ಅಚ್ಚರಿ ಸುದ್ದಿ: ಹೊಸಪೇಟೆಯಲ್ಲಿ 9 ಬೆರಳುಳ್ಳ ಮಗು ಜನನ

ವಿಜಯನಗರ, ಮೇ 27: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ 9 ಬೆರಳುಳ್ಳ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿ ಅಚ್ಚರಿ‌ ಮೂಡಿಸಿದ್ದಾಳೆ.

ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ ಕೆಲ‌ ಸಮಯದವರೆಗೂ ನೋಡಿದ್ದಾರೆ. ಆದರೆ, ಹೆರಿಗೆಯಾಗುವುದಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ.

ವೈದ್ಯರು ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಿದ್ದು, ಗಂಡು ಮಗುವಿನ ಎಡಗಾಲಿಗೆ ಒಂಬತ್ತು (9) ಬೆರಳುಗಳಿವೆ. ಆದರೆ, ಬಲಗಾಲಿಗೆ ಐದು ಬೆರಳುಗಳಿವೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ತಾಯಿ ಹೊಸಪೇಟೆ ತಾಲೂಕಿನ‌ ನಿವಾಸಿಗಳಾಗಿದ್ದಾರೆ. ಆದರೆ, ತಾಯಿಯ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.

Vijayanagar: Baby Boy Was Born In Hosapete With 9 Fingers In Left Foot

ಗರ್ಭಿಣಿಯಾಗಿದ್ದಾಗ ಸ್ಕ್ಯಾನ್ ಮಾಡಿದಾಗ ಹೃದಯ ಬಡಿತ, ತಲೆ ಭಾಗ, ಕೈ ಕಾಲುಗಳ ಬೆಳವಣಿಗೆ ಬಗ್ಗೆ ಕಾಣಿಸುತ್ತವೆ. ಆದರೆ ಬೆರಳುಗಳ ಬಗ್ಗೆ ಕಾಣುವುದಿಲ್ಲ, ಜನನವಾದ ಬಳಿಕ ಗೊತ್ತಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಕೇಸ್, ಒಂಬತ್ತು ಬೆರಳುಳ್ಳ ಮಗು ಜನನವಾಗುವುದು ತೀರಾ ವಿರಳ ಎಂದು ವೈದ್ಯರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+