Actor Darshan: ಬಳ್ಳಾರಿ ಜೈಲಿನಲ್ಲಿ ಪೊಲೀಸರ ಚಿಂತೆ ಹೆಚ್ಚಿಸಿದ ದರ್ಶನ್!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಸೋಮವಾರ ಆದೇಶ ಪ್ರಕಟವಾಗಲಿದೆ. ದರ್ಶನ್‌ಗೆ ಜಾಮೀನು ಸಿಗಲಿ ಎಂದು ಕುಟುಂಬದವರು, ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ದರ್ಶನ್ ಕೂಡ ತಮಗೆ ಜಾಮೀನು ಸಿಕ್ಕರೆ ಸಾಕು ಎಂದುಕೊಂಡಿದ್ದಾರೆ. ಜಾಮೀನು ಆದೇಶ ಪ್ರಕಟವಾಗುವ ಮುನ್ನವೇ ಬಳ್ಳಾರಿ ಜೈಲು ಸಿಬ್ಬಂದಿಗೆ ಹೊಸ ತಲೆನೋವು ಶುರುವಾಗಿದೆ.
ಬೆಂಗಳೂರಿನಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದ ಬಳಿಕ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಪರಪ್ಪನ ಅಗ್ರಹಾರದಲ್ಲಿದ್ದಾಗಲೇ ನಟ ದರ್ಶನ್ ತಮಗೆ ಬೆನ್ನು ನೋವು ಇದೆ ಎಂದು ಹೇಳಿದ್ದರು. ಜೈಲು ಊಟ ಬೇಡ ಮನೆ ಊಟ ಕೊಡುವಂತೆ ಕೂಡ ಮನವಿ ಮಾಡಿದ್ದರು. ಆದರೆ ಮನೆ ಊಟ ಕೊಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದರು.

ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಯಾವುದೇ ವಿಶೇಷ ಆತಿಥ್ಯ ಸಿಗುತ್ತಿಲ್ಲ. ಅವರಿಗೆ ಬೆಡ್ ಕೊಡುವಂತೆ ವಕೀಲರು ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದರೂ, ಸಿಬ್ಬಂದಿ ನಿರಾಕರಿಸಿದ್ದಾರೆ. ಚಾಪೆ ಮೇಲೆ ಮಲಗುವ ಕಾರಣ ದರ್ಶನ್‌ರ ಬೆನ್ನು ನೋವು ಹೆಚ್ಚಾಗಿದ್ದು, ದಿನೇ ದಿನೇ ಸಮಸ್ಯೆ ಗಂಭೀರವಾಗುತ್ತಿದೆ.
ಪೊಲೀಸರಿಗೆ ಹೊಸ ತಲೆನೋವು
ನಟ ದರ್ಶನ್ ಆರೋಗ್ಯ ಸಮಸ್ಯೆ ಇದೀಗ ಕಾರಾಗೃಹ ಸಿಬ್ಬಂದಿಗೆ ತಲೆನೋವಾಗಿದೆ. ದರ್ಶನ್ ಆರೋಗ್ಯ ತಪಾಸಣೆ ನಡೆಸಿರುವ ವೈದ್ಯರು ನೋವು ನಿವಾರಕ ಮಾತ್ರೆಗಳನ್ನು ಕೊಟ್ಟಿದ್ದಾರೆ. ದರ್ಶನ್‌ಗೆ ಚಿಕಿತ್ಸೆ ಪಡೆಯುವಂತೆ ಕೇಳಿದ್ದರು, ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ಅವರು ಒಪ್ಪಿಲ್ಲ, ಬೆಂಗಳೂರಿನಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ.
ಬಿಮ್ಸ್ ವೈದ್ಯರು ಜೈಲಿಗೆ ಬಂದು ದರ್ಶನ್‌ರ ಆರೋಗ್ಯದ ತಪಾಸಣೆ ನಡೆಸಿದ್ದಾರೆ ಎಂಆರ್ ಐ ಮತ್ತು ಇತರೆ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ಕೇಳಿದ್ದರೂ, ದರ್ಶನ್ ಅದಕ್ಕೆ ಒಪ್ಪುತ್ತಿಲ್ಲ. ದರ್ಶನ್ ಚಿಕಿತ್ಸೆಗೆ ಒಪ್ಪದೇ ಇರುವುದು ಜೈಲು ಸಿಬ್ಬಂದಿಗೆ ತಲೆನೋವಾಗಿದೆ. ದರ್ಶನ್ ಕುಟುಂಬದವರು ಭೇಟಿಗಾಗಿ ಜೈಲಿಗೆ ಬಂದಾಗ ಅವರ ಜೊತೆ ಮಾತನಾಡಿ, ದರ್ಶನ್ ಚಿಕಿತ್ಸೆ ಪಡೆಯುವಂತೆ ಮನವೊಲಿಸಲು ಕೇಳುವ ಸಾಧ್ಯತೆ ಇದೆ.
ಒಂದು ವೇಳೆ ಸೋಮವಾರ ನಟ ದರ್ಶನ್‌ಗೆ ಜಾಮೀನು ಸಿಕ್ಕರೆ ಜೈಲು ಸಿಬ್ಬಂದಿಯ ತಲೆನೋವು ಕಡಿಮೆಯಾಗಲಿದೆ. ಜಾಮೀನಿನ ಮೇಲೆ ಹೊರಬರುವ ದರ್ಶನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಸೋಮವಾರ ಜಾಮೀನು ಸಿಗದೇ ಇದ್ದರೆ, ದರ್ಶನ್ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಕೂಡ ಇದೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಾಡಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಸಾಕ್ಷಿಗಳನ್ನು ತಿರುಚಲಾಗಿದೆ ಎಂದು ವಾದಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿರುವ ಉಲ್ಲೇಖವಾಗಿರುವ ವಿಚಾರಗಳು, ಸಾಕ್ಷಿಗಳ ಹೇಳಿಕೆ, ಒದಗಿಸಿರುವ ಸಾಕ್ಷಿಗಳಲ್ಲಿದ್ದ ಲೋಪದೋಷಗಳನ್ನು ಮುಂದಿಟ್ಟುಕೊಂಡು ವಾದ ಮಾಡಿದ್ದು, ದರ್ಶನ್‌ಗೆ ಜಾಮೀನು ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications