Get Updates
Get notified of breaking news, exclusive insights, and must-see stories!

ಬಳ್ಳಾರಿಯ ಗಡಗಿ ಚೆನ್ನಪ್ಪ ವೃತ್ತದ ಕ್ಲಾಕ್ ಟವರ್ ತೆರವು, ಕೈ-ಬಿಜೆಪಿ ಗುದ್ದಾಟ

ಬಳ್ಳಾರಿ, ಆಗಸ್ಟ್ 24: ದಶಕದಿಂದೆ ಸದ್ದು ಮಾಡಿದ್ದ ಗಣಿನಾಡಿನ ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಸ್ತಂಭದ ವಿಚಾರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ರಾತ್ರೋ ರಾತ್ರಿ ಟವರ್ ತೆರವುಗೊಳಿಸಿದ್ದಕ್ಕೆ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಡಬಲ್ ಗೇಮ್ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದಾರೆ.

ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಗಡಗಿ ಚೆನ್ನಪ್ಪ ವೃತ್ತದಲ್ಲಿ 1964 ರಲ್ಲಿ ಗಡಿಯಾರ ಸ್ತಂಭವನ್ನು ನಿರ್ಮಾಣ ಮಾಡಲಾಗಿತ್ತು. ತನ್ನದೇ ಇತಿಹಾಸ ಇರುವ ಈ ಗಡಿಯಾರ ಸ್ತಂಭ 2009ರಲ್ಲಿ ಬಿಜೆಪಿ ಸರ್ಕಾರದ ವೇಳೆ ರಾತ್ರೋ ರಾತ್ರಿ ತೆರವುಗೊಳಿಸಲಾಗಿತ್ತು. ಆ ವೇಳೆ ಕಾಂಗ್ರೆಸ್ ಇದಕ್ಕೆ ಆಕ್ಷೇಪ ಕೂಡ ವ್ಯಕ್ತಪಡಿಸಿತ್ತು. ಇದಾದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದೇ ವೃತ್ತದಲ್ಲಿ ಚಿಕ್ಕದಾದ ಗಡಿಯಾರ ಸ್ತಂಭ ನಿರ್ಮಾಣ ಮಾಡಲಾಗಿತ್ತು.

ಆದರೆ ಈಗ ಅಧಿಕಾರ ಬಂದ ಬಿಜೆಪಿ ಸರಕಾರ, ಅದರಲ್ಲೂ ಜಿಲ್ಲೆಯ ಪ್ರಭಾವಿ ಶ್ರೀರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ವೃತ್ತದಲ್ಲಿ ವಿದೇಶದಲ್ಲಿರುವಂತ ಎತ್ತರದ ಬೃಹತ್ ಗಡಿಯಾರ ಸ್ತಂಭ ನಿರ್ಮಾಣ ಮಾಡುವುದಕ್ಕಾಗಿ ಯೋಜನೆ ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಆದರೆ ಬಳ್ಳಾರಿ ಪಾಲಿಕೆಯ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ನಮಗೆ ಯಾವುದೇ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

140 ಅಡಿ ಗಡಿಯಾರಕ್ಕಾಗಿ 7 ಕೋಟಿ ರೂ ಬಿಡುಗಡೆ

140 ಅಡಿ ಗಡಿಯಾರಕ್ಕಾಗಿ 7 ಕೋಟಿ ರೂ ಬಿಡುಗಡೆ

140 ಅಡಿ ಎತ್ತರದ ಲೆಬನಾನ್ ಮಾದರಿಯ ಗಡಿಯಾರ ಸ್ತಂಭ ನಿರ್ಮಾಣ ಮಾಡಲು ಸರಕಾರದಿಂದ 7 ಕೋಟಿ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15 ರಂದು ನೂತನ ಕ್ಲಾಕ್ ಟವರ್ ನಿರ್ಮಾಣಕ್ಕೆ ಭೂಮಿ ಪೂಜೆ ಕೂಡ ಮಾಡಲಾಗಿದೆ. ಆದರೆ ಹೊಸ ಟವರ್ ನಿರ್ಮಾಣಕ್ಕೆ ಪಾಲಿಕೆಯಲ್ಲಿ ತಮಗೆ ತಿಳಿಸದೇ ಸಭೆ ಮಾಡಿರುವುದಕ್ಕೆ ಹಾಗೂ ಮಂಗಳವಾರ ರಾತ್ರೋ ರಾತ್ರಿ ಹಳೆಯ ಟವರ್ ತೆರವುಗೊಳಿಸಿರುವುದಕ್ಕೆ ಕಾಂಗ್ರೆಸ್‌ ನಾಯಕರ ಅಸಮಧಾನ ವ್ಯಕ್ತಪಡಿಸಿದ್ದಾರೆ

 ಕಾಂಗ್ರೆಸ್‌ ಸದಸ್ಯರ ಹಕ್ಕು ಚ್ಯುತಿ ಕೆಲಸ

ಕಾಂಗ್ರೆಸ್‌ ಸದಸ್ಯರ ಹಕ್ಕು ಚ್ಯುತಿ ಕೆಲಸ

ಸುಸಜ್ಜಿತ ಗಡಿಯಾರ ಗೋಪುರವನ್ನು ಮಹಾನಗರ ಪಾಲಿಕೆಯ ಅನುಮತಿ ಇಲ್ಲದೇ ತೆರವು ಮಾಡಿರುವುದಕ್ಕೆ ಶಾಸಕ ನಾಗ್ರೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದು, ಪಾಲಿಕೆಯ ಅನುಮತಿ ಇಲ್ಲದೇ ರಾತ್ರೋರಾತ್ರಿ ಏಕಾಏಕಿ ಗಡಿಯಾರ ಕಂಬ ತೆರವು ಮಾಡಲಾಗಿದೆ. ನಾವು ಅಭಿವೃದ್ಧಿಯ ವಿರುದ್ಧ ಇಲ್ಲ, ಆದರೆ ಪಾಲಿಕೆಯ ಚುನಾಯಿತ 26 ಕಾಂಗ್ರೆಸ್‌ ಸದಸ್ಯರ ಹಕ್ಕು ಚ್ಯುತಿ ಮಾಡುವ ಕೆಲಸ ನಡೆಯುತ್ತಿದೆ, ಜಿಲ್ಲಾಡಳಿತ ಯಾರ ಕೈಗೊಂಬೆ ಆಗಿದೆ ಎಂಬುದು ಗೊತ್ತಿಲ್ಲ ನಿಯಮ ಪಾಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಆಡಳಿತ ಪಕ್ಷದ ಅನುಮತಿಯಿಲ್ಲದೆ ಕಾಮಗಾರಿ

ಆಡಳಿತ ಪಕ್ಷದ ಅನುಮತಿಯಿಲ್ಲದೆ ಕಾಮಗಾರಿ

ನೂತನ ಕ್ಲಾಕ್ ಟವರ್ ನಿರ್ಮಾಣ ಸಂಬಂಧ ಮಹಾನಗರ ಪಾಲಿಕೆಯ ಸಭೆ ನಡೆಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತರೂಢ ಇದೆ. ಆದರೆ ಸಭೆಯಲ್ಲಿ 2009 ರಲ್ಲಿ ಕ್ಲಾಕ್ ಟವರ್ ಯಾವ ಉದ್ದೇಶಕ್ಕೆ ತೆರವುಗೊಳಿಸಲಾಗಿದೆ ಎನ್ನುವುದು ಇದುವರೆಗೆ ಬಳ್ಳಾರಿ ಜನರಿಗೆ ಗೊತ್ತಾಗಿಲ್ಲ. ಇದನ್ನ ಸ್ಪಷ್ಟನೆ ನೀಡಿ ಪಾಲಿಕೆಯಿಂದ ಎನ್ ಒಸಿ ಪಡೆದ ಬಳಿಕ ಟವರ್ ಕಾಮಗಾರಿ ಆರಂಭಿಸಬೇಕಿತ್ತು ಎಂದು ಕೈ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಡಬಲ್ ಗೇಮ್

ಕಾಂಗ್ರೆಸ್‌ನಿಂದ ಡಬಲ್ ಗೇಮ್

ಕೈ ಶಾಸಕರು ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರ ಆರೋಪಕ್ಕೆ ಬಳ್ಳಾರಿ‌ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ತಿರುಗೇಟು ನೀಡಿದ್ದಾರೆ. ಬಳ್ಳಾರಿ ನಗರವನ್ನ ನವ ಬಳ್ಳಾರಿ ಮಾಡ್ಬೇಕು ಎನ್ನುವ ಉದ್ದೇಶದಿಂದ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಪಾಲಿಕೆ ಸಭೆಯಲ್ಲಿ ಶಾಸಕರು, ಮೇಯರ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಈಗ ಇದಕ್ಕೆ ವಿರೋಧ ಮಾಡುವ ಮೂಲಕ ಡಬಲ್ ಗೇಮ್ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಕೈ ನಾಯಕರು ಸಹಕರಿಸಬೇಕು ವಿರೋಧ ಮಾಡಬಾರದು ಎಂದು ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿ ನಗರದ ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಸ್ತಂಭ ಈಗ ಮತ್ತೆ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆದುಕೊಳ್ಳುತ್ತದೆ ಅನ್ನೋದನ್ನು ಕಾದುನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+