ಬಲಿಗಾಗಿ ಬಾಯಿ ತೆರೆದಿವೆ ಕೊಳವೆ ಬಾವಿಗಳು: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಬಳ್ಳಾರಿ, ಜನವರಿ 18: ರಾಜ್ಯ ಸಕಾ೯ರವನ್ನು ನಿದ್ದೆಗೆಡಿಸಿದ್ದ ತೆರೆದ ಕೊಳವೆಬಾವಿಯಲ್ಲಿ ಮಗು ಬಿದ್ದಂತಹ ಅವಘಡಗಳು ಮತ್ತೆ ಮರುಕಳಿಸುವ ಎಲ್ಲಾ ಲಕ್ಷಣಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ನಿಮಾ೯ಣವಾಗಿದೆ.

ಕುರಿಹಟ್ಟಿ ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ ಗಳನ್ನು ಕೊರೆಸಲಾಗಿದ್ದು, ಅವುಗಳಲ್ಲಿ ಹತ್ತಾರು ಬೋರ್ ವೆಲ್ ಗಳು ಅನುಪಯುಕ್ತ ಕೊಳವೆ ಬಾವಿಗಳಾಗಿ ನಿಮಾ೯ಣವಾಗಿವೆ. ಅವುಗಳನ್ನು ಸುರಕ್ಷಿತವಾಗಿ ಮುಚ್ಚದೇ ಹಾಗೇ ಬಿಡಲಾಗಿದೆ.

ಜವಾಬ್ದಾರಿ ನಿವ೯ಹಿಸಬೇಕಾಗಿರುವ ಸ್ಥಳೀಯ ಆಡಳಿತದ ನಿಲ೯ಕ್ಷ್ಯದಿಂದಾಗಿ ಅವು ಬಲಿಗಾಗಿ ಬಾಯಿತೆರೆದು ಕುಳಿತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೊಳವೆ ಬಾವಿ ಪ್ರಕರಣ ವಿವಿದೆಡೆ ಜರುಗಿದ ಮೇಲೆ ಸಕಾ೯ರ ಹಾಗೂ ನ್ಯಾಯಾಲಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ತೆರೆದ ಕೊಳವೆಬಾವಿಗಳನ್ನು ಮುಚ್ಚಲು ಸ್ಥಳೀಯ ಆಡಳಿತಕ್ಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿ ಸೂಕ್ತ ಕ್ರಮಕ್ಕಾಗಿ ಸೂಚಿಸಲಾಗಿದೆ.

Borewells Are Opened in Kudligi Taluku: Villagers Demand To Action

ಆದರೆ ಇಲ್ಲಿಯ ಸ್ಥಳೀಯ ಆಡಳಿತ, ಮೇಲಾಧಿಕಾರಿಗಳ ಆದೇಶಕ್ಕೆ ಬಿಡಿಗಾಸಿನ ಕಿಮ್ಮತ್ತು ನೀಡಿಲ್ಲ. ಹತ್ತಾರು ಕೊಳವೆ ಬಾವಿಗಳು ಬಾಯಿತೆರೆದು ಕುಳಿತಿವೆ. ಗ್ರಾಮದ ಸಕಾ೯ರಿ ಶಾಲಾ ಆವರಣಕ್ಕೆ ಹೊಂದಿಕೊಂಡಂತೆ ಇರುವ ಅನುಪಯುಕ್ತ ತೆರೆದ ಕೊಳವೆ ಬಾವಿಯೊಂದು ಬಾಯ್ತೆರೆದಿದೆ.

Borewells Are Opened in Kudligi Taluku: Villagers Demand To Action

ಅದು ಶಾಲಾ ಮಕ್ಕಳನ್ನು ಯಾವ ಸಂದಭ೯ದಲ್ಲಿ ಬಲಿತೆಗೆದುಕೊಳ್ಳುತದೆಯೋ ಎಂಬ ಭಯದ ವಾತಾವರಣ ನಿಮಾ೯ಣವಾಗಿದೆ ಎಂದು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ತೆರೆದ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿಸುವ ಕ್ರಮಗಳನ್ನು ಜರುಗಿಸದೇ ಇರುವ ಸ್ಥಳೀಯ ಆಡಳಿತಾಧಿಕಾರಿ ನಿಲ೯ಕ್ಷ್ಯದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+