• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸಿದ್ಧವಾಗುತ್ತಿದೆ- ಸುಧಾಕರ್

|

ಬಳ್ಳಾರಿ, ಜೂನ್ 13: ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸಿದ್ಧವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಕರ್ನಾಟಕದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆಯ ನಂತರ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿವೆ. ಮಾರ್ಚ್‌, ಏಪ್ರಿಲ್‌ ತಿಂಗಳಿಗಿಂತ ಜೂನ್‌ ತಿಂಗಳಿನಲ್ಲಿ ಕೊರೊನಾ ಕೇಸ್‌ಗಳು ಜಾಸ್ತಿಯಾಗಿವೆ. ಆದರೆ, ಜೂನ್‌ ಹಾಗೂ ಜುಲೈನಲ್ಲಿ ಇದೇ ರೀತಿ ಕೇಸ್‌ಗಳು ಮುಂದುವರೆಯಲಿದ್ದು, ಆಗಸ್ಟ್‌ 15 ನಂತರ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದು ಸುಧಾಕರ್ ಹೇಳಿದ್ದಾರೆ.

18 ದಿನ ವೆಂಟಿಲೇಟರ್‌ನಲ್ಲಿದ್ದ 4 ತಿಂಗಳ ಮಗು ಕೊರೊನಾ ಸೋಂಕಿನಿಂದ ಗುಣಮುಖ

ತಜ್ಞರು ಆಗಸ್ಟ್‌ 15 ನಂತರ ರಾಜ್ಯದಲ್ಲಿ ಕೊರೊನಾ ಕೇಸ್‌ಗಳು ಸಂಖ್ಯೆ ಹೆಚ್ಚಾಗಲಿದೆ ಎಂದು ಉಹಿಸಿದ್ದು, ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆಯಾಗಿದೆ. 3185 ಸಕ್ರಿಯ ಪ್ರಕರಣಗಳು ಇವೆ. 72 ಮಂದಿ ಈವರೆಗೆ ಕೊರೊನಾಗೆ ಮೃತಪಟ್ಟಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ಒಂದೇ ದಿನದಲ್ಲಿ 11,458 ಪ್ರಕರಣ ದಾಖಲಾಗಿವೆ. ಇದರಲ್ಲಿ 145779 ಸಕ್ರಿಯ ಪ್ರಕರಣಗಳು ಇವೆ. ಒಂದೇ ದಿನದಲ್ಲಿ 386 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 8884 ಮಂದಿ ಸಾವನ್ನಪ್ಪಿದ್ದಾರೆ.

English summary
Karnataka preparing to face worst situation says Minister K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X