ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಅಭ್ಯರ್ಥಿ ರಾಹುಲ್: ಸಹಮತ ಇದೆ ಎಂದು ದೇವೇಗೌಡ ಘೋಷಣೆ

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 30: ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿಯಾಗುವುದಾಗಿ ರಾಹುಲ್ ಗಾಂಧಿ ಹೆಸರು ಅಂತಿಮವಾದರೆ ತನ್ನ ಸಹಮತವಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ.

ದೇವೇಗೌಡ್ರು ಪ್ರಧಾನಿಯಾಗಿದ್ದು ಆಕಸ್ಮಿಕ, ಮುಂದೆ ಎಂದೂ ಹೀಗಾಗಬಾರದು: ಶರದ್ ಪವಾರ್ದೇವೇಗೌಡ್ರು ಪ್ರಧಾನಿಯಾಗಿದ್ದು ಆಕಸ್ಮಿಕ, ಮುಂದೆ ಎಂದೂ ಹೀಗಾಗಬಾರದು: ಶರದ್ ಪವಾರ್

ಇದೇ ಮೊದಲ ಬಾರಿಗೆ 2019ರ ಪ್ರಧಾನಿ ಅಭ್ಯರ್ಥಿ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಬಳ್ಳಾರಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಯಾರು ಪ್ರಧಾನಮಂತ್ರಿ ಅಭ್ಯರ್ಥಿಯಾಗಬೇಕು ಎಂಬುದನ್ನು ಕಾಂಗ್ರೆಸ್ ಪಕ್ಷವೇ ನಿರ್ಧರಿಸುತ್ತದೆ.

Devegowda accepts Rahul Gandhi to be PM candidate

ಜೆಡಿಎಸ್‌ ರಾಜ್ಯಾಧ್ಯಕ್ಷರ ಶೀಘ್ರ ಬದಲಾವಣೆ: ಎಚ್‌ಡಿ ದೇವೇಗೌಡ ಜೆಡಿಎಸ್‌ ರಾಜ್ಯಾಧ್ಯಕ್ಷರ ಶೀಘ್ರ ಬದಲಾವಣೆ: ಎಚ್‌ಡಿ ದೇವೇಗೌಡ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂದಿನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಆಗುವುದಾದರೆ ತಮ್ಮ ಸಹಮತವಿದೆ ಎಂದು ಹೇಳಿದರು.ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿರ್ಣಯವೇ ಅಂತಿಮ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

English summary
Former prime minister H.D. Devegowda has opined that he would accept AICC president Rahul Gandhi as prime minister candidate for 2019 parliament election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X