ಒಂದೇ ಸೀರೆಗೆ ನೇಣಿಗೆ ಬಿದ್ದ ಸ್ಥಿತಿಯಲ್ಲಿ ವಿವಾಹಿತೆ, ಆಕೆ ಪ್ರಿಯಕರ ಪತ್ತೆ
ಕೂಡ್ಲಿಗಿ (ಬಳ್ಳಾರಿ), ಅಕ್ಟೋಬರ್ 2: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿರತಗುಂಡಿ ಗ್ರಾಮದಲ್ಲಿ ವಿವಾಹಿತೆಯೊಬ್ಬಳು ತನ್ನ ಪ್ರಿಯಕರನ ಜತೆಗೆ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇಬ್ಬರೂ ಮರಕ್ಕೆ ನೇಣು ಹಾಕಿಕೊಂಡಂತೆ ಕಂಡುಬಂದಿದ್ದು, ಗ್ರಾಮಸ್ಥರು ವಿವಿಧ ರೀತಿಯಲ್ಲಿ ಅನುಮಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಶೋಭಿತಾ ಹಾಗೂ ತಿಪ್ಪೇಸ್ವಾಮಿ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದು, ಒಂದೇ ಸೀರೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಇತ್ತು. ಮದುವೆ ಆದ ನಂತರವೂ ಶೋಭಿತಾ ತನ್ನ ಹಳೆ ಪ್ರೀತಿಯನ್ನು ಮರೆಯದೆ ತಿಪ್ಪೇಸ್ವಾಮಿ ಜತೆಗಿನ ಸಂಬಂಧ ಮುಂದುವರಿಸಿದ್ದಳು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇನ್ನು ಇವರಿಬ್ಬರ ಮಧ್ಯೆ ಇದ್ದ ಸಂಬಂಧ ಗೊತ್ತಾಗಿದ್ದರಿಂದಲೇ ಕೊಲೆ ಮಾಡಿ, ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳನ್ನು ನೇತು ಹಾಕಲಾಗಿದೆ ಎಂದು ಆರೋಪ ಮಾಡುವವರೂ ಇದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications