ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಲಪಾಟಿ ಪರಿಚಯ
ಬಳ್ಳಾರಿ, ಜನವರಿ 11: ಬಳ್ಳಾರಿಯ ನೂತನ ಜಿಲ್ಲಾಧಿಕಾರಿಯಾಗಿ ಪವನಕುಮಾರ್ ಮಲಪಾಟಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದರು.
ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಎಸ್. ಎಸ್. ನಕುಲ್ ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಸೋಮವಾರ ನಿರ್ಗಮಿತ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ನೂತನ ಜಿಲ್ಲಾಧಿಕಾರಿ ಪವನಕುಮಾರ್ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಕುಲ್ ಅವರ ಬೀಳ್ಕೊಡುಗೆ ಹಾಗೂ ಪವನಕುಮಾರ್ ಮಲಪಾಟಿ ಅವರ ಸ್ವಾಗತ ಸಮಾರಂಭ ಸಂಜೆ 5:15ಕ್ಕೆ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ನಡೆಯಲಿದೆ.

ಪವನಕುಮಾರ್ ಪರಿಚಯ; ಪವನಕುಮಾರ್ ಮಲಪಾಟಿ 2012ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ವಾಣಿಜ್ಯ ತೆರಿಗೆಗಳ (ಜಾರಿ) ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಪಾಟಿ ಅವರು ಈ ಹಿಂದೆ ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.
ಪವನಕುಮಾರ್ ಪರಿಚಯ; ಪವನಕುಮಾರ್ ಮಲಪಾಟಿ 2012ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ವಾಣಿಜ್ಯ ತೆರಿಗೆಗಳ (ಜಾರಿ) ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಪಾಟಿ ಅವರು ಈ ಹಿಂದೆ ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.
ಕೇಂದ್ರ ಸೇವೆಗೆ ನಕುಲ್; ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಎಸ್. ಎಸ್. ನಕುಲ್ ಕೇಂದ್ರ ಸೇವೆಗೆ ತೆರಳುತ್ತಿದ್ದಾರೆ. ಎಸ್. ಎಸ್. ನಕುಲ್ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರು. ತಂದೆ ಎಸ್. ಕೆ. ಸತೀಶ್ ಮತ್ತು ತಾಯಿ ಶೋಭಾ.
4/12/1983ರಲ್ಲಿ ಜನಿಸಿದ ನಕುಲ್, ಬಿಇ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) ಪದವಿಯನ್ನು ಪಡೆದಿದ್ದಾರೆ. 2010ನೇ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿಯಾದ ನಕುಲ್, ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ 31ನೇ rank ಪಡೆದು ಕರ್ನಾಟಕದಲ್ಲಿಯೇ ಮೊದಲ ಸ್ಥಾನಗಳಿಸಿದ್ದಾರೆ.











Click it and Unblock the Notifications