• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಪೇಟೆ: ಮೃತ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

By ವಿಜಯನಗರ ಪ್ರತಿನಿಧಿ
|

ವಿಜಯನಗರ, ಮೇ 27: ಕೊರೊನಾ ವೈರಸ್‌ನಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ.

ಬುಧವಾರ ಹೊಸಪೇಟೆ ನಗರದ ಹುಡಾ ಅಧ್ಯಕ್ಷ ಅಶೋಕ್ ಜೀರೇ 30 ಲಕ್ಷ ರೂ. ಪರಿಹಾರದ ಮೊತ್ತವನ್ನು ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ ನೀಡಿದರು. ಕಳೆದ ವರ್ಷ ಕೋವಿಡ್ ಕರ್ತವ್ಯದ ವೇಳೆ ಹೊಸಪೇಟೆಯ ಅಂಗನವಾಡಿಯ ಕಾರ್ಯಕರ್ತೆ ಮೃತಪಟ್ಟಿದ್ದರು.

ಹೊಸಪೇಟೆ ನಗರದ 15ನೇ ವಾರ್ಡ್‌ನ 2ನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶಾರದಾ ಎಂಬುವವರು ಕಳೆದ ವರ್ಷ ಕೊರೊನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದರು.

ರಾಜ್ಯ ಸರಕಾರ ಕರ್ತವ್ಯದ ವೇಳೆ ಕೊರೊನಾ ವಾರಿಯರ್ಸ್ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಅದರಂತೆ ಪರಿಹಾರವನ್ನು ಮೊತ್ತವನ್ನು ನೀಡಲಾಗಿದೆ.‌

ಈ ಸಂದರ್ಭದಲ್ಲಿ ಸಿಡಿಪಿಒ ಸಿಂಧೂ ಎಲಿಗಾರ್, ಸಚಿವ ಆನಂದ ಸಿಂಗ್ ಆಪ್ತ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್ ಇದ್ದರು.

English summary
Anganwadi activist's dead by coronavirus in hospete, Rs 30 Lakhs relief has been distributed Covid Warrior family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X