವರಾಜ ಯದುವೀರ ಶ್ರೀಕಂಠದತ್ತ ಒಡೆಯರ್, ಐತಿಹಾಸಿಕ ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಇರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ಐ) ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಮೈಸೂರಿನಲ್ಲೂ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ. ಎಎಸ್ ಐ ಅಧಿಕಾರಿಗಳು ನಿಗಾವಹಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Yaduveer Wadiyar, Krishnadeva Raya join protest against vandalism at Hampi

ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆ, ಜನ್ಮಭೂಮಿ ರಕ್ಷಣಾ ಪಡೆ, ವಿಜಯನಗರ ಅಂಗವಿಕಲರ ಸಂಘ ಮತ್ತು ಗಂಡುಗಲಿ ಕುಮಾರರಾಮ ಸೇನೆಯ ನೂರಾರು ಜನರು ಕಮಲಾಪುರದ ಡಾ.ಅಂಬೇಡ್ಕರ್ ವೃತ್ತದಿಂದ ಎಎಸ್ ಐ ಕಚೇರಿವರೆಗೆ ಪ್ರತಿಭಟನೆಯಲ್ಲಿ ತೆರಳಿ, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+