Darshan Thoogudeepa: ಕಿಲ್ಲಿಂಗ್ ಸ್ಟಾರ್ ಜೈಲಲ್ಲಿದ್ರೂ ದೌಲತ್ತಿಗೇನು ಕಡಿಮೆ ಇಲ್ಲ- ಮತ್ತೊಂದು ಬೇಡಿಕೆ ಇಟ್ಟ ದರ್ಶನ್
ಬಳ್ಳಾರಿ ಸೆಪ್ಟೆಂಬರ್ 8: ಕಿಲ್ಲಿಂಗ್ ಸ್ಟಾರ್ ಜೈಲಲ್ಲಿದ್ರೂ ದೌಲತ್ತಿಗೇನು ಕಡಿಮೆ ಇಲ್ಲ. ಬಳ್ಳಾರಿ ಜೈಲಿನಲ್ಲಿ ಒಂದೊಂದೇ ಬೇಡಿಕೆ ಈಡೇರಿಸಿಕೊಳ್ಳುತ್ತಿದ್ದಾನೆ ದಾಸ. ಒಂದು ಬೇಡಿಕೆ ಈಡೇರಿಸುವುದರೊಳಗೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ದರ್ಶನ್ ಬೇಡಿಕೆಗೆ ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸುಸ್ತಾಗಿದ್ದಾರೆ.
ಸರ್ಜಿಕಲ್ ಚೇರ್ ಕೊಡಿ, ವೆಸ್ಟರ್ನ್ ಟಾಯ್ಲೆಟ್ ಕೊಡಿ, ಟಿವಿ ಕೊಡಿ ಎಂದು ಕೇಳಿದ್ದ ದರ್ಶನ್ ಈಗ ಚಪಾತಿ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಹೌದು.. ಟಿವಿ ಡಿಮ್ಯಾಂಡ್ ಬೆನ್ನಲ್ಲೇ ಮತ್ತೊಂದು ಬೇಡಿಕೆ ಇಟ್ಟಿದ್ದಾನೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ದೇಹದ ಫಿಟ್ನೆಸ್‌ಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಪಾತಿ ನೀಡುವಂತೆ ದರ್ಶನ್ ಬೇಡಿಕೆ ಇಟ್ಟಿದ್ದಾರಂತೆ. ಈ ಕುರಿತು ಪರಿಶೀಲಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗುತ್ತಿದೆ.

ಜೈಲಿನಲ್ಲಿ ಮೆನುವಿನಂತೆ ಪ್ರತಿ ದಿನ ಕೈದಿಗಳಿಗೆ ಆಹಾರ ನೀಡಲಾಗುತ್ತದೆ. ಇದರ ಪ್ರಕಾರ ಪ್ರತಿ ದಿನ ಇಂತಿಷ್ಟೇ ಚಪಾತಿ ನೀಡಬೇಕು. ಇಂತಿಷ್ಟೇ ಅನ್ನ ನೀಡಬೇಕು ಅನ್ನೋ ನಿಯಮ ಇರುತ್ತದೆ. ಆದರೆ ದರ್ಶನ್ ಇದಕ್ಕಿಂತ ಹೆಚ್ಚಿನ ಚಪಾತಿ ಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಪರಿಶೀಲನೆ ಮಾಡುವುದಾಗಿ ಅಧಿಕಾರಿಗಳು ದರ್ಶನ್‌ಗೆ ತಿಳಿಸಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ನನಗೆ ಕೈದಿಗಳಿಗೆ ನೀಡುವ ಆಹಾರ ನೀಡಬೇಡಿ. ನನಗೆ ಈಗ ಕೊಡುವ ಆಹಾರದಲ್ಲೇ ಚಪಾತಿ ಹೆಚ್ಚು ಕೊಡಿ. ಇದರಿಂದ ನನ್ನ ದೇಹಕ್ಕೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಬಾಡಿ ಮೆಂಟೇನ್ ಮಾಡಲು ಆಗಲ್ಲ. ಸಾಕಷ್ಟು ಅನಾನುಕೂಲವಾಗುತ್ತದೆ. ಹೀಗಾಗಿ ನೀವು ಮುನ್ನೆಚ್ಚರಿಕೆ ಕ್ರಮವಾಗಿ ಮೊದಲೇ ಹೆಚ್ಚಿನ ಚಪಾತಿ ಕೊಡಬೇಕು ಎಂದು ದರ್ಶನ್ ಬೇಡಿಕೆ ಇಟ್ಟಿದ್ದಾರೆ.

ಆದರೆ ಜೈಲು ನಿಯಮದ ಪ್ರಕಾರ ಒಬ್ಬ ಜೈಲು ಕೈದಿಗೆ ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ನೀಡಬೇಕು ಎನ್ನುವ ನಿಯಮವಿದೆ. ಚಪಾತಿ, ಮುದ್ದೆ, ರೊಟ್ಟಿ, ತಿಂಡಿ ಎಲ್ಲವನ್ನೂ ಇಂತಿಷ್ಟೇ ಪ್ರಮಾಣದಲ್ಲಿ ನೀಡಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಎನ್ನುವುದು ಜೈಲಿನ ನಿಯಮವನ್ನು ಮೀರಿದ ಬೇಡಿಕೆಯಾಗಿದೆ. ಹೀಗಾಗಿ ದರ್ಶನ್ ಬೇಡಿದ್ದನ್ನೆಲ್ಲವೂ ಜೈಲಾಧಿಕಾರಿಗಳು ನೀಡಲು ಸಾಧ್ಯವಾಗುವುದಿಲ್ಲ.
ಯಾಕೆಂದರೆ ಬಳ್ಳಾರಿ ಜೈಲಿಗೆ ಬಂದಾಗಿನಿಂದಲೂ ದರ್ಶನ್ ದಿನಕ್ಕೊಂದು ಬೇಡಿಕೆ ಇಡುತ್ತಲೇ ಇದ್ದಾರೆ. ಬೇಡಿಕೆ ಗೈಡ್‌ಲೈನ್‌ನಲ್ಲಿ ಇದ್ದರೆ ಮಾತ್ರ ಅದನ್ನು ಪೂರೈಸಲಾಗುತ್ತದೆ. ಇಲ್ಲವಾದಲ್ಲಿ ಕೇಳಿದ್ದನ್ನೆಲ್ಲವೂ ನೀಡಲು ಆಗುವುದಿಲ್ಲ. ಒಂದು ವೇಳೆ ದರ್ಶನ್ ಕೇಳಿದ್ದನ್ನು ನೀಡಿದರೆ ಇತರ ಕೈದಿಗಳಿಗೆ ಹಾಗೂ ದರ್ಶನ್‌ಗೆ ತಾರತಮ್ಯ ಮಾಡಿದಂತಾಗುತ್ತದೆ. ಹೀಗಾಗಿ ದರ್ಶನ್‌ನ ಈ ಬೇಡಿಕೆ ಈಡೇರುವುದು ಕಷ್ಟ ಎನ್ನಲಾಗುತ್ತಿದೆ.
ದರ್ಶನ್‌ಗೆ ಗಣೆಶ ದರ್ಶನ್ ಭಾಗ್ಯ ಇಲ್ಲ
ಎಲ್ಲಾ ಕಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಭಕ್ತಿಯಿಂದ ಗೌರಿ ಹಬ್ಬ ಆಚರಿಸಿ ಈಗ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ ಈ ಬಾರಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಗಣೇಶ ಹಬ್ಬವನ್ನು ಆಚರಿಸಲು ಆಗ್ತಾ ಇಲ್ಲ. ಅವರು ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಜೈಲಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಕೈದಿಗಳಿಗಾಗಿ ಪ್ರತಿ ವರ್ಷ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಬ್ಬದ ಪ್ರಯುಕ್ತ ಎಲ್ಲಾ ಕೈದಿಗಳಿಗೆ ಮಧ್ಯಾಹ್ನ ಸಿಹಿ ಊಟ ಕೂಡಾ ನೀಡಲಾಗುತ್ತದೆ. ಆದರೆ ನಟ ದರ್ಶನ್‌ಗೆ ಗಣೇಶನ ದರ್ಶನ ಭಾಗ್ಯ ಇಲ್ಲ ಎನ್ನಲಾಗಿದೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿರುವ ನಟ ದರ್ಶನ್ ಭದ್ರತೆ ದೃಷ್ಟಿಯಿಂದ ನಟ ದರ್ಶನ್‌ಗೆ ಗಣೇಶನ ದರ್ಶನ್ ಭಾಗ್ಯ ಇಲ್ಲ ಎನ್ನಲಾಗಿದೆ.












Click it and Unblock the Notifications