ಇನ್ಮುಂದೆ ಏನಿದ್ದರೂ ಸ್ವಚ್ಛ, ಪ್ರಾಮಾಣಿಕ ಆಡಳಿತ -ಶ್ರೀರಾಮುಲು

ಬಳ್ಳಾರಿ, ಜುಲೈ 26: "ಕಳೆದ 14 ತಿಂಗಳುಗಳಿಂದ ಇದ್ದ ಭ್ರಷ್ಟ ಸರ್ಕಾರ ಪತನವಾಗಿದೆ. ಇನ್ನೇನಿದ್ದರೂ ಸ್ವಚ್ಛ, ಪ್ರಾಮಾಣಿಕ ಆಡಳಿತ ನಡೆಯುತ್ತದೆ. ಸದನದಲ್ಲಿ ನಾವು ಗೆದ್ದಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಶಾಸಕ ಶ್ರೀರಾಮುಲು.

"ಯಡಿಯೂರಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಾನೂ ಅಲ್ಲಿಗೆ ಹೋಗುತ್ತಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ, ಸ್ವಚ್ಛ ಪ್ರಾಮಾಣಿಕ ಆಡಳಿತ, ಭದ್ರತೆ ನೀಡಲು ಬಿಎಸ್ವೈ ಸಿಎಂ ಆಗ್ತಾರೆ- 40 ವರ್ಷಗಳ‌ ಕಾಲ ರಾಜ್ಯಕ್ಕಾಗಿ ದುಡಿದಿದ್ದಾರೆ. ಅವರ ಶ್ರಮಕ್ಕೆ ಫಲ ಸಿಕ್ಕಿದೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ" ಎಂದು ಹಾರೈಸಿದರು.

ತಮಗೆ ಡಿಸಿಎಂ ಹುದ್ದೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಜನರು ನನ್ನನ್ನು ಗುರುತಿಸಿದ್ದಾರೆ. ನಾನು ಸ್ಥಾನಮಾನಕ್ಕಾಗಿ ದುಡಿಯೋನಲ್ಲ. ಪಕ್ಷಕ್ಕಾಗಿ ದುಡಿಯುವವನು. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ಜನರ ಭಾವನೆಗೆ ನಾನು ಬೆಲೆ ಕೊಡುವೆ" ಎಂದರು.

Sriramulu Reacts On New Bjp Government

ಮೂವರು ಶಾಸಕರ ಅನರ್ಹತೆ ವಿಚಾರದ ಕುರಿತು ಮಾತನಾಡುತ್ತಾ, "ಈ ವಿಷಯದಲ್ಲಿ ಪಕ್ಷಪಾತ ಆಗಿದೆ. ಇದು ಸರಿಯಲ್ಲ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕುತಂತ್ರದ ರಾಜಕಾರಣ ಮಾಡ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+