• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆ ಕಾರ್ಡ್ ಕೊಡಲು ಹೊರಟವರು ಸೇರಿದ್ದು ಮಾತ್ರ ಮಸಣ!

|
Google Oneindia Kannada News

ಬಳ್ಳಾರಿ, ಜೂನ್.08: ನವಜೀವನಕ್ಕೆ ಕಾಲಿರಿಸುವ ಸಂಭ್ರಮದಲ್ಲಿ ಮದುವೆ ಕಾರ್ಡ್ ಕೊಡಲು ಹೊರಟಿದ್ದ ಮದುಮಗ ಜಲಸಮಾಧಿ ಆಗಿರುವ ಹೃದಯ ವಿದ್ರಾವಕ ಘಟನೆಯೊಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಸೀಗನಹಳ್ಳಿಯಲ್ಲಿ ನಡೆದಿದೆ.

   ಚಿರಂಜೀವಿಯ ಅಂತಮ ದರ್ಶನ ಪಡೆದ ರವಿಚಂದ್ರನ್ ಕುಟುಂಬ | Chiranjeevi Sarja | Ravi chandran | Oneindia Kannada

   ತುಂಗಭದ್ರಾ ನದಿ ದಾಟುತ್ತಿದ್ದ ಸಂದರ್ಭದಲ್ಲಿ ತೆಪ್ಪ ಮಗುಚಿದ ಕಾರಣ ಸ್ನೇಹಿತನ ಜೊತೆಗೆ ವಿವಾಹ ಆಮಂತ್ರಣ ಪತ್ರ ನೀಡಲು ತೆರಳುತ್ತಿದ್ದ 26 ವರ್ಷದ ಫಕ್ರುದ್ದೀನ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇವರ ಜೊತೆಗೆ ತೆರಳುತ್ತಿದ್ದ 18 ವರ್ಷದ ಹೊನ್ನೂರ್ ಸಾಬ್ ಕೂಡಾ ನೀರುಪಾಲಾಗಿದ್ದಾರೆ.

    ಮತ್ತೊಂದು ಜುಬಿಲಿಯಂಟ್ ಆಗಲಿದೆಯಾ ಬಳ್ಳಾರಿಯ ಜಿಂದಾಲ್... ಮತ್ತೊಂದು ಜುಬಿಲಿಯಂಟ್ ಆಗಲಿದೆಯಾ ಬಳ್ಳಾರಿಯ ಜಿಂದಾಲ್...

   ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಸೀಗಹಳ್ಳಿ ಗ್ರಾಮದಿಂದ ಹೊರಟ ಇಬ್ಬರು ಸ್ನೇಹಿತರು ಕೊಪ್ಪಳದಲ್ಲಿ ಇರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು, ಇಬ್ಬರ ಸಾವಿಗೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

   ದೋಣಿ ಅಪಘಾತಕ್ಕೆ ಏನು ಕಾರಣ:

   ಬಳ್ಳಾರಿಯ ಸೀಗಹಳ್ಳಿ ಗ್ರಾಮದಿಂದ ಬೈಕ್ ನಲ್ಲಿ ಆಗಮಿಸಿದ ಫಕ್ರುದ್ದೀನ್ ಮತ್ತು ಹೊನ್ನೂರ್ ಸಾಬ್ ತುಂಗಭದ್ರತಾ ನದಿ ದಾಟುವುದಕ್ಕೆ ತೆಪ್ಪವನ್ನು ಏರುತ್ತಾರೆ. ಈ ವೇಳೆ ಭಾರದ ಬೈಕ್ ನ್ನು ಕೂಡಾ ತೆಪ್ಪದಲ್ಲಿ ಇಟ್ಟುಕೊಂಡು ನದಿ ದಾಟುವುದುಕ್ಕೆ ಪ್ರಯತ್ನಿಸುತ್ತಾರೆ. ಈ ವೇಳೆ ದೋಣಿಯ ಭಾರವನ್ನು ತಾಳಲಾರದೆ ತೆಪ್ಪವು ನದಿಯಲ್ಲಿ ಮಗುಚಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

   English summary
   Ballary: Two people have died in a boat accident in the Tungabhadra River.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X