• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವ್ಹಾವ್.. ಬಳ್ಳಾರಿಯಲ್ಲಿ 11 ಕೊರೊನಾ ವೈರಸ್ ಸೋಂಕಿತರು ಗುಣಮುಖ!

|

ಬಳ್ಳಾರಿ, ಮೇ.30: ನೊವೆಲ್ ಕೊರೊನಾ ವೈರಸ್ ಮಹಾಮಾರಿಯ ಸುಳಿಯಿಂದ ಪಾರಾದ 11 ಮಂದಿ ಸೋಂಕಿತರನ್ನು ಬಳ್ಳಾರಿಯಲ್ಲಿ ಹೂಗುಚ್ಛ ನೀಡುವ ಮೂಲಕ ಕೊರೊನಾ ವಾರಿಯರ್ಸ್ ಬೀಳ್ಕೊಡುಗೆ ನೀಡಿದರು. ಗುಣಮುಖರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಪ್ರತಿನಿತ್ಯ 100ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಶುಕ್ರವಾರ ಒಂದೇ ದಿನ 248 ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿತ್ತು.

ಕೋವಿಡ್ - 19 ಸೋಂಕಿತರ ಸಾವು; ದಾಖಲೆ ಬರೆದ ಮಹಾರಾಷ್ಟ್ರ

ಬಳ್ಳಾರಿ ಜಿಲ್ಲೆಯ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಶುಕ್ರವಾರ 9 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೂ 14 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದ 32 ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಇನ್ನು, ಜಿಲ್ಲೆಯಲ್ಲಿ ಇದುವರೆಗೂ ಮಹಾಮಾರಿ ಕೊರೊನಾ ವೈರಸ್ ಗೆ ಇಬ್ಬರು ಪ್ರಾಣ ಬಿಟ್ಟಿದ್ದಾರೆ.

ಬಳ್ಳಾರಿ ಕೊವಿಡ್-19 ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ವಿವರ:

P-930 - 18 ವರ್ಷದ ಯುವತಿ, ಮೂಲತಃ ಸಿರಗುಪ್ಪ ತಾಲೂಕಿನ ಗೋಸ್ ‌ಬಾಳು ಗ್ರಾಮ, ಆಂಧ್ರ ಪ್ರದೇಶದ ಗೂಳ್ಯಂದಿಂದ ಆಗಮಿಸಿದ್ದ ಟ್ರಾವೆಲ್ ಹಿಸ್ಟರಿ

P-1062 - 46 ವರ್ಷದ ಪುರುಷ, ಹರಪನಳ್ಳಿ ನಿವಾಸಿ, ಅಹಮದಾಬಾದ್‌ನಿಂದ ಬಂದ ಟ್ರಾವೆಲ್ ಹಿಸ್ಟರಿ

P-1947 - 11 ವರ್ಷದ ಬಾಲಕ, ಮೂಲತಃ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ, ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕ

P-1543 - 19 ವರ್ಷದ ಯುವಕ, ಬಳ್ಳಾರಿಯ ಇಂದಿರಾ ನಗರ, ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕ

P-1545 - 29 ವರ್ಷದ ಪುರುಷ, ಬಳ್ಳಾರಿ ತಾಲೂಕಿನ ನಾಗೆನಹಳ್ಳಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕ

P-1546 - 26 ವರ್ಷದ ಯುವತಿ, ಬಳ್ಳಾರಿಯ ರೂಪನಗುಡಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ

P-1948 - 31 ವರ್ಷದ ಮಹಿಳೆ, ಬಳ್ಳಾರಿ ತಾಲೂಕಿನ ಚಾಗನೂರು, ಮಹಾರಾಷ್ಟ್ರದಿಂದ ವಲಸೆ

P-1949 - 23 ವರ್ಷದ ಯುವಕ, ಹೊಸಪೇಟೆ ತಾಲೂಕಿನ ಸುಗ್ಗೆನಹಳ್ಳಿ, ಮಹಾರಾಷ್ಟ್ರದಿಂದ ವಲಸೆ

P-1963 - 45 ವರ್ಷದ ಮಹಿಳೆ, ಬಳ್ಳಾರಿಯ ಸುಲೇಮಾನ್ ಬೀದಿ

P-1964 - 29 ವರ್ಷದ ಮಹಿಳೆ, ಬಳ್ಳಾರಿಯ ರೂಪನಗುಡಿ ನಿವಾಸಿ, ಮಹಾರಾಷ್ಟ್ರದಿಂದ ವಲಸೆ

P-1965 - 35 ವರ್ಷದ ಮಹಿಳೆ, ಬಳ್ಳಾರಿಯ ರೂಪನಗುಡಿ, ಮಹಾರಾಷ್ಟ್ರದಿಂದ ವಲಸೆ.

English summary
Coronavirus: 11 Patients Cured And Discharge From Ballary Covid-19 Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X