ಸಚಿವ ಆನಂದ ಸಿಂಗ್‌ಗೆ ಧನ್ಯವಾದ ಹೇಳಿದ ವಾಲ್ಮೀಕಿ ಪೀಠ ಸ್ವಾಮೀಜಿ

ಬಳ್ಳಾರಿ, ನವೆಂಬರ್ 23: ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆಯಿಂದ ಈ ಭಾಗ ಅಭಿವೃದ್ಧಿಯಾಗಲಿದೆ. ಈಗಾಗಲೇ ಜಿಲ್ಲೆ ರಚನೆಯ ಪ್ರಕ್ರಿಯೆ ಶೇಕಡಾ 95ರಷ್ಟು ಮುಗಿದಿದೆ. ಜಿಲ್ಲೆಗಾಗಿ ಶ್ರಮಿಸಿದ ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಅವರಿಗೆ ಅಭಿನಂದನೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ಹೊಸಪೇಟೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಚುನಾವಣೆ ನೀತಿ ಸಂಹಿತೆ ಇದೆ. ಹೀಗಾಗಿ ಮೀಸಲಾತಿ ಕುರಿತು ಮಾತನಾಡಲು ಬರುವುದಿಲ್ಲ. ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿಯನ್ನು ಡಿಸೆಂಬರ್ ಒಳಗೆ ನೀಡಲಾಗುವುದಾಗಿ ಸರ್ಕಾರ ತಿಳಿಸಿದೆ ಎಂದರು.‌

Ballari: Valmiki Gurupeeta Swamiji Thanked Anand Singh For Vijayanagar District Formation

ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟದ ಬಗ್ಗೆ ಸ್ವಾಮೀಜಿಗಳು ಪ್ರತಿಕ್ರಿಯೆ‌ ನೀಡಲು ನಿರಾಕರಿಸಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕುರಿತು ಮಾತನಾಡುವೆ. ಆದರೆ, ಬೇರೆ ವಿಚಾರದ ಕುರಿತು ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ನೂರು ಕ್ಷೇತ್ರಗಳಲ್ಲಿ ನಾಯಕರು ನಿರ್ಣಾಯಕರಾಗಿದ್ದಾರೆ. ಹೊಸಪೇಟೆ ಕ್ಷೇತ್ರ ಒಂದೇ ಅಲ್ಲ. ಚುನಾವಣೆ ಎಂದಾಗ ಹಣ ಮಾನದಂಡವಾಗುತ್ತದೆ. ಆರ್ಥಿಕವಾಗಿ ಸಬಲರು ಹಾಗೂ ಸಾಂಘಿಕ ಒಗ್ಗಟ್ಟು ಬೇಕಾಗುತ್ತದೆ. ಆದರೆ ಇತ್ತೀಚೆಗೆ ಈ ಅರಿವು ಸಮುದಾಯದಲ್ಲಿ ಮೂಡುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+