ಪಾದಯಾತ್ರೆ ಹೊರಟ ತಿಪ್ಪೇಸ್ವಾಮಿ ಬೆಂಬಲಿಗರು
ಬಳ್ಳಾರಿ, ಏಪ್ರಿಲ್. 11 : ಮೊಳಕಾಲ್ಮೂರು ಶಾಸಕ ಎಸ್. ತಿಪ್ಪೇಸ್ವಾಮಿ ಅವರ ಬೆಂಬಲಿಗರು 25 ಬಸ್ಸುಗಳು, ಐದು ಕಾರುಗಳಲ್ಲಿ ಬುಧವಾರ ಸಂಜೆ 5.30ರ ಸುಮಾರಿಗೆ ಬಳ್ಳಾರಿಗೆ ಆಗಮಿಸಿದ್ದು, ಸಂಸದ, ನಿಯೋಜಿತ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಅಸಮಾಧಾನ ವ್ಯಕ್ತಪಡಿಸಲು ನಿರ್ಧರಿಸಿದ್ದರು. ಆದರೆ ಇವರ ಎಲ್ಲಾ ವಾಹನಗಳನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎಸ್ಪಿ ಸರ್ಕಲ್' ನಲ್ಲಿ ತಡೆದಿದ್ದಾರೆ.
ಪೊಲೀಸರ ಕ್ರಮ ವಿರೋಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಸ್. ತಿಪ್ಪೇಸ್ವಾಮಿ ಬೆಂಬಲಿಗರು ನಾವು ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಎಸ್. ತಿಪ್ಪೇಸ್ವಾಮಿ ಅವರಿಗೆ ಬಿಜೆಪಿಯ ಟಿಕೇಟ್ ಕೊಡಿಸಲು ಬಂದಿದ್ದರೆ ಪೊಲೀಸರು ಅನಗತ್ಯವಾಗಿ ನಮ್ಮನ್ನು ತಡೆದು, ಕಾನೂನು - ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲಿದ್ದಾರೆ ಎಂದು ಆರೋಪಿಸಿದರು.

ಕೊನೆಗೆ ಎಲ್ಲರೂ ವಾಹನಗಳನ್ನು ಬಿಟ್ಟು, ಪಾದಯಾತ್ರೆಯಲ್ಲಿ ಬಿ. ಶ್ರೀರಾಮುಲು ಮನೆಗೆ ತೆರಳಿದರು. ಬಿ. ಶ್ರೀರಾಮುಲು ಮನೆಯ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications