ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್
Recommended Video

ಬಳ್ಳಾರಿ, ನವೆಂಬರ್ 06: ಭಾರಿ ಜಿದ್ದಾ-ಜಿದ್ದಿನ ಕಣವಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿಯು ಭಾರಿ ಹೀನಾಯವಾಗಿ ಮುಗ್ಗರಿಸಿದೆ. ಕಾಂಗ್ರೆಸ್‌ನ ಉಗ್ರಪ್ಪ ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿಯಲ್ಲಿ ರಾಜಕೀಯದ ಮಾತಿನ ಸಮರಕ್ಕೆ ನಾಂದಿ ಹಾಡಿದ್ದ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಮಾಡಿರುವ ಟ್ವೀಟ್ ಬಿಜೆಪಿಯ ಗಾಯದ ಮೇಲೆ ಉಪ್ಪು ಸವರಿದಂತಿದೆ.
ಬಳ್ಳಾರಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ಬಳ್ಳಾರಿಯಲ್ಲಿ ನರಕಚತುರ್ದಶಿ ಅರ್ಥಪೂರ್ಣ ಆಚರಣೆ' ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಬಳ್ಳಾರಿಯಲ್ಲಿ ರಾಕ್ಷಸಿಗೆ ಪರಾಭವ ಆಗಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಟ್ವೀಟ್ ಮೂಲಕ ತಿವಿದಿರುವ ಸಿದ್ದರಾಮಯ್ಯ, ನಾಡಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಹ ಕೋರಿದ್ದಾರೆ.
|
ಜನಾರ್ದನ ರೆಡ್ಡಿ ಗುರಿಯಾಗಿಸಿ ಟ್ವೀಟ್
ಜನಾರ್ದನ ರೆಡ್ಡಿ ಅವರ ವಿರದ್ಧ ಕೂಡ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಳ್ಳಾರಿಯ ಜನತಾ ಜನಾರ್ದನರಿಗೆ ಧನ್ಯವಾದಗಳು, 'ಜನಾರ್ದನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ', ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಸಿದ್ದರಾಮಯ್ಯ ರೆಡ್ಡಿ ನಡುವೆ ಮಾತಿನ ಸಮರ
ಮತದಾನಕ್ಕೂ ಮುಂಚೆ ಸಿದ್ದರಾಮಯ್ಯ-ಶ್ರೀರಾಮುಲು-ಜನಾರ್ದನ ರೆಡ್ಡಿ ಮಧ್ಯೆ ಭಾರಿ ಮಾತಿನ ಸಮರ ನಡೆದಿತ್ತು. ಸಿದ್ದರಾಮಯ್ಯ ಅವರು ಮಾಡಿದ ಪಾಪದಿಂದಲೇ ಅವರ ಮಗ ಸತ್ತಿದ್ದು ಎಂಬರ್ಥದ ಮಾತನ್ನು ಜನಾರ್ದನ ರೆಡ್ಡಿ ಆಡಿದ್ದರು. ಇದು ಭಾರಿ ವಿವಾದ ಸೃಷ್ಠಿಸಿತ್ತು. ರೆಡ್ಡಿ ಮಾತಿಗೆ ಪ್ರೌಢ ಉತ್ತರ ನೀಡಿದ್ದ ಸಿದ್ದರಾಮಯ್ಯ 'ರೆಡ್ಡಿ ಮಾಡಿದ ಪಾಪಕ್ಕೆ ದೇವರು ಅವರ ಮಕ್ಕಳಿಗೆ ಶಿಕ್ಷೆ ನೀಡದೇ ಇರಲಿ' ಎಂದು ಟ್ವೀಟ್ ಮಾಡಿದ್ದರು.
|
ಜಮಖಂಡಿ ಬಗ್ಗೆ ಸಿದ್ದರಾಮಯ್ಯ ಟ್ವೀಟ್
ಮತ್ತೊಂದು ಟ್ವೀಟ್‌ನಲ್ಲಿ ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರ ವಿಜಯದ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಆನಂದ್ ನ್ಯಾಮಗೌಡ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಿದ್ದರಾಮಯ್ಯ ಕ್ಷೇತ್ರದ ನೆರೆಯ ಕ್ಷೇತ್ರವೇ ಆಗಿತ್ತು.
|
ಆನಂದ್ ನ್ಯಾಮಗೌಡ ಗೆಲ್ಲಿಸಿದವರಿಗೆ ಅಭಿನಂದನೆ
ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿರುವ ಆನಂದ ನ್ಯಾಮಗೌಡ ಅವರಿಗೆ ಅಭಿನಂದನೆಗಳು. ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ನಮ್ಮ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಗಳು, ಎಂದು ಹೇಳಿದ್ದಾರೆ.












Click it and Unblock the Notifications