ಕೊರೊನಾ ಸೋಂಕು ಹೆಚ್ಚಳ: ಹಂಪಿಯ ಸ್ಮಾರಕಗಳು ಮತ್ತು ಮ್ಯೂಸಿಯಂಗಳ ಪ್ರವೇಶಕ್ಕೆ ನಿಷೇಧ

ವಿಜಯನಗರ, ಏಪ್ರಿಲ್ 16: ದೇಶಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಪ್ರಸಿದ್ಧ ತಾಜ್ ಮಹಲ್ ಸೇರಿದಂತೆ ದೇಶದ ಇತರೆ ಪ್ರವಾಸಿ ತಾಣಗಳು 1 ತಿಂಗಳು ಮಚ್ಚಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶ ಹೊರಡಿಸಿದೆ.

ಅದೇ ರೀತಿ ಕರ್ನಾಟಕದ ಹಂಪಿ ಸ್ಮಾರಕಗಳು ಮತ್ತು ಮ್ಯೂಸಿಯಂಗಳ ಪ್ರವೇಶವನ್ನು ಇಂದಿನಿಂದಲೇ ಪ್ರವಾಸಿಗರ ನಿರ್ಬಂಧಕ್ಕೆ ಆದೇಶ ನೀಡಲಾಗಿದೆ.

ಇಡೀ ದೇಶಾದ್ಯಂತ ಕೊರೊನಾ ಎರಡನೇ ಅಲೆ ಶುರುವಾದ ಹಿನ್ನೆಲೆ ಐತಿಹಾಸಿಕ ಹಂಪಿ ಸೇರಿದಂತೆ ದೇಶದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಬಂದ್‌ಗೆ ಆದೇಶಿಸಲಾಗಿದೆ.

COVID-19 Surge: Hampi Monuments Closed For Visitors Till May 15

ಮುಂದಿನ ತಿಂಗಳು ಮೇ 15 ವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ಬಂದ್ ಮಾಡಲು ನಿರ್ಧಾರ ಮಾಡಲಾಗಿದ್ದು ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ನಿರ್ದೇಶಕ ಎನ್.ಕೆ ಪಾಠಕ್‌ರವರು ಆದೇಶ ಹೊರಡಿಸಿದ್ದಾರೆ.

COVID-19 Surge: Hampi Monuments Closed For Visitors Till May 15

ಹಂಪಿಯ ವಿಜಯ ವಿಠಲ್ ದೇವಸ್ಥಾನ, ಕಮಲ ಮಹಲ್, ಮತ್ತು ಕಮಲಾಪುರದಲ್ಲಿನ ಮ್ಯೂಸಿಯಂ ಬರುವ ಮೇ 15 ರವರೆಗೆ ವೀಕ್ಷಣೆ ಬಂದ್ ಆಗಲಿದ್ದು, ಹಂಪಿಯ ವಿರೂಪಾಕ್ಷ ದೇವರಿಗೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ಎಂದಿನಂತೆ ಸರಳವಾಗಿ ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+