ಬಳ್ಳಾರಿಯಲ್ಲಿ ಶ್ರೀರಾಮುಲು ಬೆಂಬಲಿಗ ಬಂಡಿ ರಮೇಶ್ ಕೊಲೆ
ಬಳ್ಳಾರಿ ಬಿಜೆಪಿಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಬಂಡಿ ರಮೇಶ್ ಹತ್ಯೆ. ಬಿಜೆಪಿ ಸಂಸದ ಶ್ರೀರಾಮುಲು ಹಾಗೂ ಬಿಜೆಪಿ ನಾಯಕ ಸೋಮಶೇಖರ್ ರೆಡ್ಡಿಯ ಆಪ್ತರಾಗಿದ್ದ ಬಂಡಿ ರಮೇಶ್.
ಬಳ್ಳಾರಿ, ಜೂನ್ 22: ನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಬಂಡಿ ರಮೇಶ್ ಅವರನ್ನು ಕೊಲೆ ಮಾಡಲಾಗಿದೆ.
ನಗರದ ಹೊರವಲಯದಲ್ಲಿರುವ ಗುಗ್ಗರ ಹಟ್ಟಿ ಪ್ರಾಂತ್ಯದ ಪವನ್ ಡಾಬಾದಲ್ಲಿ ದುಷ್ಕರ್ಮಿಗಳು ಗುರುವಾರ ಮಧ್ಯಾಹ್ನ ರಮೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿದ್ದ ರಮೇಶ್, ಬಳ್ಳಾರಿಯ ಹಾಲಿ ಬಿಜೆಪಿ ಸಂಸದ ಶ್ರೀರಾಮುಲು ಹಾಗೂ ಬಿಜೆಪಿಯ ಮತ್ತೊಬ್ಬ ನಾಯಕ,ರಾಜ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸೋಮಶೇಖರ್ ರೆಡ್ಡಿಯವರ ಕಟ್ಟಾ ಬೆಂಬಲಿಗರಾಗಿದ್ದರು.
ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ರಮೇಶ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಹಾಗಾಗಿ, ಈ ಕೊಲೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications