ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿರುಪತಿಯಲ್ಲಿ ಅಪಘಾತ : ಬಳ್ಳಾರಿ ನ್ಯಾಯಾಧೀಶರು ಸಾವು

By ಜಿಎಂ ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಮೇ 15 : ತಿರುಪತಿ ತಿಮ್ಮಪ್ಪನ ದರ್ಶನಕ್ಕ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಬಳ್ಳಾರಿಯ ನ್ಯಾಯಾಧೀಶರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ನ್ಯಾಯಾಧೀಶರ ಜೊತೆಗಿದ್ದ ಅವರ ಸಹೋದರ ಸಹ ಗಾಯಗೊಂಡಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ಚಿತ್ರದುರ್ಗ ಮೂಲದ ಎನ್. ರುದ್ರಮುನಿ (49) ಎಂದು ಗುರುತಿಸಲಾಗಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜೆ ಇದ್ದ ಕಾರಣ ಇವರು ಸಹೋದರನ ಜೊತೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಆಪ್ತರ ಜೊತೆಯಲ್ಲಿ ತೆರಳಿದ್ದರು. ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಸಂಕಲ್ಪತೊಟ್ಟು ಬೆಟ್ಟವನ್ನು ಹತ್ತುವಾಗ ಟೋಲ್‍ ಗೇಟ್ ಬಳಿ ಬಸ್ ವೇಗವಾಗಿ ಬಂದ ಬಸ್ ರುದ್ರಮುನಿ ಅವರಿಗೆ ಡಿಕ್ಕಿ ಹೊಡೆದಿದೆ.

 N Rudramuni

ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ರುದ್ರಮುನಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ರುದ್ರಮುನಿ ಅವರ ಜೊತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಅವರ ಸಹೋದರ ವೈದ್ಯ ಡಾ. ಎನ್. ಮಂಜುನಾಥ್ ಅವರು ಸಹ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ತಿರುಪತಿಗೆ ಎಸಿ ಡಬಲ್‌ ಡೆಕ್ಕರ್‌ ಎಕ್ಸ್‌ಪ್ರೆಸ್‌ ರೈಲು]

ಚಿತ್ರದುರ್ಗ ಮೂಲದವರು : ರುದ್ರಮುನಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ತುರುವನೂರಿನವರು. ಎಸ್ಎಸ್ಎಲ್ ಸಿವರೆಗೂ ತುರುವನೂರಿನಲ್ಲಿ ಓದಿದ್ದ ಅವರು, ನಂತರ ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿ, ದೊಡ್ಡಪ್ಪ, ಹಿರಿಯ ನ್ಯಾಯವಾದಿ ಎನ್. ತಿಪ್ಪಣ್ಣ ಅವರ ಸಲಹೆಯಂತೆ ಬಳ್ಳಾರಿಗೆ ಆಗಮಿಸಿ ಕಾನೂನು ಪದವಿ ಪಡೆದು, ಅದೇ ಕಾಲೇಜಿನಲ್ಲಿ ಬೋಧಕರಾಗಿ ಕೆಲ ವರ್ಷ ಕೆಲಸ ಮಾಡಿದ್ದರು.

ನಂತರ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದರು. ಹೈಕೋರ್ಟ್‍ನಲ್ಲಿ ಸರ್ಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿ 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಮಂಗಳೂರಿಗೆ ಪ್ರಪ್ರಥಮವಾಗಿ ನೇಮಕಗೊಂಡಿದ್ದರು. ಬೆಳಗಾವಿ, ಮೈಸೂರು ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಅವರಿಗೆ ಯಾದಗಿರಿಗೆ ವರ್ಗಾವಣೆಯಾಗಿತ್ತು. ಆದರೆ, ಬೇಸಿಗೆ ರಜೆ ಇರುವ ಕಾರಣ ಹುದ್ದೆಯನ್ನು ಅಲಂಕರಿಸಿರಲಿಲ್ಲ.

ಮೃತ ರುದ್ರಮುನಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂದೆ ಎನ್. ಅಯ್ಯಣ್ಣ, ತಾಯಿ ಏಕಾಂತಮ್ಮ ಹಾಗೂ ಅಪಾರ ಸಂಖ್ಯೆಯ ಮಿತ್ರರು ಹಾಗು ಅಭಿಮಾನಿಗಳನ್ನು ಅಗಲಿದ್ದಾರೆ.

ಸಾರ್ವಜನಿಕ ದರ್ಶನ : ರುದ್ರಮುನಿ ಅವರ ಪಾರ್ಥೀವ ಶರೀರವನ್ನು ಬಳ್ಳಾರಿಯ ಗಾಂಧಿನಗರದಲ್ಲಿಯ ಎನ್. ತಿಪ್ಪಣ್ಣ ಅವರ ಮನೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ತುರುವನೂರಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಅಂತಿಮ ಸಂಸ್ಕಾರ ನಡೆಯಲಿದೆ.

English summary
The judge of first additional principal and sessions court Bellary, N Rudramuni, (49), was mowed down by a bus of the Andhra Pradesh State Road Transport Corporation at Tirumala in Tirupati, Andhra Pradesh, on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X