ಬಳ್ಳಾರಿ ಉಪ ಚುನಾವಣೆ : ಪ್ರಚಾರದ ನಡುವೆ ಡಿಕೆಶಿ ಶಾಪಿಂಗ್!

ಬಳ್ಳಾರಿ, ಅಕ್ಟೋಬರ್ 25 : ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣಾ ಪ್ರಚಾರದ ನಡುವೆಯೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಶಾಪಿಂಗ್ ಮಾಡಿದರು.

ಗುರುವಾರ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯ 13ನೇ ವಾರ್ಡ್‌ನ ಮಿಲ್ಲರ್ ಪೇಟೆಯಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಜೀನ್ಸ್ ಪ್ಯಾಂಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ನಾಲ್ಕು ಕಾಟನ್ ಜೀನ್ಸ್ ಪ್ಯಾಂಟ್ ಖರೀದಿಸಿದರು.

ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಜೆ.ಶಾಂತ, ಕಾಂಗ್ರೆಸ್‌ನಿಂದ ವಿ.ಎಸ್.ಉಗ್ರಪ್ಪ ಅಭ್ಯರ್ಥಿಯಾಗಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್ ಬಳ್ಳಾರಿ ಉಪ ಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿದೆ. ಡಿ.ಕೆ.ಶಿವಕುಮಾರ್ ಮತ್ತು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರ ಪ್ರತಿಷ್ಠೆ ಈ ಉಪ ಚುನಾವಣೆಯಲ್ಲಿ ಅಡಗಿದೆ. ಯಾರಿಗೆ ಗೆಲುವಾಗಲಿದೆ? ಎಂದು ಕಾದು ನೋಡಬೇಕಾಗಿದೆ....

ಜೀನ್ಸ್ ತಯಾರಿಕಾ ಘಟಕಕ್ಕೆ ಭೇಟಿ

ಜೀನ್ಸ್ ತಯಾರಿಕಾ ಘಟಕಕ್ಕೆ ಭೇಟಿ

ಗುರುವಾರ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯ 13ನೇ ವಾರ್ಡ್‌ನ ಮಿಲ್ಲರ್ ಪೇಟೆಯಲ್ಲಿ ಉಪ ಚುನಾವಣೆ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಜೀನ್ಸ್ ಪ್ಯಾಂಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು, 5 ಕಾಟನ್ ಜೀನ್ಸ್ ಪ್ಯಾಂಟ್ ಖರೀದಿಸಿದರು.

5000 ರೂ. ಹಣ

5000 ರೂ. ಹಣ

ಜೀನ್ಸ್ ಪ್ಯಾಂಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಜೀನ್ಸ್ ಪ್ಯಾಂಟ್ ತಯಾರಿಕೆ ಬಗ್ಗೆ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಒಂದು ಜೀನ್ಸ್‌ಗೆ 500 ರೂ. ಎಂದು ಘಟಕದ ಉದ್ಯೋಗಿಗಳು ಮಾಹಿತಿ ನೀಡಿದರು. 5 ಜೀನ್ಸ್ ಖರೀದಿ ಮಾಡಿದ ಅವರು 5000 ರೂ. ನೀಡಿದರು.

ನಮ್ಮ ನಡುವಿನ ಪ್ರತಿಷ್ಠೆ ಅಲ್ಲ

ನಮ್ಮ ನಡುವಿನ ಪ್ರತಿಷ್ಠೆ ಅಲ್ಲ

ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ಬಳ್ಳಾರಿ ಲೋಕಸಭಾ ಉಪ ಚುನಾವಣೆ ನನ್ನ ಮತ್ತು ಬಿ.ಶ್ರೀರಾಮುಲು ಅವರ ನಡುವಿನ ಪ್ರತಿಷ್ಠೆಯಲ್ಲ. ಶ್ರೀರಾಮುಲು ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಅದಕ್ಕೆ ಸದಾ ನನ್ನನ್ನು ಟೀಕಿಸುತ್ತಾರೆ' ಎಂದು ಹೇಳಿದರು.

ಶ್ರೀರಾಮುಲು ಅವರು ದೊಡ್ಡವರು

ಶ್ರೀರಾಮುಲು ಅವರು ದೊಡ್ಡವರು

'ವಾಲ್ಮೀಕಿ ಸಮುದಾಯವನ್ನು ತುಳಿಯಲು ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಬಂದಿದ್ದಾರೆ. ಅವರು ರಾಜ್ಯ ಸಚಿವರೇ ಇರಬಹುದು. ಆದರೆ, ನಮ್ಮ ಕ್ಷೇತ್ರದಲ್ಲಿ ನಮಗೇ ಗೆಲುವು' ಎಂಬ ಬಿ.ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಅಣ್ಣಾ ಶ್ರೀರಾಮುಲು ಅವರು ದೊಡ್ಡವರು, ನಾವೆಲ್ಲರೂ ಕಾರ್ಯಕರ್ತರು ಅಷ್ಟೇ' ಎಂದು ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+