ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸೇವೆ- ಇಲ್ಲಿದೆ ಮಾಹಿತಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಅಕ್ಟೋಬರ್‌, 31: ತೋರಣಗಲ್ಲಿನಲ್ಲಿರುವ ಜೆಎಸ್‌ಡಬ್ಲ್ಯೂ ಸಮೂಹದ ಜಿಂದಾಲ್ ವಿಜಯನಗರ ಏರ್ಪೋರ್ಟ್‌ನಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನ ಸೇವೆಗೆ ಚಾಲನೆ ನೀಡಲಾಯಿತು. ಅಲಿಯನ್ಸ್ ಏರ್ ಸಂಸ್ಥೆಯ ವಿಮಾನಗಳ ಸೇವೆ ಒದಗಿಸಲಿದೆ. ಅಲಯನ್ಸ್ ಏರ್, ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಬಳ್ಳಾರಿಯ ವಿದ್ಯಾನಗರದಿಂದ ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಚಾರ ನಡೆಸಲಿದೆ.

ಸಂಡೂರು ಶಾಸಕ ಇ ತುಕಾರಾಂ, ಜಿಲ್ಲಾಧಿಕಾರಿ ಪವಕುಮಾರ್‌, ಮಲಪಾಟಿ, ಜೆಎಸ್‌ಡಬ್ಲ್ಯೂ, ಸೀಲ್ ವಿಜಯನಗರ ಮತ್ತು ಸೇಲಂ ವರ್ಕ್, ಜೊತೆಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಅಲಯನ್ಸ್ ಏರ್ ಅಧಿಕಾರಿಗಳು, ಬಳ್ಳಾರಿ ಜಿಲ್ಲಾಡಳಿತದ ತಂಡ ಮತ್ತು ಜೆಎಸ್‌ಡಬ್ಲ್ಯೂ ಸಮೂಹದ ಇತರ ಅಧಿಕಾರಿಗಳು ವಿಮಾನಯಾನಕ್ಕೆ ಚಾಲನೆ ನೀಡಿದರು. ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನಲ್ಲಿ ದರೋಜಿ ಕರಡಿಧಾಮ, ಸಂಡೂರು ಕಬ್ಬಿಣದ ಅದಿರು ಗಣಿ ಮತ್ತು ಬಳ್ಳಾರಿ ಕೋಟೆಯಂತಹ ಹಲವಾರು ಪ್ರವಾಸಿ ತಾಣಗಳಿವೆ. ಹೈದರಾಬಾದ್‌ನಿಂದ ಹಂಪಿ, ಸಂಡೂರು, ಬಳ್ಳಾರಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಹೊಸ ವಾಯು ಮಾರ್ಗದಿಂದ ಅಂತರಾಷ್ಟ್ರೀಯ ಪ್ರವಾಸಿಗರಿಗೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ.

ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ, ವೇಳಾಪಟ್ಟಿಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ, ವೇಳಾಪಟ್ಟಿ

 ಪಿ.ಕೆ.ಮುರುಗನ್ ಅವರ ಅಭಿಪ್ರಾಯವೇನು?

ಪಿ.ಕೆ.ಮುರುಗನ್ ಅವರ ಅಭಿಪ್ರಾಯವೇನು?

ಜೆಎಸ್‌ಡಬ್ಲ್ಯೂ ಸ್ಟೀಲ್ ವಿಜಯನಗರ ಮತ್ತು ಸೇಲಂ ವರ್ಕ್‌ನ ಅಧ್ಯಕ್ಷರಾದ ಪಿ.ಕೆ.ಮುರುಗನ್ ಮಾತನಾಡಿ, ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. ಸೌಲಭ್ಯವನ್ನು ಇನ್ನಷ್ಟು ಬಲಪಡಿಸಲು, ಜೆಎಸ್‌ಡಬ್ಲ್ಯೂ ಸಮೂಹವೂ ಕಳೆದ ಮೂರು ವರ್ಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ನವೀಕರಣಕ್ಕಾಗಿ 48 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಜೊತೆಗೆ ಟರ್ಮಿನಲ್ ಸೌಲಭ್ಯಗಳು ಮತ್ತು ಯಾತ್ರಿಗಳ ಸುರಕ್ಷತೆಯನ್ನು ಸುಧಾರಿಸಲು 12 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಮುಂದಿನ 6-8 ತಿಂಗಳಿನಲ್ಲಿ ಇದು ಪೂರ್ಣಗೊಳ್ಳಲಿದೆ ಎಂದರು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಸಂಪುಟ ಸಭೆ ಅನುಮೋದನೆವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಸಂಪುಟ ಸಭೆ ಅನುಮೋದನೆ

 ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕ

ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕ

ಪ್ರಧಾನಮಂತ್ರಿಯವರ ಉಡಾನ್ ಯೋಜನೆಯು ಭಾರತದ ಜನರಿಗೆ ಅನುಕೂಲಕರ ಪ್ರಯಾಣದ ಆಯ್ಕೆ ಯಾಗಿದೆ ಎಂದು ಈ ಮೂಲಕ ಸಾಬೀತುಪಡಿಸಿದೆ.

ಅಲಯನ್ಸ್ ಏರ್, ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿದ್ಯಾನಗರದಿಂದ ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕಿಸುವ ಏಕೈಕ ವಿಮಾನಯಾನ ಸಂಸ್ಥೆ ಇದಾಗಿದೆ. ಮತ್ತು ಇದು ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಉಡಾನ್‌ನಲ್ಲಿ ಉತ್ಸುಕವಾಗಿ ಭಾಗವಹಿಸಿದೆ. ಈ ಭಾಗದ ಜನತೆಗೆ ಇದು ಸಹಾಯ ಆಗುವುದಲ್ಲದೆ, ಎಲ್ಲಾ ಯಾತ್ರಿಕರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸಂಪರ್ಕವನ್ನು ಒದಗಿಸುತ್ತದೆ. ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉಕ್ಕು ಮತ್ತು ಗಣಿಗಾರಿಕೆ ಕಂಪನಿಗಳಿವೆ. ಇದರಿಂದ ಬಳ್ಳಾರಿ ಜಿಲ್ಲೆಯು ಪ್ರಮುಖ ವ್ಯಾಪಾರೋದ್ಯಮ ಮತ್ತು ಪ್ರವಾಸಿ ತಾಣವಾಗಿದೆ. ಸಲ್ಲದೆ ಈ ಪ್ರದೇಶ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯನ್ನು ಸಹ ಹೊಂದಿದೆ.

 ಟ್ರೂಜೆಟ್ ಕಂಪನಿಯಿಂದ ವಿಮಾನ ಹಾರಾಟ

ಟ್ರೂಜೆಟ್ ಕಂಪನಿಯಿಂದ ವಿಮಾನ ಹಾರಾಟ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿದ್ಯಾನಗರ (ಬಳ್ಳಾರಿ)ಯಿಂದ ಬೆಂಗಳೂರು, ಹೈದರಾಬಾದ್ ನಗರಗಳಿಗೆ ನೇರ ವಿಮಾನ ಯಾನ, ಪ್ರತಿದಿನ ಹಾರಾಟ ಪ್ರಾರಂಭವಾಗುತ್ತಿದೆ. 2017ರಲ್ಲಿ ಟ್ರೂಜೆಟ್ ಕಂಪನಿ ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮಾರ್ಚ್‌ನಲ್ಲಿ ಹಾರಾಟ ನಿಲ್ಲಿಸಲಾಗಿತ್ತು. ಇದೀಗ ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ಹಾರಾಟದ ಅನುಮತಿ ಪಡೆದಿದೆ. ಅಕ್ಟೋಬರ್‌ 30 ರಿಂದ ವಿಮಾನ ಹಾರಾಟ ಆರಂಭವಾಗಿದೆ. ವಿಮಾನದ ಬುಕ್ಕಿಂಗ್ ಸಹ ಪ್ರಾರಂಭಗೊಂಡಿದೆ.

 ವಿಮಾನ ಹಾರಾಟದ ಸಮಯದ ವಿವರ

ವಿಮಾನ ಹಾರಾಟದ ಸಮಯದ ವಿವರ

ಅಲಯನ್ಸ್ ಏರ್ ವಾರದ ಏಳು ದಿನವೂ ಉಭಯ ನಗರಗಳ ನಡುವೆ ವಿಮಾನ ಹಾರಾಟ ನಡೆಸಲಿದೆ. ಬಳ್ಳಾರಿ-ಹೈದರಾಬಾದ್ ವಿಮಾನವು ಪ್ರತಿದಿನ ಬೆಳಗ್ಗೆ 8.55ಕ್ಕೆ ಹೈದರಾಬಾದ್‌ನಿಂದ ಹೊರಟು 10.20ಕ್ಕೆ ಬಳ್ಳಾರಿಗೆ ಆಗಮಿಸಲಿದೆ. ಬಳ್ಳಾರಿಯ ವಿದ್ಯಾನಗರದಿಂದ 10.50ಕ್ಕೆ ಹೊರಟು, 12.20ಕ್ಕೆ ಹೈದರಾಬಾದ್‌ ತಲುಪಲಿದೆ.

English summary
Flight services to Bengaluru and Hyderabad were started from JSW Group's Jindal Vijayanagar Airport at Torangallu of ballari district. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X