ಗ್ರಾಮಕ್ಕೆ ಬಾರದಂತೆ ಕರೊನಾಮ್ಮಗೆ ಗ್ರಾಮಸ್ಥರ ವಿಶೇಷ ಪೂಜೆ!

ವಿಜಯನಗರ, ಮೇ 30; ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಗ್ರಾಮಸ್ಥರು ಕರೊನಾಮ್ಮನಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇಡೀ ಗ್ರಾಮದ ಜನರು ಭಕ್ತಿಯಿಂದ ಪೂಜೆ ಮಾಡಿ ಊರಾಚೆ ಇರುವ ಇರುವ ಬೇವಿನ ಮರದ ಬಳಿ ಬಿಟ್ಟು ಬಂದಿದ್ದಾರೆ.

ಈ‌ ಗ್ರಾಮದಲ್ಲಿ ಒಂದು ದಿನ‌ ಮುಂಚಿತವಾಗಿ ಎಲ್ಲ ಸೇರಿ‌ ಪೂಜೆ ಮಾಡುವ ಕುರಿತು ಡಂಗುರ ಸಾರಲಾಗಿತ್ತು. ಪ್ರತಿಯೊಂದು ಮನೆಯಿಂದ ಪೂಜೆ ಮಾಡಿ ಕರೊನಾಮ್ಮನನ್ನು ಊರಾಚೆಗೆ ಕಳುಹಿಸಿ ಕೊಡಬೇಕೆಂದು ಮಾಹಿತಿ ನೀಡಲಾಗಿತ್ತು.

ಗ್ರಾಮಸ್ಥರು ಬೆಳಗ್ಗೆಯಿಂದ ಮನೆಯನ್ನು ಶುಚಿಗೊಳಿಸಿ ಎಲ್ಲರೂ ಮಡಿ ಸ್ನಾನ ಮಾಡಿ ಶ್ರದ್ಧೆ-ಭಕ್ತಿಯಿಂದ ಪೂಜೆ ನೆರವೇರಿಸಿದರು. ಗ್ರಾಮಸ್ಥರು ಸಾಮೂಹಿಕವಾಗಿ ಸಂಕಲ್ಪ ತೊಟ್ಟು ಸಿಹಿ ತಿನಿಸುಗಳನ್ನು ಮಾಡಿ ಮೌನವ್ರತ ಆಚರಿಸಿದರು.

Special Pooja To Control Coronavirus Spread At Kotturu

ಬಳಿಕ ಗ್ರಾಮದ ಗಡಿರೇಖೆಯಲ್ಲಿ ಗುರುತಿಸಲಾದ ಬೇವಿನ ಮರದಡಿ ಉಡಿ ಪದಾರ್ಥ ಇಟ್ಟು, ಹಣ್ಣು, ಹೂ ಕಾಯಿ, ಸಿಹಿ ಅರ್ಪಿಸುವ ಮೂಲಕ ಕರೊನಾಮ್ಮನನ್ನು ಸಂತೃಪ್ತಿಗೊಳಿಸಿ, ನಮ್ಮೂರಿಂದ ಹೋಗಿ ಎಂದು ಪ್ರಾರ್ಥಿಸಿದ್ದಾರೆ.

ಕೊರೊನಾ ಮಾರಿಯಿಂದ ಮುಕ್ತಿಗೊಳಿಸಿರುವ ಮನೋ ಧೈರ್ಯದ ಆಚರಣೆ ಇದಾಗಿದೆ. ಈ‌ ಹಿಂದೆ ಪ್ಲೇಗ್, ಮಲೇರಿಯಾ, ಚಿಕನ್ ಗುನ್ಯ ಬಂದಾಗಲೂ ಈ ರೀತಿಯ ಆಚರಣೆಯನ್ನು ಗ್ರಾಮಸ್ಥರು ಮಾಡಿದ್ದರಂತೆ.

ಈ ಪೂಜೆಯಿಂದ ಕೊರೊನಾ ರೋಗ ಕಡಿಮೆಯಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಹೀಗಾಗಿ ಗ್ರಾಮದರೆಲ್ಲ ಸೇರಿ ಈ ರೀತಿಯ ಆಚರಣೆಯನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+