ವಿಜಯನಗರ ಜಿಲ್ಲೆಯಲ್ಲಿ ಭೂಕಂಪ: ಜನರು ಆತಂಕ, ಧೈರ್ಯ ತುಂಬಿದ ಜಿಲ್ಲಾಡಳಿತ
ಬೆಂಗಳೂರು, ಮಾರ್ಚ್ 28: ಭಾರತದ ದೇಶದ ವಿವಿಧ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಭೂಕಂಪನದಿಂದ ಜನರು ಆತಂಕಗೊಂಡ ಘಟನೆ ಇದೀಗ ಕರ್ನಾಟಕದಲ್ಲಿ ನಡೆದಿದೆ.
ಹೌದು, ದೆಹಲಿ, ನಾಗಪುರದಲ್ಲಿ ಇನ್ನಿತರ ಕಡೆಗಳಂತೆ ಕರ್ನಾಟಕದ ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ (ಭೂಕಂಪದ) ಆಗಿದೆ. ಇದರಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಭೂಕಂಪದ ಆಗುವುದಿಲ್ಲ ಎಂದುಕೊಂಡಿದ್ದ ಜನತೆಗೆ ಈ ಘಟನೆ ಚಿಂತೆಗೀಡಾಗುವಂತೆ ಮಾಡಿದೆ.

ವಿಜಯನಗರ ಜಿಲ್ಲೆಯ ಡಣಾಪುರ ಗ್ರಾಮದಲ್ಲಿ ಭೂಕಂಪ ಆಗಿರುವ ಬಗ್ಗೆ ರಿಕ್ಟರ್ ಮಾಪನದಲ್ಲಿ ಭೂಮಿ ಕಂಪಿಸಿದ್ದರ ಬಗ್ಗೆ ವರದಿ ಮಾಡಲಾಗಿದೆ. ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಮಂಗಳವಾರ ಭೂಕಂಪನ ಸಂಭವಿಸಿದೆ ಎಂದು ರಿಕ್ಟರ್ ಮಾಪನದಲ್ಲಿ ದಾಖಲಾದ ವರದಿ ಮಾಹಿತಿ ನೀಡಿದೆ.
ಅಯ್ಯನಹಳ್ಳಿ ಭೂಮಿಯು ಕಂಪಿಸಿದ್ದು, 15 ರಿಂದ 20 ಕಿಲೋ ಮೀಟರ್ ಸುತ್ತ ಮುತ್ತಲಿನ ಪ್ರದೇಶ ಜನರಿಗೆ ಭೂಮಿ ಕಂಪಿಸಿದ ಅನುಭವ ಪಡೆದಿದ್ದಾರೆ. ಇಷ್ಟು ಭೌಗೋಳಿಕ ವ್ಯಾಪ್ತಿಯ ಪ್ರದೇಶದ ಗ್ರಾಮಸ್ಥರು ಭಯಬೀತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಡಳಿತ ಹೇಳಿದ ಮಾಹಿತಿ ಇದು
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದ ಭೂಕಂಪನದ ತೀವ್ರತೆ ಆತಂಕಗೊಳ್ಳುವಷ್ಟು ಇಲ್ಲ. ಕಡಿಮೆ ಕಂಪನಗಳು ಇಲ್ಲಿ ಕಂಡು ಬಂದಿವೆ. ಆದ್ದರಿಂದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಇನ್ನು ಭೂಮಿಯ ಮೇಲ್ಭಾಗವೂ ಕೂಡ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಅನುಭವ ಉಂಟಾಗಿದೆ. ಜನರು ಯಾವ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು, ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಈ ಮಾಹಿತಿಯನ್ನು ಭೂಮಿ ಕಂಪಿಸಿದ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರಿಗೂ ತಿಳಿಸಲಾಗಿದೆ ಎಂದು ವರದಿ ಆಗಿದೆ.

ಇತ್ತೀಚೆಗೆ ನವದೆಹಲಿಯಲ್ಲೂ ಭೂಕಂಪ: ಎಲ್ಲೆಡೆ ಆತಂಕ
ಕಳೆದ ವಾರವಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾರ್ಚ್ 21ರಂದು ಪ್ರಭಲ ಭೂಕಂಪನ ಸಂಭವಿಸಿತ್ತು. ಅಲ್ಲಿನರಿಕ್ಟರ್ ಮಾಪಕದಲ್ಲಿ ಶೇಕಡಾ 6.6 ರಷ್ಟು ಭಾರೀ ತೀವ್ರತೆ ಹೊಂದಿದ್ದ ಭೂಕಂಪ ಆಗಿತ್ತು. ಭೂಕಂಪದ ಕಂಪನಗಳ ಕೇಂದ್ರಬಿಂದು ಆಷ್ಘಾನಿಸ್ತಾನದ ಹಿಂದುಕುಷ್ ಪರ್ವತದಿಂದ ಹರಿದು ಬಂದಿದ್ದರ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರು.
ದೆಹಲಿಯಲ್ಲಿ ಭೂಕಂಪನವು ಭಾರೀ ತೀವ್ರತೆ ಹೊಂದಿತ್ತು. ಕಾರಣ ಅದರ ಅನುಭವ ನೆರೆಹೊರೆಯ ದೇಶಗಳಾದ ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಆಷ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಆಗಿದೆ ಎನ್ನಲಾಗಿದೆ. ಮಾರ್ಚ್ 21ರಂದು ರಾತ್ರಿ 10ಗಂಟೆ ಹೊತ್ತಿಗೆ ಭೂಕಂಪನ ಉಂಟಾಗಿತ್ತು. ಕೂಡಲೇ ಗಾಬರಿಂದ ಜನರು ತಮ್ಮ ಮನೆ, ಹೋಟೆಲ್, ಕಚೇರಿ ಸೇರಿದಂತೆ ತಾವಿದ್ದ ಸ್ಥಳದಿಂದ ಹೊರಕ್ಕೆ ಬಂದರು.
ಇದರ ಪ್ರಭಾವ ಕೇವಲ ದೆಹಲಿಯಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ರಾಜ್ಯಗಳಾದ ಪಂಜಾಬ್, ಹರಿಯಾಣ, ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿ ಕಂಡು ಬಂತು. ಜನ ಮನೆಯಿಂದ ಹೊರ ಬಂದ ದೃಷ್ಟಿ ಈ ರಾಜ್ಯಗಳಲ್ಲಿ ಸಾಮಾನ್ಯ ಎಂಬಂತಾಗಿತ್ತು. ಮಕ್ಕಳು ಅಳತೊಡಗಿದ್ದವು ಎಂದು ಸ್ಥಳಿಯ ನಿವಾಸಿಗಳೊಬ್ಬರು ತಿಳಿಸಿದ್ದಾರೆ.
ಇರಾನ್‌ನಲ್ಲಿ ಭೂಕಂಪ: ಹತ್ತಾರು ಮಂದಿಗೆ ಗಾಯ
ಇತ್ತೀಚೆಗೆ ಇರಾನ್ ದೇಶದಲ್ಲೂ ಸಹ ಭೀಕರ ಭೂಕಂಪ ಸಂಭವಿಸಿತ್ತು. ಇದರ ತೀವ್ರ ಹೆಚ್ಚಿದ್ದರಿಂದ ಒಟ್ಟು ಸುಮಾರು 160ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿತ್ತು. ಭೂಕಂಪಕ್ಕೆ ಹಲವು ಮನೆಗಳಿಗೆ ಘಾಸಿಯಾಗಿವೆ. ಮನೆ ಗೋಡೆಗಳು ಬಿರುಕು ಬಿಟ್ಟಿದ್ದು, ಇರಾನ್ ವಾಯುವ್ಯದಲ್ಲಿ ಸಂಭವಿಸಿದ ಆ ಭೂಕಂಪದ ತೀವ್ರ ಶೇಕಡಾ 5.6 ಎಂದು ವರದಿ ಆಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications