PM Narendra Modi: ವಿಜಯನಗರ ಸಾಮ್ರಾಜ್ಯವನ್ನು ಪ್ರಧಾನಿ ಮೋದಿ ಕನ್ನಡದಲ್ಲಿ ವರ್ಣಿಸಿದ್ದು ಹೀಗೆ
ಬಳ್ಳಾರಿ, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ಹೊಸಪೇಟೆ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವೈಭವ ಶಾಲಿ ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು ಎನ್ನುವ ಮೂಲಕ ಕನ್ನಡದಲ್ಲೇ ಭಾಷಣವನ್ನು ಪ್ರಾರಂಭಿಸಿದರು.
ಹಂಪಿ ವಿರೂಪಾಕ್ಷ, ಉಗ್ರ ನರಸಿಂಹ ಸ್ವಾಮಿ, ಹುಲಿಗೆಮ್ಮ ದೇವಿಗೆ ಪ್ರಣಾಮ. ಇಂದೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದ ನಿಷೇಧ ಮಾಡುವ ಭರವಸೆ ನೀಡಿದ್ದು, ಇದು ದೌರ್ಬಗ್ಯ ಆಗಿದೆ. ಮೊದಲು ಶ್ರೀರಾಮನನ್ನು ಬಂಧಿಸಿ ಇಟ್ಟಿದ್ದರು. ಶ್ರೀರಾಮ ಹಾಗೂ ಹನುಮಂತನನ್ನು ಕಂಡರೇ ಕಾಂಗ್ರೆಸ್‌ಗೆ ಆಗಲ್ಲ. ಈಗ ಅವರಿಗೆ ಜೈ ಭಜರಂಗಿ ಎನ್ನುವ ಜನರಿಂದ ಸಮಸ್ಯೆ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುವುದು ನಮ್ಮ ಸಂಕಲ್ಪವಾಗಿದೆ. ಸಂಕಲ್ಪಕ್ಕೆ ಪ್ರಭು ಹನುಮಾನ್ ಆಶೀರ್ವಾದ ಕೇಳಲು ಬಂದಿದ್ದೇವೆ. ಅಲ್ಲದೆ ಬಿಜೆಪಿ ಪ್ರಣಾಳಿಕೆ ಅಭಿವೃದ್ಧಿ ಪೂರಕ ಭರವಸೆ ನೀಡಿದೆ. ಯಾವುದೇ ಕಾರಣಕ್ಕೆ ಕರ್ನಾಟಕ ಘನತೆ, ಮಾನ ಮಾರ್ಯಾದೆಗೆ ಧಕ್ಕೆ ಬರದ ರೀತಿಯಲ್ಲಿ ನಾವು ನಡೆದುಕೊಳ್ಳುತ್ತೇವೆ ಎಂದರು.
ಹಂಪಿಯು ಭಾರತ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್ ಗುಲಾಮರ ಗಿರಿಯ ಮಾನಸಿಕತೆಯಿಂದ ಕೂಡಿದೆ. ಕಾಂಗ್ರೆಸ್ ಸರರ್ಕಾರ ಹಂಪಿಯ ಇತಿಹಾಸ, ಪರಂಪರೆಗೆ ಮಹತ್ವ ಕೊಡಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಹಂಪಿ ರಥದ ಚಿತ್ರವನ್ನು 50 ರೂಪಾಯಿ ನೋಟ್ ಮೇಲೆ ಮುದ್ರಿಸಿದ್ದೇವೆ. ಕೇಂದ್ರ ಸ್ವದೇಶಿ ದರ್ಶನ ಯೋಜನೆಯಲ್ಲಿ ಹಂಪಿ ಸೇರ್ಪಡೆ ಮಾಡಿದ್ದೇವೆ. ಪ್ರವಾಸಿ ತಾಣಗಳ ಯೋಜನೆಯಲ್ಲಿ ಹಂಪಿ, ಬದಾಮಿ, ಪಟ್ಟದಕಲ್ಲು, ವಿಜಯಪುರ ಸೇರಿದೆ ಎಂದರು.
ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಬಲ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಇದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಸಾಥ್ ಕೊಟ್ಟಿದೆ. ಈ ಮೂಲಕ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಅಲ್ಲದೆ ಪ್ರಧಾನಿ ಫಸಲ್ ವಿಮೆಯ ಸೌಲಭ್ಯ ನೀಡಲಾಗಿದ್ದು, ಇದು ರೈತರಿಗೆ ಸುರಕ್ಷಾ ಕವಚದಂತೆ ಕೆಲಸ ಮಾಡಿದೆ. 11 ಕೋಟಿ ರೈತರು ಈ ಯೋಜನೆಯ ಫಲವನ್ನು ಪಡೆದುಕೊಂಡಿದ್ದಾರೆ.
ಈ ಯೋಜನೆ ಪಡೆದುಕೊಂಡವರಲ್ಲಿ ಶೇಕಡಾ 70ರಷ್ಟು ಜನ ಎಸ್‌ಸಿ, ಎಸ್‌ಟಿ, ಓಬಿಸಿ ಸಮುದಾಯದ ರೈತರು ಆಗಿದ್ದಾರೆ. 1.30 ಲಕ್ಷ ಕೋಟಿ ಹಣ ಪರಿಹಾರದ ರೂಪದಲ್ಲಿ ಸಿಕ್ಕಿದೆ. 11 ಸಾವಿರ ಕೋಟಿ ರೈತರಿಗೆ ಪಿಎಂ ಸನ್ಮಾನ್ ಯೋಜನೆ ನೀಡಲಾಗಿದೆ. ಇದರಲ್ಲಿ ಶೇಕಡಾ 60ರಷ್ಟು ರೈತರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. 2.5 ಲಕ್ಷ ಕೋಟಿ ರೂಪಾಯಿ ಹಣ ರೈತರಿಗೆ ನೀಡಿದ್ದೇನೆ. ಒಟ್ಟು 1,800 ಕೋಟಿ ಹಣವನ್ನು ರಾಜ್ಯದ ರೈತರಿಗೆ ನೀಡಲಾಗಿದೆ.
ವಿಜಯನಗರ ಸಾಮ್ರಾಜ್ಯ ಒಂದು ಇತಿಹಾಸ ಆಗಿದೆ. ಈ ಮೂಲಕ ಅದು ದೇಶಕ್ಕೆ ಗೌರವ ತಂದುಕೊಟ್ಟಿದೆ. ಪುರಾಣದಲ್ಲಿಯೂ ವಿಜಯನಗರ ಜಿಲ್ಲೆಯ ಉಲ್ಲೇಖವಿದೆ. ಶ್ರೀಕೃಷ್ಣ ದೇವರಾಯ ಹಲವು ದೇಶಗಳ ಜೊತೆಗ ನಿಕಟ ಸಂಪರ್ಕ ಹೊಂದಿದ್ದರು. ಭಾರತ ಇಂದು ವಿಜಯನಗರ ಸಾಮ್ರಾಜ್ಯ ಗೌರವದಿಂದ ಪ್ರೇರಿತರಾಗಿ ಅದೇ ಹಾದಿಯಲ್ಲಿ ನಡೆಯುತ್ತಿದೆ ಎಂದರು.
ಇದು ಪುರಾತನ, ಅದ್ಭುತ ಜಿಲ್ಲೆಯಾಗಿದೆ. ವಿಜಯನಗರದ ಮತ್ತೊಂದು ವಿಶೇಷ ಅಂದರೆ ಇದು ರಾಜ್ಯದ ಯುವಕರ ಜಿಲ್ಲೆ ಆಗಿದೆ. ವಿಜಯನಗರ ಜಿಲ್ಲೆಯನ್ನೂ ಸಹ ಬಿಜೆಪಿ ಸರ್ಕಾರ ಮಾಡಿದೆ. ಆದ್ದರಿಂದ ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಘೋಷಣೆ ಕೂಗಿದರು.
ಜಿಲ್ಲೆಯ ಘೋಷಣೆಯಾದ ಅಭಿವೃದ್ಧಿ ಕೆಲಸಗಳು ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರದ ಹತ್ತಾರು ವರ್ಷ ಆಡಳಿತದಲ್ಲಿ ನಗರ, ಹಳ್ಳಿಗಳ ನಡುವೆ ಕಂದಕ ನಿರ್ಮಾಣ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಇದೀಗ ಗ್ರಾಮಗಳಲ್ಲಿಯೂ ನಗರದಲ್ಲಿ ಸಿಗುವ ಸೌಲಭ್ಯಗಳನ್ನು ಒಗಿಸುತ್ತಿದೆ ಎಂದರು.












Click it and Unblock the Notifications