ಬಳ್ಳಾರಿ ಲೋಕಸಭೆ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಜೆ ಶಾಂತಾ, ಉಗ್ರಪ್ಪ

ಬಳ್ಳಾರಿ. ಅಕ್ಟೋಬರ್.16: ಬಳ್ಳಾರಿ ಲೋಕಸಭೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಜೆ. ಶಾಂತಾ ಇಂದು (ಅಕ್ಟೋಬರ್ 16) ಮಂಗಳವಾರ ನಾಮಪತ್ರ ಸಲ್ಲಿಸಿದರು. ಜೆ ಶಾಂತಾ ಅವರಿಗೆ ಸಹೋದರ ಶ್ರೀ ರಾಮುಲು ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಜೆ. ಶಾಂತಾ, ನಮ್ಮ ಪಕ್ಷದ ಸರ್ವಾನುಮತದ ಅಭ್ಯರ್ಥಿ ಆಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಾಯಕರಿಗೆ ಋಣಿಯಾಗಿದ್ದೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಜೆ ಶಾಂತಾ ನಾಮಪತ್ರ ಸಲ್ಲಿಕೆ ನಂತರ ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ನಾಮಪತ್ರ ಸಲ್ಲಿಸಿದರು. ಇವರಿಗೆ ಶಾಸಕರುಗಳಾದ ಭೀಮಾನಾಯ್ಕ, ಬಿ ನಾಗೇಂದ್ರ, ತುಕಾರಾಮ್, ಸಚಿವ ಡಿಕೆ ಶಿವಕುಮಾರ್, ಗುಂಡೂರಾವ್ ಸಾಥ್ ನೀಡಿದರು.

J shantha, Ugrappa filed the nomination Today

ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಡಿಸಿ ಕಚೇರಿಯ ಗೇಟ್ ನೂಕಿ ಒಂದೇ ಸಮಯಕ್ಕೆ ಒಳನುಗ್ಗಲು ಕೈ ಕಾರ್ಯಕರ್ತರು ಪ್ರಯತ್ನಿಸಿದ್ದು ಕಂಡುಬಂದಿತು.

J shantha, Ugrappa filed the nomination Today

ಇದೇ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+