ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ: ಆನಂದ್ ಸಿಂಗ್

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಆಗಸ್ಟ್‌ 06: ನನಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ನೂತನ ಸಚಿವ ಆನಂದ್ ಸಿಂಗ್ ಹೇಳಿದರು.

ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ನೂತನ ಸಚಿವನಾಗಿ ಪ್ರಮಾಣವಚನ‌ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರಿಗೆ ನಾನು ಇಂತಹದ್ದೇ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಟಿದ್ದೀನಿ ಅದನ್ನ ಮಾಧ್ಯಮದವರೊಂದಿಗೆ ಹೇಳುವ ಅಶ್ಯಕತೆ ಇಲ್ಲ ಎಂದರು.

ನನಗೆ ಮೂರು ಬಾರಿ‌ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ ಹಾಗಾಗಿ‌ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇಂತದ್ದೇ ಬೇಕು ಅಂತ ಬೇಡಿಕೆ ಮಾಡಿರುವೆ.

ಕಾದು ನೊಡೋಣ ಯಾವ ಖಾತೆ ಕೊಡ್ತಾರೆ ಅಂತ, ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ಪ್ರವಾಸೋದ್ಯಮ ಖಾತೆ ಬದಲಿಸಿ, ಹಜ್ ಮತ್ತು ವಕ್ಸ್ ಖಾತೆ ನೀಡಿದ್ದರು.

ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಕೊಡುಗಗಳನ್ನು ನೀಡಿದ್ದಾರೆ. ಆದ್ರೆ ಬದಲಾದ ಕಾಲಮಾನಗಳಲ್ಲಿ ಅನಿವಾರ್ಯ ಕಾರಣಗಳಿಂದ ನನ್ನ ಖಾತೆ ಬದಲಿಸಬೇಕಾಯಿತು. ಎಂದೂ ಅಸಮಾಧಾನವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿರಲಿಲ್ಲ. ಇಲ್ಲಿ ಖಾತೆ ಮುಖ್ಯವಾಗುವುದಿಲ್ಲ ಸರ್ಕಾರ ಇದ್ದೇ ಇರುತ್ತದೆ ಎಂದರು.

ರಾಜ್ಯ ಬಿಜೆಪಿ ಸರಕಾರದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸ್ಥಾನದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಸದ್ಯ ಕೋವಿಡ್‌, ಪ್ರವಾಹದ ನಿರ್ವಹಣೆ ಜವಾಬ್ದಾರಿಯನ್ನು ನೂತನ ಸಚಿವರಿಗೆ ವಹಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಉಸ್ತುವಾರಿ ಯಾರ ಹೆಗಲಿಗೆ ವಹಿಸಲಿದೆ ಎನ್ನುವ ಕುತೂಹಲ ಉಭಯ ಜಿಲ್ಲೆಗಳ ಜನರಲ್ಲಿ ಮೂಡಿಸಿದೆ.

ಅವಿಭಜಿತ ಜಿಲ್ಲೆಯ 10 ಕ್ಷೇತ್ರಗಳಲ್ಲಿ ತಲಾ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಿದ್ದಂತೆಯೇ, ನೂತನ ಸಚಿವ ಸಂಪುಟ ರಚನೆಯಾಗಿದೆ.

ವಿಜಯನಗರ ಜಿಲ್ಲೆಯಿಂದ ಆನಂದ್‌ ಸಿಂಗ್‌ ಅವರಿಗೆ ಸಚಿವ ಸ್ಥಾನ ದೊರಕಿದರೆ, ಬಳ್ಳಾರಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದೆ. ಇದರ ನಡುವೆ ಈಗ ಉಭಯ ಜಿಲ್ಲೆಗಳ ಉಸ್ತುವಾರಿ ಯಾರ ಹೆಗಲಿಗೆ ಎನ್ನುವ ಪ್ರಶ್ನೆ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅವಿಭಜಿತ ಜಿಲ್ಲೆಗೆ ಈ ಹಿಂದೆ ಸಚಿವ ಆನಂದ್‌ ಸಿಂಗ್‌ ಅವರು ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಸಿಂಗ್‌ ಅವರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್‌ ಹಾಗೂ ಪ್ರವಾಹ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಜಿಲ್ಲೆ ವಿಭಜನೆ ಬಳಿಕ ಆನಂದ್‌ ಸಿಂಗ್‌ ಅವರನ್ನು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯಿಂದ ಕೈಬಿಡುವಂತೆ ಸ್ವ ಪಕ್ಷದ ಶಾಸಕರೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು

 ರಾಜೂಗೌಡಗೆ ಸಚಿವ ಸ್ಥಾನ ಕೊಡಬೇಕಿತ್ತು ಎಂದ ಆನಂದ್ ಸಿಂಗ್

ರಾಜೂಗೌಡಗೆ ಸಚಿವ ಸ್ಥಾನ ಕೊಡಬೇಕಿತ್ತು ಎಂದ ಆನಂದ್ ಸಿಂಗ್

'ಶಾಸಕ ರಾಜೂಗೌಡ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಅವರು ಕಲ್ಯಾಣ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ಯುವ ನಾಯಕರಿದ್ದಾರೆ, ಆದ್ರೆ ಕಾರಣಾಂತರಗಳಿಂದ ಕೈ ತಪ್ಪಿದೆ, ರಾಜೂಗೌಡ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೇನೆ ನೊಡೋಣ ಎಂದಿದ್ದಾರೆ ಎಂದರು. ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ ಅನುಭವದ ಕೊರತೆ ಇದೆ ಕೆಲ ಸಲಹೆಗಳನ್ನು ಯಡಿಯೂರಪ್ಪನ್ನು ಕೇಳಿದರೆ ಅವರ ಮಾತು ಕೇಳುತ್ತಾರೆ ಎಂದು ಭಾವಿಸುವುದು ತಪ್ಪು. ಯಡಿಯೂರಪ್ಪನವರು 50 ವರ್ಷ ಶ್ರಮ ವಹಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಸಾಕಷ್ಟು ಅನುಭವ ಹೊಂದಿರುವ ಅವರಿಂದ ಸಲಹೆ ಪಡೆದರೆ ತಪ್ಪೇನೂ? ಎಂದರು.

 ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಪತ್ರಕರ್ತತರು ಕೇಳಿದ ಪ್ರಶ್ನೆಗೆ ಉತ್ತರಿಸಿ "ಅದರ ಬಗ್ಗೆ ನಾನೇನೂ ಹೇಳಲಾರೆ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವದು"
ಮಳೆಯಿಂದ ಆಗಿರುವ ಹಾನಿ, ಕೋವಿಡ್ ಮೂರನೇ ಅಲೆ ಬಗ್ಗೆ ಕೈಗೊಂಡಿರುವ ಸಿದ್ಧತೆ ಕುರಿತು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಸದ್ಯ ಆ ಕೆಲಸದಲ್ಲಿ ಬಿಸಿಯಾಗಿದ್ದೇನೆ ಎಂದರು.

'ಆ. 15ಕ್ಕೆ ಜಿಲ್ಲೆಯನ್ನ ಅದ್ಧೂರಿಯಾಗಿ ಉದ್ಘಾಟನೆ ಮಾಡುವ ಯೋಜನೆ ಹಾಕಿಕೊಂಡಿದ್ದೆ ಕೋವಿಡ್ ರಾಜಕೀಯ ವಿದ್ಯಾಮಾನಗಳ ಬೆಳವಣಿಗೆ ಹಾಗಾಗಿ ಮುಂದಕ್ಕೆ ಹೋಗಿದೆ. ಉದ್ಘಾಟನೆಯಲ್ಲಿ ವಿಜಯನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ಎರಡರಿಂದ ಮೂರು ದಿನ ಕಾರ್ಯಕ್ರಮ ಆಯೋಜಿಸಿ, ಹೆಸರಾಂತ ಕಲಾವಿದರನ್ನು ಕರೆಸುವ ಯೋಚನೆ ಇದೆ' ಎಂದರು.

 ಚೌತಿಗೆ ವಿಜಯನಗರ ಉದ್ಘಾಟನೆ

ಚೌತಿಗೆ ವಿಜಯನಗರ ಉದ್ಘಾಟನೆ

'ನೂತನ ವಿಜಯನಗರ ಜಿಲ್ಲೆಗೆ ಉದ್ಘಾಟನಾ ಸಮಾರಂಭ ಗಣೇಶ ಚತುರ್ಥಿಗೆ ವಿಜ್ಞೇಶ್ವರನಿಗೆ ವಿಶೇಷ ಪೂಜೆ ಹಮ್ಮಿಕೊಂಡು ಯಾವುದೇ ವಿಜ್ಞಗಳು ಬರಬಾರದು ಹಾಗೆ ಕಾಪಾಡು ಎಂದು ಪೂಜೆ ಮಾಡಿ ಉದ್ಘಾಟನೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದರು. ಆದ್ರೆ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಬೇಕಾದರೇ ಜನ ಇರಬೇಕಾಗುತ್ತದೆ. ಕೋವಿಡ್ ಇರುವುದರಿಂದ ಜನರನ್ನು ಸೇರಿಸಲು ಆಗುವುದಿಲ್ಲ. ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಸಂಗತಿಗಳನ್ನು ನೋಡಿಕೊಂಡು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

 ವಿವಿಧ ಇಲಾಖೆಗಳಿಗೆ ನೇಮಕ ಪ್ರಕ್ರಿಯೆ

ವಿವಿಧ ಇಲಾಖೆಗಳಿಗೆ ನೇಮಕ ಪ್ರಕ್ರಿಯೆ

ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಿ, ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದು ಮೊದಲ ಹಂತದಲ್ಲಿ ಹೊಸ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಇನ್ನು 15 ದಿನಗಳ ಒಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈಗಾಗಲೇ ಜಿಲ್ಲೆಗೆ ವಿಶೇಷ ಅಧಿಕಾರಿ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಅವರ ಕಚೇರಿಗೆ ಸಿಬ್ಬಂದಿ ನೇಮಕ ಮಾಡಲಾಗುವುದು' ಎಂದು ಹೇಳಿದರು.

English summary
Karnataka Cabinet Expansion: Newly Elected Minister Anand singh Says that I Am Ready To Handle Any Portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X