ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಬುಲಾಲ್ ದುಡ್ಡು ಎಣಿಸುವಷ್ಟರಲ್ಲಿ ಸುಸ್ತೋ ಸುಸ್ತು

By ರೋಹಿಣಿಜಿ.ಎಂ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಏ.14: ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂಥ ಭಾರಿ ಚುನಾವಣಾ ಅಕ್ರಮವನ್ನು ಪತ್ತೆ ಹಚ್ಚಿದ ಚುನಾವಣಾ ಆಯೋಗ ಬಳ್ಳಾರಿ ಚೋರ್ ಬಾಬುಲಾಲ್ ಮನೆಯಲ್ಲಿ ಶೋಧಕಾರ್ಯ ಮುಂದುವರೆಸಿದೆ.

ಬಳ್ಳಾರಿ ಡಿಸಿ ಅಮ್ಲಾನ್ ಬಿಸ್ವಾಸ್ ಅವರು ಸುದ್ದಿಗಾರರ ಜತೆ ಸೋಮವಾರ ಮಾತನಾಡಿ, ಸುಮಾರು 5-6 ಬ್ಯಾಂಕ್ ಗಳಲ್ಲಿ ಹಣ ಇಟ್ಟಿರುವುದು ಪತ್ತೆಯಾಗಿದೆ. ಕಡತಗಳ ಪರಿಶೀಲನೆ ಮುಂದುವರೆದಿದೆ. ಶುಕ್ರವಾರ ಸಿಕ್ಕ ಹಣ ಎಣಿಸಲು ಸುಮಾರು 8 ತಾಸು ಬೇಕಾಯಿತು ಎಂದಿದ್ದಾರೆ.

ಇದರ ಜತೆಗೆ ಸಹಾಯಕ ಆಯುಕ್ತ ಅನಿರುದ್ಧ ಶ್ರವಣ್ ನೇತೃತ್ವದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಭಾನುವಾರ ಮಧ್ಯಾಹ್ನದಿಂದ ಇವರ ಮನೆಗೆ ತೆರಳಿ ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. 35 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಉಳಿತಾಯ ಬಾಂಡ್ ಗಳನ್ನು ಪತ್ತೆ ಮಾಡಿದ್ದಾರೆ. ಶೋಧ ಮುಂದುವರೆದಿದೆ. ಗೋಡಾನ್ ತೆರೆಯಬೇಕಾಗಿದೆ ಎಂದು ತಿಳಿದು ಬಂದಿದೆ.

LS polls: EC raids Sriramulu's aides house, recovers Rs 45 crore

ಚುನಾವಣಾ ಆಯೋಗದ ಅಧಿಕಾರಿಗಳು, ಐಟಿ ಅಧಿಕಾರಿಗಳು ಬಾಬುಲಾಲ್ ಪರಶುರಾಮ ಪೂರಿಯಾ ಅವರ ನಿವಾಸ ಹಾಗೂ ಕಚೇರಿಯಲ್ಲಿದ್ದ 34.24 ಕೋಟಿ ರು ಮೌಲ್ಯದ ಕಿಸಾನ್ ಪತ್ರ ವಶ ಪಡಿಸಿಕೊಂಡಿದ್ದಾರೆ.

ಇದಾದ ಮೇಲೆ ಗಣಿ ಹಗರಣದಲ್ಲಿ ಜೈಲು ಸೇರಿರುವ ಹೊಸಪೇಟೆ ಶಾಸಕ ಅನಂದ್ ಸಿಂಗ್ ಅವರ ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ.

ಲಾಲ್ ನಿವಾಸದ ನೆಲಮಾಳಿಗೆ,ನೀರಿನ ಟ್ಯಾಂಕ್ ನಲ್ಲೂ ಹಣ ಇಟ್ಟಿರುವ ಶಂಕೆ ವ್ಯಕ್ತವಾಗಿದೆ ಮತ್ತಿತ್ತರ ಕಡೆಗಳಲ್ಲಿ ಇಟ್ಟಿರುವ ಹಣ ಪತ್ತೆಗೆ ಹುಡುಕಾಟ ಮುಂದುವರಿದಿದೆ. ಮನೆಯಲ್ಲಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ.

ಶುಕ್ರವಾರ ಬಳ್ಳಾರಿಯ ಗಣೇಶ ಮಂದಿರ ಬಡವಾಣೆಯಲ್ಲಿ ಬಾಬೂಲಾಲ್ ಮನೆಯಲ್ಲಿ ಸಿಕ್ಕಿರುವ ನಗದು/ ಸರಕು ವಿವರ ಹೀಗಿದೆ: 9 ಕೋಟಿ ನಗದು, 9 ಕೋಟಿ ರು ಮೌಲ್ಯದ NSC bonds, 9 ಕೋಟಿ ರೂ ಮೌಲ್ಯದ ಚೆಕ್, ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರ...ಇತ್ಯಾದಿ.

English summary
The Election Commission officials are conducting raids across Bellary district. They have already recovered cash, cheques and saving certificates worth Rs 45 crore from a local trader called Babulal alias Chor Babulal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X