• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಅಮೂಲ್ಯ ಎನ್ ಕೌಂಟರ್ ಮಾಡಿದರೆ 10 ಲಕ್ಷ ಕೊಡುತ್ತೇನೆ"

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಫೆಬ್ರವರಿ 22: "ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಅವರನ್ನು ಎನ್ ಕೌಂಟರ್ ಮಾಡಿದರೆ ಅವರಿಗೆ ನಾನು ಹತ್ತು ಲಕ್ಷ ಬಹುಮಾನ ಕೊಡುತ್ತೇನೆ" ಎಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ "ಪಾಕಿಸ್ತಾನ ಜಿಂದಾಬಾದ್' ಎಂದು ಅಮೂಲ್ಯ ಎಂಬ ಯುವತಿ ಘೋಷಣೆ ಕೂಗಿದ್ದರು. ಈ ಘೋಷಣೆ ವಿರೋಧಿಸಿ ರಾಜ್ಯಾದ್ಯಂತ ವಿರೋಧವೂ ವ್ಯಕ್ತವಾಗಿತ್ತು.

'ಪಾಕಿಸ್ತಾನ್ ಜಿಂದಾಬಾದ್' ಎಂದ ಅಮೂಲ್ಯ ಬಗ್ಗೆ ಪಾಕ್ ಮಾಧ್ಯಮಗಳ ಸುದ್ದಿ

ಬಳ್ಳಾರಿಯಲ್ಲಿ ಅಂದೇ ರಾತ್ರಿ ಎಬಿವಿಪಿ ಕೂಡ ಬೃಹತ್ ಪ್ರತಿಭಟನೆ ನಡೆಸಿತು. ಇಂದು ಕೂಡ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಮಾತನಾಡುವ ಭರದಲ್ಲಿ, ರಾಮಸೇನೆ ತಾಲೂಕು ಅಧ್ಯಕ್ಷ ಸಂಜೆಯ್ ಮರೊಡಿ, "ಅಮೂಲ್ಯ ಅವರನ್ನು ಎನ್ ಕೌಂಟರ್ ಮಾಡಿದರೆ ಅವರಿಗೆ ಹತ್ತು ಲಕ್ಷ ಬಹುಮಾನ ಕೊಡುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.

English summary
"I Will give Reward Of 10 lakhs if encounter Amulya Leona who shout slogan of Pakistan zindabad in bengaluru freedom park" said Shri RamaSene Taluk President of Hosapet in Ballari district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X