ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಂದ್; ಗೋಡೆಹಾಳ್ ಕ್ರಾಸ್ ನಿಂದ ಬಳ್ಳಾರಿಗೆ ಎತ್ತಿನ ಬಂಡಿ ಜಾಥಾ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 28: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯಿದೆ ಸೇರಿದಂತೆ ನಾನಾ ತಿದ್ದುಪಡಿ ಕಾಯಿದೆಗಳನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಣಿನಾಡು ಬಳ್ಳಾರಿಯಲ್ಲಿಂದು ಎತ್ತಿನಬಂಡಿ ಜಾಥಾ ನಡೆಸುವ ಮುಖೇನ ವಿಶೇಷ ಗಮನ ಸೆಳೆಯಲಾಯಿತು.

ಹಿರಿಯ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಚಾಗನೂರು-ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿಯಿಂದ ಗೋಡೆಹಾಳ್ ಕ್ರಾಸ್ ನಿಂದ ಬಳ್ಳಾರಿವರೆಗೆ ಸೋಮವಾರ ಎತ್ತಿನ ಬಂಡಿ ಜಾಥಾ ನಡೆಸಲಾಯಿತು.

Karnataka Bandh Live Updates: ಕರ್ನಾಟಕ ಬಂದ್: ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರೈತ ಪ್ರತಿಭಟನೆಯ ಬಿಸಿKarnataka Bandh Live Updates: ಕರ್ನಾಟಕ ಬಂದ್: ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರೈತ ಪ್ರತಿಭಟನೆಯ ಬಿಸಿ

Ballari: Farmers Conducting Bullock Card Jatha In Karnataka Bandh

ರೈತ ವಿರೋಧಿ ಕಾಯಿದೆಯನ್ನು ವಿರೋಧಿಸಿ ಗೋಡೆಹಾಳ್ ಗ್ರಾಮದಿಂದ ಜಾಗೃತಿ ಜಾಥಾ ಶುರುವಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಆಗಮಿಸಲಿದೆ. ಬಳ್ಳಾರಿ ತಾಲೂಕಿನ ಚಾಗನೂರು, ಬೂದಿಹಾಳ್, ಗೋಡೆಹಾಳ್, ಅಸುಂಡಿ ಗ್ರಾಮದ ರೈತರು ಎತ್ತಿನ ಬಂಡಿಗಳ ಮೂಲಕ‌ ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Farmers in ballari protested against amendment of land reform act and other agriculture acts by conducting bullock cart jatha,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X