ಮೃತಪಟ್ಟ ಕರುವಿನ ಮುಂದೆ ನಿಂತು ಆ ಆಕಳು ಮಾಡಿದ್ದೇನು?
ಹೊಸಪೇಟೆ, ಮೇ 30: ತಾಯಿ ವಾತ್ಸಲ್ಯ ಎಂಬ ವಿಚಾರದಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಅಂಥ ಫರಕ್ ಏನಿಲ್ಲ ಅನ್ನಿಸುವಂಥ ಘಟನೆ ಇದು. ಇದಕ್ಕೆ ಸಾಕ್ಷಿಯಾಗಿದ್ದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಜನ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಪಾಪಿನಾಯಕನಹಳ್ಳಿ ಬಳಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಕರುವೊಂದು ಮೃತಪಟ್ಟಿತು.
ತನ್ನ ಕರುವನ್ನು ಮೇಲೆಬ್ಬಿಸಲು ಆಕಳು ಪಟ್ಟ ಪಾಡಿದೆಯಲ್ಲಾ, ಅದು ಎಂಥವರ ಮನಸ್ಸನ್ನೂ ಕರಗಿಸುವಂತಿತ್ತು. ಅಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಘಟನೆ ಬಗ್ಗೆ ಮಾಧ್ಯಮದ ಜತೆ ಹೇಳಿಕೊಂಡಿದ್ದಾರೆ. "ಅಪಘಾತವಾಗಿ ಮೃತಪಟ್ಟ ಕರು ರಸ್ತೆ ಮಧ್ಯ ಬಿದ್ದಿತ್ತು. ಅದನ್ನು ಎಬ್ಬಿಸಲು ಆಕಳು ನಾಲಗೆಯಿಂದ ಮೈ ನೇವರಿಸಿತು, ಒದೆಯಿತು, ಏನು ಮಾಡಿದರೂ ಕರು ಪ್ರತಿಕ್ರಿಯಿಸಿದೆ ಇದ್ದಾಗ ಆರ್ತನಾದ ಮಾಡಲು ಆರಂಭಿಸಿತು.[ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು]

ಕರುವಿನ ಕಳೇಭಾರದ ಮೇಲೆ ಯಾವುದೇ ವಾಹನ ಹೋಗದಂತೆ ಆಕಳು ನೋಡಿಕೊಂಡಿತು. ಈ ಎಲ್ಲ ದೃಶ್ಯಗಳಿಗೂ ಸಾಕ್ಷಿಯಾಗಿದ್ದ ಗ್ರಾಮಸ್ಥರು ಸ್ಥಳಕ್ಕೆ ಬಂದು, ಕರುವಿನ ಕಳೇಬರವನ್ನು ಪಕ್ಕಕ್ಕೆ ಸರಿಸಿದರು. ಆ ನಂತರ ಆಕಳನ್ನು ಸಂತೈಸಲು ಪ್ರಯತ್ನ ಪಟ್ಟರು. ಇದು ನಡೆದ ಘಟನೆ. ತಾಯಿ ಕರಳು ಅಂದರೆ ಅದು ಮನುಷ್ಯರಷ್ಟೇ ಅಲ್ಲ, ಅಂತನ್ನಿಸಲ್ಲವಾ?












Click it and Unblock the Notifications