• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳು

|

ಬಳ್ಳಾರಿ, ನವೆಂಬರ್ 06: 2019ರ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ. 1979ರಿಂದ ಇಲ್ಲಿ ತನಕದ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಭವಿಷ್ಯ ಸ್ಪಷ್ಟವಾಗಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಘೋಷಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಗೆಲುವಿಗೆ ನೂರಾರು ಅಪ್ಪಂದಿದು, ಸೋಲು ಎಂದಿದ್ದರೂ ಅನಾಥ ಎಂಬಂತೆ ಸೋಲಿನ ಹೊಣೆಯನ್ನು ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ಅವರು ಮಾತ್ರ ಹೊತ್ತುಕೊಂಡಿದ್ದಾರೆ. ಸೋಲಿನ ಪರಾಮರ್ಶೆ ಇನ್ನೂ ನಡೆಯಬೇಕಿದೆ. ಆದರೆ, ಈ ನಡುವೆ ಬಳ್ಳಾರಿಯಲ್ಲಿ ಭರ್ಜರಿಯಾಗಿ ಹಾರಾಟ ನಡೆಸಿದ್ದ ಕೇಸರಿ ಬಾವುಟ ಕಳಚಿ ಬೀಳಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಗೆಲುವು ಸಾಧಿಸಿದ್ದ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ಹಾಗೂ ಕಳೆದ ಬಾರಿಯ ವಿಜೇತ ಅಭ್ಯರ್ಥಿ ಶ್ರೀರಾಮುಲು ಅವರಿಗಿಂತ ಉಗ್ರಪ್ಪ ಈ ಬಾರಿಯ ಉಪ ಚುನಾವಣೆಯಲ್ಲಿ ಶಾಂತಾ ಅವರ ವಿರುದ್ಧ ಭಾರಿ ಮತಗಳ ಅಂತರ ಸಾಧಿಸಿದ್ದಾರೆ.

ಇದು ನನ್ನ ಗೆಲುವಲ್ಲ, ಮತದಾರರ, ಸಿದ್ಧಾಂತದ ಗೆಲುವು: ಉಗ್ರಪ್ಪ

ಡಿಕೆ ಶಿವಕುಮಾರ್ ಹಾಗೂ ಬಿ ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರದಲ್ಲಿ ಗೆಲುವು ಕಾಂಗ್ರೆಸ್ ಕಡೆಗೆ ವಾಲಿದೆ.

ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ

ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. ಆ ಸಮಯಕ್ಕೆ ಆಗಲೇ ಬಿಜೆಪಿಯಿಂದ ಮತದಾರರರ ಒಲವು ಕಾಂಗ್ರೆಸ್ ನತ್ತ ವಾಲಿತ್ತು ಎನ್ನಬಹುದು. ಹಾಗಾಗಿ, ಬಿಜೆಪಿಗೆ ಮತ್ತೊಮ್ಮೆ ಇಲ್ಲಿ ಮತದಾರರನ್ನು ಸೆಳೆಯುವುದು ಸುಲಭವಾಗಿರಲಿಲ್ಲ. ಅದರಲ್ಲೂ ಉಪಚುನಾವಣೆಯಲ್ಲಿ ಬಿಜೆಪಿ ಮಾಡಿಕೊಂಡ ತಯಾರಿ, ನಡೆಸಿದ ಪ್ರಚಾರ ಎಲ್ಲವೂ ಮತದಾರರನ್ನು ಮುಟ್ಟಲಿಲ್ಲ.

ಸೋತ ಶ್ರೀರಾಮುಲುಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್‌

ಬಿಜೆಪಿ ಪೂರ್ವತಯಾರಿ, ಶ್ರೀರಾಮುಲು ಏಕಾಂಗಿ

ಬಿಜೆಪಿ ಪೂರ್ವತಯಾರಿ, ಶ್ರೀರಾಮುಲು ಏಕಾಂಗಿ

ಬಳ್ಳಾರಿಯ ಬಿಜೆಪಿ ಮಾಜಿ ಸಂಸದ ಬಿ ಶ್ರೀರಾಮುಲು ಅವರು ಈ ಕ್ಷೇತ್ರ ಬಳಿಕ ಇಲ್ಲಿನ ಮತದಾರರು, ಕಾರ್ಯಕರ್ತರನ್ನು ಕೇಳುವವರು ಇಲ್ಲವಾಗಿತ್ತು. ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ಹೆಗಲ ಮೇಲೆ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ಬಿಜೆಪಿ ಹೈಕಮಾಂಡ್ ಕೂಡಾ ಈ ಕಡೆ ತಲೆ ಹಾಕಲಿಲ್ಲ. ವಿ ಸೋಮಣ್ಣ, ಆರ್ ಅಶೋಕ್ ರಂಥ ನಾಯಕರನ್ನು ಕರೆ ತಂದರೂ ಇಲ್ಲಿನ ಜನತೆ ಕ್ಯಾರೇ ಅನ್ನಲಿಲ್ಲ. ಶ್ರೀರಾಮುಲು ಅವರಿಗೆ ಜಾತಿಬಲದಿಂದ ಮಾತ್ರ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗುವಷ್ಟರಲ್ಲಿ ಸಮಯ ಮೀರಿತ್ತು.

ಉಪ ಚುನಾವಣೆ ಫಲಿತಾಂಶ : ಸತ್ಯವಾಯಿತು ಗುಪ್ತಚರ ಇಲಾಖೆ ವರದಿ!

ಡಿಕೆ ಶಿವಕುಮಾರ್ ತಂತ್ರಗಾರಿಕೆ

ಡಿಕೆ ಶಿವಕುಮಾರ್ ತಂತ್ರಗಾರಿಕೆ

ಪ್ರತಿ ಕ್ಷೇತ್ರಕ್ಕೂ ಸಚಿವರನ್ನು ಉಸ್ತುವಾರಿಗಳನ್ನಾಗಿ ಮಾಡಿ 'ಮೈಕ್ರೋ' ರಣತಂತ್ರವನ್ನು ಡಿ.ಕೆ.ಶಿವಕುಮಾರ್‌ ಬಳಸಿ ಗೆಲುವು ಸಾಧಿಸಿದರು. ಹೊಸ ಅಭ್ಯರ್ಥಿಯನ್ನು ಕರೆ ತಂದರೂ, ಜನಮನ ಗೆಲ್ಲಲು ಬೇಕಿದ್ದ ತಂತ್ರ ಬಳಸಿದರು.

ಬಳ್ಳಾರಿ ಚುನಾವಣೆ ಫಲಿತಾಂಶ, ಮೋದಿ-ಶಾ ಗ್ಯಾಂಗಿಗೆ ಎಚ್ಚರಿಕೆ ಗಂಟೆ!

ಪ್ರಮುಖ ಮುಖಂಡರ ವಾಕ್ಸಮರ

ಪ್ರಮುಖ ಮುಖಂಡರ ವಾಕ್ಸಮರ

ಕಣದಲ್ಲಿದ್ದ ಅಭ್ಯರ್ಥಿಗಳಾದ ವಿಎಸ್ ಉಗ್ರಪ್ಪ ಹಾಗೂ ಜೆ ಶಾಂತಾ ಅವರನ್ನು ಹೊರತುಪಡಿಸಿ ಮಿಕ್ಕ ಎಲ್ಲರೂ ಇಲ್ಲಿ ತಮ್ಮ ವಾಕ್ ಸಾಮರ್ಥ್ಯ ತೋರಿದರು. ಅದರಲ್ಲೂ ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗನ ಸಾವಿನ ಬಗ್ಗೆ ಹೇಳಿದರು ಎನ್ನಲಾದ ಡೈಲಾಗ್ ಮುಳುವಾಯಿತು. ಇನ್ನು ಉಗ್ರಪ್ಪ ಅವರು ವಲಸೆ ಅಭ್ಯರ್ಥಿ ಎಂದ ಬಿಜೆಪಿ ಮುಖಂಡರಿಗೂ ತಕ್ಕ ಉತ್ತರ ಸಿಕ್ಕಿತು. ಯಾರ ವಿರುದ್ಧವೂ ಮಾತನಾಡದೆ, ಶ್ರೀರಾಮುಲು ನನ್ನ ಅಣ್ಣ ಇದ್ದಂತೆ ಎಂದ ಡಿಕೆ ಶಿವಕುಮಾರ್ ಅವರ ಮಾತು ಇಲ್ಲಿನ ಜನತೆಗೆ ಹಿತವಾಗಿ ಕಂಡಿತು. ನವೆಂಬರ್ 06ಕ್ಕೆ ಸರ್ಕಾರ ಬಿದ್ದು ಹೋಗುತ್ತೆ ಎಂದು ಭವಿಷ್ಯ ನುಡಿದ ಬಿಜೆಪಿ ನಾಯಕರು ಬರೀ ಪೊಳ್ಳು ಆಶ್ವಾಸನೆ, ಭವಿಷ್ಯ ನುಡಿಯುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಬಿತ್ತಲಾಯಿತು. ಅದೇ ನಿಜವೂ ಆಗಿದೆ.

ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka By-elections results 2018: Here are the list of reasons behind BJP defeat in Ballari. Congress snatched huge victory from BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more