ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ವಿಮ್ಸ್‌ ದುರಂತ; ರೋಗಿಗಳ ಸಾವಿನ ಬಗ್ಗೆ ಆರೋಗ್ಯ ಸಚಿವರು ಹೇಳಿದ್ದೇನು?

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್‌ 18: ಬಳ್ಳಾರಿಯ ವಿಮ್ಸ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಸಚಿವ ಡಾ.ಕೆ.ಸುಧಾಕರ್ ಅವರು ಇಂದು ವಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿರುವ ಸ್ಥಳ, ವಿದ್ಯುತ್ ಪೂರೈಕೆ ಆಗುವ ಜನರೇಟರ್, ಎಂಐಸಿಯುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಆರೋಗ್ಯ ‌ಸಚಿವ ಡಾ.ಸುಧಾಕರ್‌ಗೆ ಸಚಿವ ಬಿ.ಶ್ರೀರಾಮುಲು, ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಾಲಪಾಟಿ, ಎಸ್‌ಪಿ ಸೈದುಲು ಅಡಾವತ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಡಾ.ಸುಜಾತಾ, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಸಾಥ್ ನೀಡಿದರು.

ಬಳ್ಳಾರಿ ವಿಮ್ಸ್‌ ದುರಂತ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವಬಳ್ಳಾರಿ ವಿಮ್ಸ್‌ ದುರಂತ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಸುಧಾಕರ್ ಅವರು, ಸೆಪ್ಟೆಂಬರ್‌ 14ರಂದು ಬೆಳಗ್ಗೆ 8:20ರಿಂದ 9:30ರವರೆಗೆ ವಿದ್ಯುತ್ ಕಡಿತ ಆಗಿರುವುದು ನಿಜ. ಆದರೆ ಅಂದು ವೆಂಟಿಲೇಟರ್‌ನಲ್ಲಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಅವರ ಸಾವಿಗೆ ವಿದ್ಯುತ್ ಕಡಿತ ಕಾರಣವಲ್ಲ ಎಂದರು.

ಸಾವು ಪ್ರಕರಣಗಳ ಬಗ್ಗೆ ಸಚಿವರು ಹೇಳಿದ್ದೇನು?
ಕಿಡ್ನಿ ವೈಫಲ್ಯದಿಂದ‌‌ ಬಳಲುತ್ತಿದ್ದ ಮೌಲಾಹುಸೇನ್ (35), ವಿಷಕಾರಿ‌ ಹಾವು ಕಡಿತದಿಂದ ವಿಮ್ಸ್‌ಗೆ ದಾಖಲಾಗಿದ್ದ ಚೆಟ್ಟೆಮ್ಮ(30) ಎನ್ನುವವರ ಆರೋಗ್ಯದ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೇ ಗಂಭೀರವಾಗಿತ್ತು. ಅವರಿಗೆ ಗುಣಮಟ್ಟದ‌ ಚಿಕಿತ್ಸೆ ನೀಡಿದಾಗಿಯೂ ಆರೋಗ್ಯದಲ್ಲಿ‌ ಸುಧಾರಣೆ ಆಗದೇ ಸಾವನ್ನಪ್ಪಿದ್ದಾರೆ ಅಂತಾ ವಿಮ್ಸ್‌ನ ಆಡಳಿತ ಮಂಡಳಿ ಮತ್ತು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.

Bellary VIMS Tragedy; Know What health minister Said about Patients Death

ಈ ಘಟನೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ತನಿಖೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ತನಿಖಾ ಸಮಿತಿಯೊಂದನ್ನು ರಚಿಸಿದೆ. ಸದರಿ ಸಮಿತಿ ಒಂದು ಬಾರಿ ಭೇಟಿ ನೀಡಿ ಪರಿಶೀಲಿಸಿ ಹೋಗಿದೆ. ಜೆಸ್ಕಾಂ ಎಂಜಿನಿಯರ್ ಒಬ್ಬರ ಅವಶ್ಯವಿದೆ ಎಂದು ಸಮಿತಿಯಲ್ಲಿ ತಿಳಿಸಿದ್ದರು. ಹಾಗಾಗಿ ಜೆಸ್ಕಾಂ ಎಂಜಿನಿಯರ್ ಒಬ್ಬರನ್ನು ಒದಗಿಸಲಾಗುವುದು ಎಂದರು.

ವಿಮ್ಸ್ ದುರಂತ: ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಎಂದ ಸಚಿವ ಸುಧಾಕರ್ವಿಮ್ಸ್ ದುರಂತ: ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಎಂದ ಸಚಿವ ಸುಧಾಕರ್

ಸಮಿತಿಯಿಂದ ಶೀಘ್ರ ವರದಿ ಸಲ್ಲಿಕೆ
ಸಮಿತಿಯು ಶೀಘ್ರ ವರದಿ ಸಲ್ಲಿಸಲಿದೆ‌ ಎಂದು ವಿವರಿಸಿದ ಅವರು, ತನಿಖಾ ಸಮಿತಿ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಮ್ಸ್‌ನಲ್ಲಿ ಉತ್ಕೃಷ್ಟ ಮಟ್ಟದ ಹಾಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗುವ ನಿಟ್ಟಿನಲ್ಲಿ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ತಜ್ಞ ವೈದ್ಯರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿಮ್ಸ್ ನಿರ್ದೇಶಕರ ನೇಮಕಾತಿಯು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವ ವಿಷಯದಲ್ಲಿ ಶೀಘ್ರವೇ ಬಿಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಮ್ಸ್ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಮ್ಸ್ ನಿರ್ದೇಶಕರಿಗೆ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

English summary
Health minister Dr. K Sudhakar visited VIMS hospital in Bellary to review the situation after 2 death cases reported recently from this hospital. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X