ಬಳ್ಳಾರಿ ಅಪಘಾತ ಪ್ರಕರಣ: ಸ್ಫೋಟಕ ಮಾಹಿತಿ ಹೊರಹಾಕಿದ ವೈದ್ಯ
Recommended Video
ಬಳ್ಳಾರಿ, ಫೆಬ್ರವರಿ 13: ಬಳ್ಳಾರಿಯ ಹೊಸಪೇಟೆ ಸಮೀಪ ನಡೆದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಕಾರಿ ಹೇಳಿಕೆಗಳೇ ಕೇಳಿಬರುತ್ತಿವೆ. "ಕಾರಿಗೂ ನಮಗೂ ಯಾವುದೇ ಸಂಬಂಧವಿಲ್ಲ" ಎಂದು ಆರ್ ಅಶೋಕ್ ಹೇಳುತ್ತಿದ್ದು, ಜಿಲ್ಲಾ ಎಸ್ಪಿ ಕೂಡ "ಅಶೋಕ್ ಅವರ ಮಗ ಅಪಘಾತ ನಡೆದ ಕಾರಿನಲ್ಲಿರಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹೊಸಪೇಟೆ ತಜ್ಞವೈದ್ಯ ಮಹಂತಪ್ಪ ಅವರೂ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಸೋಮವಾರ ಮರಿಯಮ್ಮನಹಳ್ಳಿ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್, ಸಚಿವ ಆರ್ ಅಶೋಕ್ ಅವರ ಸಂಬಂಧಿ ಎಂದು ತಮಗೆ ಮರಿಯಮ್ಮನಹಳ್ಳಿ ಸಬ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ತಡರಾತ್ರಿ 12ರ ನಂತರ ಪೋಸ್ಟ್ ಮಾರ್ಟಮ್ ಮಾಡಿ ಶವ ಕೊಡಲಾಯಿತು ಎಂದೂ ಮಾಹಿತಿ ನೀಡಿದ್ದಾರೆ.
"ಐದು ಜನ ಚಿಕಿತ್ಸೆಗಾಗಿ ಬಂದಿದ್ದರು. ಶಿವಕುಮಾರ್, ರಾಹುಲ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಾಕೇಶ್ ಗೆ ಬೆನ್ನು ಮೂಳೆ ಮುರಿದಿತ್ತು. ವರುಣ್ ಚಿಕಿತ್ಸೆ ಪಡೆಯದೆ ಹಾಗೇ ಹೋಗಿದ್ದಾರೆ. ಆಂಬುಲೆನ್ಸ್ ಕೊಡುವುದಾಗಿ ಹೇಳಿದರೂ ತಾವೇ ಕಾರಿನಲ್ಲಿ ಕರೆದುಕೊಂಡು ಹೋದರು" ಎಂದು ತಿಳಿಸಿದ್ದಾರೆ.












Click it and Unblock the Notifications