ಇಟಲಿಯಲ್ಲಿ ಸಿಲುಕಿಕೊಂಡಿದ್ದ ಸಚಿವ ಆನಂದ್ ಸಿಂಗ್ ಪುತ್ರಿ ಆಗಮನ
ಬಳ್ಳಾರಿ, ಮಾರ್ಚ್ 18: ಇಟಲಿಯ ರೋಮ್ ನಗರದಲ್ಲಿ ಸಿಲುಕಿಕೊಂಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಪುತ್ರಿ ಇಂದು ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸಿದ್ದಾಳೆ.
ಕರ್ನಾಟಕದ 150 ವಿದ್ಯಾರ್ಥಿಗಳು ಸೇರಿದಂತೆ 445 ಜನರು ಇಟಲಿಯಲ್ಲಿ ಸಿಲುಕಿಕೊಂಡಿದ್ದರು. ಕೊರೊನಾ ಪರೀಕ್ಷೆಯ ನೆಗಟಿವ್ ಸರ್ಟಿಫಿಕೇಟ್ ಕೊಡದೇ ಏರ್ ಇಂಡಿಯಾದವರು ವಿಮಾನ ಹತ್ತಿಸಿಕೊಳ್ಳಲು ಬಿಟ್ಟಿರಲಿಲ್ಲ.
ಇಂದು ಅಗಮಿಸಿದ ಆನಂದ್ ಸಿಂಗ್ ಪುತ್ರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆನಂದ್ ಸಿಂಗ್ ಪುತ್ರಿಯ ಜೊತೆಯಲ್ಲಿ ಕರ್ನಾಟಕದ 15 ಜನ ವಿದ್ಯಾರ್ಥಿಗಳು ಬಂದಿದ್ದಾರೆ.

ಇಟಲಿಯಿಂದ ಬಂದಿರುವ ಎಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದ್ದು, 15 ಜನರಲ್ಲಿ ಎಲ್ಲರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ. ನೆಗಟಿವ್ ಬಂದಿದ್ದರೂ ಬೆಂಗಳೂರಿನ ಹೋಟೆಲ್ ಒಂದರಲ್ಲಿ 15 ಜನರನ್ನು ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ.












Click it and Unblock the Notifications