• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಪೇಟೆ; ಗರ್ಭಿಣಿಯರಿಗೆ ಈಗ ಕೋವಿಡ್ ನೆಗೆಟಿವ್ ವರದಿ ಚಿಂತೆ

By ಭೀಮರಾಜ.ಯು. ವಿಜಯನಗರ
|

ವಿಜಯನಗರ, ಮಾರ್ಚ್ 24: ಕೋವಿಡ್ 2ನೇ ಅಲೆ ಪ್ರಾರಂಭವಾಗಿದೆ ಎಲ್ಲರೂ ಜಾಗೃತರಾಗಿರಬೇಕೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದರಿಂದಾಗಿ ಜನರಲ್ಲಿ ಆತಂಕ ಶುರುವಾಗಿದೆ. ಮತ್ತೊಂದು ಕಡೆ ಹೆರಿಗೆಗೆ ಬರುವ ಗರ್ಭಿಣಿಯರು ಸಹ ಕೋವಿಡ್ ನೆಗೆಟಿವ್ ವರದಿ ತರಬೇಕು ಎಂದು ಸೂಚಿಸಲಾಗುತ್ತಿದೆ.

ಕೋವಿಡ್ ಮಹಾಮಾರಿಯ ಆತಂಕ ದೂರವಾಯಿತು ಎನ್ನುವಾಗಲೇ ಎರಡನೇ ಅಲೆ ಆರಂಭವಾಗಿದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಕೋವಿಡ್ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿವೆ.

ಹೊಸಪೇಟೆ: ರೈಲ್ವೆ ಇಲಾಖೆಯ 18 ಸಿಬ್ಬಂದಿಗೆ ಕೊರೊನಾ ವೈರಸ್ ಪತ್ತೆ

ಕೋವಿಡ್ ನಿಯಮಗಳಿಂದಾಗಿ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಕೋವಿಡ್ ನೆಗೆಟಿವ್ ವರದಿ ತರುವ ಚಿಂತೆ ಕಾಡತೊಡಗಿದೆ. ಹೆರಿಗೆಗೆ ಬರಬೇಕಾದರೆ ಕಡ್ಡಾಯವಾಗಿ ನೆಗೆಟಿವ್ ರಿಪೋರ್ಟ್ ಕೊಡಲೇಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ.

ಹೊಸಪೇಟೆ: ಮತ್ತೆ 11 ರೈಲ್ವೆ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್!

ಹಗರಿಬೊಮ್ಮನ ಹಳ್ಳಿ ತಾಲೂಕಿನಿಂದ ಹೊಸಪೇಟೆಯ ಖಾಸಗಿ ಆಸ್ಪತ್ರೆಗೆ ರಮೇಶ್ ಎಂಬುವವರು ಪತ್ನಿಯನ್ನು ಹೆರಿಗೆಗಾಗಿ ಕರೆದುಕೊಂಡು ಬಂದಿದ್ದರು. ಆಗ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕೇಳಿದ್ದಾರೆ.

ಕೇರಳದಿಂದ ಬಂದವರ ಬಳಿ ನಕಲಿ ಕೋವಿಡ್ ಸರ್ಟಿಫಿಕೇಟ್ ಪತ್ತೆ!

ಏಕಾಏಕಿ ನೆಗೆಟಿವ್ ರಿಪೋರ್ಟ್ ಕೇಳಿದ್ದಕ್ಕೆ ಕಕ್ಕಾಬಿಕ್ಕಿಯಾದ ವ್ಯಕ್ತಿ ಇಲ್ಲಾ ಎಂದು ಹೇಳಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸದೇ ಹೆರಿಗೆ ಮಾಡಿಸುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಎರಡು ದಿನಗಳು ಹೆರಿಗೆ ಆಗದಂತೆ ತಡೆದು ರಿಪೋರ್ಟ್ ನೆಗೆಟಿವ್ ಅಂತ ಬಂದ ನಂತರ ಹೆರಿಗೆ ಮಾಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಮೇಶ್, "ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಹೆರಿಗೆಗಾಗಿ ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆಸ್ಪತ್ರೆಗಳ ಈ ಬೇಡಿಕೆಯಿಂದಾಗಿ ಗರ್ಭಿಣಿಯರು ಸುಗಮ ಹೆರಿಗೆಗಾಗಿ ಹರಸಾಹಸ ಪಡಬೇಕಾಗಿದೆ. ಕುಟುಂಬದವರು ನೆಗೆಟಿವ್ ವರದಿ ನೀಡದಿದ್ದರೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿಲ್ಲ" ಎಂದು ಹೇಳಿದ್ದಾರೆ.

ಈ ಬಗ್ಗೆ ವಿಜಯನಗರದ ಪ್ರಭಾರ ಡಿಎಚ್‌ಓ ಡಾ. ಜನಾರ್ದನ ಮಾತನಾಡಿದ್ದಾರೆ. "ಈ ಥರದ ಪ್ರಕರಣಗಳು ತಲೆನೋವಾಗಬಾರದೆಂದು ನಾವು ನಮ್ಮ ಆಶಾ ಕಾರ್ಯಕರ್ತೆಯರ ಮೂಲಕ ಹೆರಿಗೆಗೆ 15 ದಿನಗಳ ಮುಂಚೆ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದೇವೆ. ಈ ಹಿಂದೆ ಪಾಸಿಟಿವ್ ಇದ್ದ ನೂರಾರು ಮಹಿಳೆಯರಿಗೆ ಹೆರಿಗೆ ಮಾಡಿಸಲಾಗಿದೆ. ಯಾರೂ ಕೂಡ ಆತಂಕ ಪಡುವುದು ಬೇಡ, ಹೆರಿಗೆಗೆ 15 ದಿನ ಮುಂಚೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ.

English summary
In Vijayanagar district Hospet hospitals asking for COVID 19 negative certificate who come for delivery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X