Tele ICU Hub: ಕಲ್ಯಾಣ ಕರ್ನಾಟಕದ ಮೊದಲ ಟೆಲಿ ಐಸಿಯು ಹಬ್; ಏನಿದರ ವಿಶೇಷತೆ?
ಸಾರ್ವಜನಿಕ ಆಸ್ಪತ್ರೆಗಳ ಐಸಿಯುಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಿಂದ ರೋಗದ ಅನುಸಾರ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡುವ ಮಹತ್ವಪೂರ್ಣ ಕಾರ್ಯವಿಧಾನವಾದ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಟೆಲಿ ಐಸಿಯು ಹಬ್ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಕಡುಬಡವರಿಗೆ ಗುಣ ಮಟ್ಟದ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿ ದೊರಕಿಸಿ ಹೆಚ್ಚಿನ ಚಿಕಿತ್ಸೆಗೆ ದೂರದೂರಿಗೆ ರೋಗಿಗಳನ್ನು ಕಳುಹಿಸುವುದನ್ನು ತಪ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ವಿನೋದ್ ಖೋಸ್ಲಾ ಫ್ಯಾಮಿಲಿ ಫೌಂಡೇಶನ್ ಸಹಕಾರದೊಂದಿಗೆ ಟೆಲಿಐಸಿಯು ಮೂಲಕ ಚಿಕಿತ್ಸೆ ನೀಡಲು ಮಹತ್ವಾಕಾಂಕ್ಷಿ ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ, ಬಳ್ಳಾರಿಯಲ್ಲಿ ಟೆಲಿ ಹಬ್ ಸ್ಥಾಪಿಸುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿಯೂ ಸಹ ತುರ್ತು ಸಂದರ್ಭಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹೆಜ್ಜೆ ಇಟ್ಟಿದೆ.

ಟೆಲಿ ಐಸಿಯು ಹಬ್ ಸೇವೆ ಎಲ್ಲೆಲ್ಲೇ ದೊರೆಯುತ್ತದೆ?
ಟೆಲಿ ಐಸಿಯು ಹಬ್ ಆಸ್ಪತ್ರೆಯು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಟೆಲಿಐಸಿಯು ಸ್ಪೋಕ್ ಆಸ್ಪತ್ರೆಯು ಸಂಡೂರು ಮತ್ತು ಸಿರಗುಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆ, ಬಸವಕಲ್ಯಾಣ, ಅಳಂದ, ಶಹಾಪೂರ, ಜೇವರ್ಗಿ, ಲಿಂಗಸೂಗುರು, ಸಿಂಧನೂರು, ಯಲಬುರ್ಗಾ, ಹೊಸಪೇಟೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಮಾತನಾಡಿ, ಅತೀ ತುರ್ತು ಸಂದರ್ಭಗಳಾದ ಹೃದಯಾಘಾತ ಮತ್ತು ಪಾಶ್ರ್ವವಾಯು ಘಟಿಸಿದ ಸಂದರ್ಭಗಳಲ್ಲಿ ಇವರುಗಳಿಗೆ ತಕ್ಷಣ 2-3 ಗಂಟೆಯೊಳಗೆ ಚಿಕಿತ್ಸೆ ನೀಡಲು ಸಹಕರಿಯಾಗುತ್ತದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಇವುಗಳಿಂದ ಉಂಟಾಗುವ ಸಾವು ನೋವುಗಳನ್ನು ತಪ್ಪಿಸಲು ಹಾಗೂ ಅಂಗವಿಕಲತೆಯನ್ನು ತಡೆಗಟ್ಟಲು ಅತ್ಯಂತ ಮಹತ್ವಪೂರ್ಣವಾಗಿದೆ. ರೋಗಿಗಳು ತಮ್ಮ ಸ್ವಸ್ಥಾನದಲ್ಲಿಯೇ (ಗ್ರಾಮೀಣ ಭಾಗದಲ್ಲಿ ) ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಸಂಡೂರು ಮತ್ತು ಸಿರುಗುಪ್ಪ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (ಸ್ಪೋಕ್ ಆಸ್ಪತ್ರೆ ) ದಾಖಲಾಗುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಸದಾ ಸಿದ್ದರಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಟೆಲಿ ಐಸಿಯು ಹಬ್ ಕಾರ್ಯವಿಧಾನ
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಚಿಕಿತ್ಸಾ ವಿಧಾನ ಮತ್ತು ಔಷಧೋಪಚಾರದಲ್ಲಿ ಮೇಲ್ಮಟ್ಟದ ಆಸ್ಪತ್ರೆಯ ತಜ್ಞರ ಸಹಾಯ, ಸಲಹೆ ಬೇಕಾಗುವ ಸನ್ನಿವೇಶ ಬಂದಾಗ ಅಲ್ಲಿ ಅಳವಡಿಸಿರುವ ಟೆಲಿಐಸಿಯು (ಟೆಲಿ ಕ್ಯಾಮರಾ) ವೆಬ್ ಕ್ಯಾಮರಾ ಮೂಲಕ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲ್ಪಟ್ಟ ಟೆಲಿಐಸಿಯು ಹಬ್ ಗೆ ಸಂಪರ್ಕಿಸಿ ಸಮಾಲೋಚನೆ ಕೈಗೊಳ್ಳುತ್ತಾರೆ.
ನಂತರ ಹಬ್‍ನಲ್ಲಿಯ ತಜ್ಞ ವೈದ್ಯರು ವೆಬ್ ಕ್ಯಾಮರಾ ಮೂಲಕ ರೋಗಿಯ ಆರೋಗ್ಯ ಸ್ಥಿತಿಯನ್ನು ವೀಕ್ಷಿಸಿ ಈಗಾಗಲೆ ನೀಡಿರುವ ಚಿಕಿತ್ಸೆಯನ್ನು ಪರಿಶೀಲಿಸಿ ಚಿಕಿತ್ಸಾ ವಿಧಾನಗಳನ್ನು ಅಂತಿಮಗೊಳಿಸುವರು. ಹಬ್ ಮೂಲಕ ತಜ್ಞವೈದರು ನೀಡಿದ ಸಲಹೆಯಂತೆ ತಾಲೂಕು ಮಟ್ಟದಲ್ಲಿ ತಜ್ಞರು ಚಿಕಿತ್ಸೆಯನ್ನು ಮುಂದುವರೆಸುವರು. ಅಗತ್ಯವೆನಿಸಿದಾಗ ಪುನಃ ಸಂಪರ್ಕಿಸಿ ರೋಗಿಯು ಗುಣಮುಖರಾಗಲು ಸಹಕರಿಸುವರು. ಇನ್ನೂ ಹೆಚ್ಚಿನ ತಜ್ಞತೆಯ ಅವಶ್ಯಕತೆಯು ಕಂಡು ಬಂದಾಗ ಬೆಂಗಳೂರು ಮಟ್ಟದಲ್ಲಿ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ನೀಡುವರು.
ದೊರಕುವ ತುರ್ತು ವೈದ್ಯಕೀಯ ಸೇವೆಗಳು
ಸರ್ಜರಿ
ಮೆಡಿಸಿನ್
ಎಲುಬು-ಕೀಲು
ಕಿವಿ-ಮೂಗು-ಗಂಟಲು
ಪ್ರಸೂತಿ
ಅರವಳಿಕೆ

ಟೆಲಿ ಐಸಿಯು ಹಬ್ ಉಪಯೋಗಗಳು
ರೋಗಿಯು ಶೀಘ್ರ ಗುಣಮುಖರಾಗಲು ವ್ಯವಸ್ಥೆ ಹಾಗೂ ಚಿಕಿತ್ಸೆ ಪಡೆಯುವ ರೋಗಿಯನ್ನು ಪದೇ ಪದೇ ರೇಫರ್ ಮಾಡುವ ವಿಧಾನ ತಪ್ಪುವುದು. ರೋಗಿಯ ಆರೈಕೆದಾರರಿಗೆ ಸಮಯ ಮತ್ತು ಹಣ ಉಳಿತಾಯವಾಗುವುದು. ತಜ್ಞ ವೈದ್ಯರಿಗೆ ಆತ್ಮಸ್ಥೈರ್ಯ ಹೆಚ್ಚುವುದು. ಆಧುನಿಕ ತಂತ್ರಜ್ಞಾನವು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ದೊರಕಲು ಸಹಾಯಕ. ದಿನದ 24 ಗಂಟೆ ಸೌಲಭ್ಯವಿರುವುದರಿಂದ ರೋಗಿಯ ಆರೈಕೆಗೆ ಸಹಾಯಕ ಹಾಗೂ ಪಾಲಕರಿಗೂ ನೆಮ್ಮದಿ ದೊರಕುವುದು.
ಗ್ರಾಮ ಮತ್ತು ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ತಜ್ಞ ವೈದ್ಯಕೀಯ ಸಲಹೆ ನೀಡಲು ಟೆಲಿ ಐಸಿಯು ಹಬ್ ಸಹಾಯವಾಗಲಿದೆ. ಟೆಲಿ ಐಸಿಯು ಹಬ್ ಸೌಲಭ್ಯದ ಮೂಲಕ ವೈದ್ಯರು ರೋಗಿಗಳ ಆರೋಗ್ಯದ ನಿಯತಾಂಕಗಳ ಬಗ್ಗೆ ಆಸ್ಪತ್ರೆಗಳಿಂದ ವಿವರಗಳನ್ನು ಪಡೆದು ಅವರಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲು ಸಾಧ್ಯವಾಗುತ್ತದೆ.
ಟೆಲಿ ಐಸಿಯು ಹಬ್‍ನ ನೋಡೆಲ್ ಅಧಿಕಾರಿಯಾಗಿ ಡಾ. ದಿನೇಶ್ ನೇಮಿಸಲಾಗಿದೆ. ಟೆಲಿ-ಐಸಿಯು ಹಬ್ ಒಂದು ರಿಮೋಟ್ ಸೈಟ್ ಆಗಿದ್ದು, ಅದು ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಒಂದು ನುರಿತ ವೈದ್ಯತಂಡವನ್ನು ಒಳಗೊಂಡಿರುತ್ತದೆ. ಹಬ್‍ನಲ್ಲಿ ಸಂವಹನತೆಯಿಂದ ಕೂಡಿದ ತಾಂತ್ರಿಕ ಸಾಫ್ಟ್‍ವೇರ್ ಮತ್ತು ಪರವಾನಿಗೆಗಳು, ನೆಟ್‍ವರ್ಕಿಂಗ್ ಸಲಕರಣೆಗಳಿಂದ ಕೂಡಿ ಟೆಲಿ ಐಸಿಯು ಹಬ್ ಕಾರ್ಯನಿರ್ವಹಿಸುತ್ತದೆ.
ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಹಬ್‍ನಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆಯಂತೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಟೆಲಿ ಐಸಿಯು ಹಬ್‍ಗಳನ್ನು ಆರಂಭಿಸಲಾಗಿದೆ.
-
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications