• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಲ್ಬರ್ಗ ವಿವಿ ಪಠ್ಯ ವಿಷಯವಾಗಿ ಮಾತೆ ಮಂಜಮ್ಮ ಜೋಗತಿ ಜೀವನಚರಿತ್ರೆ

By ಭೀಮರಾಜ.ಯು ವಿಜಯನಗರ
|
Google Oneindia Kannada News

ವಿಜಯನಗರ: ಜೂನ್ 5: ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತೆ ಮಂಜಮ್ಮ ಜೋಗತಿಯವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನಲೆ ಮತ್ತೊಂದು ಗೌರವ ಸಲ್ಲಿಕೆಯಾಗಿದ್ದು, ಅವರ ಜೀವನ ಚರಿತ್ರೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎಸ್ಸಿ ಬೇಸಿಕ್ ಪಠ್ಯ ವಿಷಯವಾಗಿ ಪದವಿ ವಿದ್ಯಾರ್ಥಿಗಳು ಓದಲಿದ್ದಾರೆ.

ಮಾತೆ ಮಂಜಮ್ಮ ಜೋಗತಿಯವರು ತೃತೀಯ ಲಿಂಗಿಗಳಾಗಿ ನಡೆದು ಬಂದ ಹಾದಿಯನ್ನೊಳಗೊಂಡ ಅರುಣ್ ಜೋಳದ ಕೂಡ್ಲಿಗಿಯವರು 'ನಡುವೆ ಸುಳಿವ ಹೆಣ್ಣು' ಎಂಬ ಪುಸ್ತಕದ ನಿರೂಪಣೆ ಮಾಡಿದ್ದು, ಪಲ್ಲವಿ ಪ್ರಕಾಶಕರು ಮುದ್ರಿಸಿದ್ದಾರೆ.

ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಿಂದ 166 ಪುಟಗಳನ್ನೊಳಗೊಂಡ 'ಮಂಜಮ್ಮ ಜೋಗತಿ ಆತ್ಮಕಥನ' ಎಂಬ ಜೀವನ ಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದರು.

ಆಂಧ್ರಪ್ರದೇಶದಲ್ಲಿ ಪುಸ್ತಕ ರೂಪದಲ್ಲಿ ಧಾರವಾಹಿ

ಆಂಧ್ರಪ್ರದೇಶದಲ್ಲಿ ಪುಸ್ತಕ ರೂಪದಲ್ಲಿ ಧಾರವಾಹಿ

ವಿಜಯಪುರದ ಅಕ್ಕಮಹಾದೇವಿ ಮಹಾವಿದ್ಯಾಲಯದ "ಅರಿವು ಪಠ್ಯ'ದಲ್ಲಿ ಪದವಿ ವಿದ್ಯಾರ್ಥಿಗಳಿಗೆ 5ನೇ ಸೆಮಿಸ್ಟರ್‌ಗೆ ಸೇರ್ಪಡೆಯಾಗಿದೆ. 'ನಡುವೆ ಸುಳಿವ ಹೆಣ್ಣು' ಮಾತೆ ಮಂಜಮ್ಮ ಜೋಗತಿಯವರು 214 ಪುಟಗಳ 31 ಅಧ್ಯಾಯ ಒಳಗೊಂಡಿರುವ ಜೀವನಾಧಾರಿತ ಆತ್ಮಕಥನ ಬಿಡುಗಡೆಯಾದ ಬೆನ್ನಲ್ಲೇ ಅವರು ಜೀವನ ಚರಿತ್ರೆಯನ್ನು 100 ಪುಟಗಳಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಬೇಸಿಕ್ ಕನ್ನಡ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಮಾಡಿದ್ದಾರೆ.

ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಿಂದ 166 ಪುಟಗಳನ್ನೊಳಗೊಂಡ 'ಮಂಜಮ್ಮ ಜೋಗ್ತಿ ಆತ್ಮಕಥನ' ಎಂಬ ಜೀವನ ಚರಿತ್ರೆ ಪುಸ್ತಕವನ್ನು ಧಾರವಾಹಿಯ ರೂಪದಲ್ಲಿ ಪ್ರಕಟಗೊಂಡಿದೆ

ಕಷ್ಟದ ದಿನಗಳು:

ಕಷ್ಟದ ದಿನಗಳು:

"ಸಮಾಜದ ತುಳಿತಕ್ಕೆ ಒಳಗಾಗಿ ಕಷ್ಟ-ನೋವುಗಳನ್ನುಂಡು ಸ್ವತಃ ಮನೆಯವರಿಂದಲೇ ಬಹಿಷ್ಕರಣೆಗೊಂಡ ನಂತರ ಕಣ್ಣೀರಿನಲ್ಲಿಯೇ ಕೈ ತೊಳೆದರು. ದಾವಣಗೆರೆಯ ವಿದ್ಯಾರ್ಥಿ ಭವನದ ಮುಂಭಾಗದಲ್ಲಿ ಭಿಕ್ಷಾಟನೆ ಮಾಡಿಕೊಂಡು ಬರುವ ಸಂದರ್ಭದಲ್ಲಿ ಕಾಮುಕರು ನನ್ನ ಮೇಲೆ ಎರಗಿ ಸೀರೆ ಮತ್ತು ಕುಪ್ಪಸಕ್ಕೆ ಕೈ ಹಾಕಿ ಎಳೆದಾಡಿದರು. ಅವರಿಂದ ಹೇಗೊ ಸೆಣಸಾಡಿ ಬಂದವಳೆಂದು ಹೇಳುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣಂಚಿನಿಂದ ಕಣ್ಣೀರು ಹರಿದು ಬಂದವು. ಈ ಘಟನೆಯಿಂದ ಬಹಳ ಮನಸ್ಸಿಗೆ ನೋವಾಗಿ ಸುಮಾರು ದಿನಗಳವರೆಗೂ ಘಟನೆಯಿಂದ ಹೊರಗೆ ಬರುವುದಕ್ಕೆ ಆಗಲಿಲ್ಲ'' ಎಂದು ಹೇಳುತ್ತಿದ್ದ ಹಾಗೆ ಕಣ್ಣುಗಳು ಒದ್ದೆಯಾದವು.

ಕಲೆಯೇ ಜೀವನ

ಕಲೆಯೇ ಜೀವನ

ಜೀವನಾಧಾರವಾಗಿ ಕಲೆಯನ್ನೇ ಸ್ವೀಕರಿಸಬೇಕಾದ ಸ್ಥಿತಿ ಬಂದೊದಗಿತು, ಅವರು ಮೊದಲನೆ ಗುರು ಮಟ್ಟಿಕಲ್ಲು ಬಸಪ್ಪನವರು ಆಸರೆಯಾಗಿ ನಿಲ್ಲುತ್ತಾರೆ. ನಂತರ ಕಾಳಮ್ಮ ಎರಡನೇ ಗುರುವಾಗಿ, ತಾಯಿ, ತಂದೆ ಅಣ್ಣ ತಮ್ಮ ಬಂಧು-ಬಳಗವಾಗಿ ಎಲ್ಲಾ ಸ್ಥಾನವನ್ನು ತುಂಬಿ ಮಂಜಮ್ಮನವರಿಗೆ ಆಸರೆಯಾಗಿ ನಿಲ್ಲುತ್ತಾಳೆ. ನಾನು ಹೊಟ್ಟೆ ಪಾಡಿಗೆಗಾಗಿ ಕಲಿತ ಜೋಗ್ತಿ ನೃತ್ಯ ಮುಂದು ಒಂದು ದಿನ ಇಷ್ಟೊಂದು ಎತ್ತರಕ್ಕೆ ಕರೆದ್ಯೊಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದರು.

ಹೊಲಗದ್ದೆಗಳಲ್ಲಿ ನೃತ್ಯ

ಹೊಲಗದ್ದೆಗಳಲ್ಲಿ ನೃತ್ಯ

ಹೊಟ್ಟೆ ಪಾಡಿಗಾಗಿ ಎಲ್ಲೆಲ್ಲಿ ನೃತ್ಯ

ಒಂದೊತ್ತಿನ ಊಟಕ್ಕಾಗಿ ಪರದಾಡುವಂತಹ ಸ್ಥಿತಿ ಆ ದಿನಗಳಲ್ಲಿತ್ತು. ನನ್ನ ಗುರುಗಳು ಹೇಳಿಕೊಡುತ್ತಿದ್ದ ನೃತ್ಯ ಜೀವನಾಧರಕ್ಕೆ ಆಯ್ತು. ಸಂತೆ ಮಾರುಕಟ್ಟೆಯಲ್ಲಿ, ದನದ ಸಂತೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಹಬ್ಬ-ಹರಿದಿನ, ಜಾತ್ರೆಗಳಲ್ಲಿ ನಾನು ನೃತ್ಯ ಮಾಡಿ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಿತ್ತು.

ನಾನು ನಡೆದುಕೊಂಡು ಬರುವಾಗ ರೈತರಿರುವ ಹೊಲ-ಗದ್ದೆಗಳಿಗೆ ಹೋಗಿ ನೃತ್ಯ ಮಾಡಿದಾಗ ಅವರು ಕೊಡುತ್ತಿದ್ದ ಕಾಸು, ಊಟಕ್ಕೆ ಸಾಲುತ್ತಿತ್ತು. ಎಷ್ಟೊ ಸಂದರ್ಭಗಳಲ್ಲಿ ಊಟಕ್ಕಾಗಿ ಮದುವೆ ಸಮಾರಂಭಗಳಿಗೆ ಭಾಗವಹಿಸಿ ನೃತ್ಯ ಮಾಡಿ ಊಟ ಮಾಡಿಕೊಂಡು ಬರುತ್ತಿದ್ದೆ ಎಂದು ಹೇಳುವಾಗ ಗದ್ಗದಿತವಾದರು.

ಪ್ರಶಸ್ತಿ ಸುರಿಮಳೆ

ಪ್ರಶಸ್ತಿ ಸುರಿಮಳೆ

2006 ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2007 ಜಾನಪದ ಜ್ಞಾನ ಪ್ರಶಸ್ತಿ, 2008 ಜಾನಪದ ಲೋಕ ಪ್ರಶಸ್ತಿ, 2010 ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2012 ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ, 2014 ಸಮಾಜ ಸಖಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸರಕಾರ ಇವರನ್ನು ಜಾನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಪದ್ಮಶ್ರೀ ಪ್ರಶಸ್ತಿ ಬಂದಿರುವುದು ನನ್ನಂತಹ ತೃತಿಯ ಲಿಂಗಿಗಳಿಗೆ ಮತ್ತು ಕರ್ನಾಟಕದ ಜನತೆಗೆ ಸಲ್ಲುವಂತಹ ಗೌರವವಾಗಿದೆ. ನನ್ನ ಜೀವನಾಧಾರಿತ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮಾಡಿರುವುದು ಖುಷಿ ತಂದಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತೆ ಮಂಜಮ್ಮ ಜೋಗ್ತಿ ಹೇಳಿದರು.

English summary
Gulbarga University Graduate students will read the biography of Mata Manjamma Jogati, Chairperson of the Karnataka Folk Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X