ಬಳ್ಳಾರಿ ಕೋಟೆ ಮೇಲೆ ಕೇಸರಿ ಬಾವುಟ ಹಾರಿಸಿದ ದೇವೇಂದ್ರಪ್ಪ
ಬಳ್ಳಾರಿ, ಮೇ 23: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ವಿ.ಎಸ್ ಉಗ್ರಪ್ಪ ಅವರಿಗೆ ಭಾರಿ ಮುಖಭಂಗವಾಗಿದೆ. ಬಳ್ಳಾರಿ ಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ ದೇವೇಂದ್ರಪ್ಪ ಅವರನ್ನು ಹಗುರವಾಗಿ ಪರಿಣಮಿಸಿದ್ದಕ್ಕೆ ಭಾರಿ ಬೆಲೆ ತೆತ್ತಿದ್ದಾರೆ.
ಹಾಲಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಬಿಜೆಪಿಯ ವೈ ದೇವೇಂದ್ರಪ್ಪ ನಡುವಿನ ಜಿದ್ದಾಜಿದ್ದಿನ ಪೈಪೋಟಿಯ ನಿರೀಕ್ಷೆಯಿತ್ತು. ಆದರೆ, ವೈ ದೇವೇಂದ್ರಪ್ಪ ಅವರು ಉತ್ತಮ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬಳ್ಳಾರಿಯಲ್ಲಿ ಏಪ್ರಿಲ್ 23ರಂದು ಮತದಾನವಾಗಿತ್ತು. ಮೇ 23ರಂದು ಫಲಿತಾಂಶ ಹೊರಬಂದಿದೆ.
ಬಳ್ಳಾರಿಯಲ್ಲಿ 54,475 ಮತಗಳ ಅಂತರದಿಂದ ವೈ ದೇವೇಂದ್ರಪ್ಪ ಅವರು ವಿಎಸ್ ಉಗ್ರಪ್ಪ ಅವರನ್ನು ಸೋಲಿಸಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಸ್ವಾತಂತ್ರ್ಯ ಬಂದ ಬಳಿಕ ಮದ್ರಾಸ್, ಮೈಸೂರು ಆನಂತರ ಕರ್ನಾಟಕ ರಾಜ್ಯಗಳಲ್ಲಿ ಈ ಕ್ಷೇತ್ರ ಸೇರಿಕೊಂಡಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳು ಪರಿಶಿಷ್ಟ ಜಾತಿ(ಎಸ್ ಸಿ) ಅಥವಾ ಪರಿಶಿಷ್ಟ ಪಂಗಡ(ಎಸ್ ಟಿ)ಕ್ಕೆ ಸೇರಿದ್ದಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರ
ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳು ಪರಿಶಿಷ್ಟ ಜಾತಿ(ಎಸ್ ಸಿ) ಅಥವಾ ಪರಿಶಿಷ್ಟ ಪಂಗಡ(ಎಸ್ ಟಿ)ಕ್ಕೆ ಸೇರಿದ್ದಾಗಿದೆ.
ಎಂಟು ಕ್ಷೇತ್ರಗಳ ಪೈಕಿ ಬಳ್ಳಾರಿ, ಬಳ್ಳಾರಿ ನಗರ, ಕೂಡ್ಲಿಗಿ ಬಿಜೆಪಿ ವಶದಲ್ಲಿದ್ದರೆ, ಕಂಪ್ಲಿ, ವಿಜಯನಗರ, ಸಂಡೂರು, ಹಗರಿ ಬೊಮ್ಮನಹಳ್ಳಿ, ಹಡಗಲಿ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ.

ಕಾಂಗ್ರೆಸ್ ಇಲ್ಲಿ ಉತ್ತಮ ಫಲಿತಾಂಶ ಹೊಂದಿತ್ತು
1980ರಿಂದ ಇಲ್ಲಿ ತನಕ ಸ್ಟ್ರೈಕ್ ರೇಟ್ ನೋಡಿದರೆ ಕಾಂಗ್ರೆಸ್ ಶೇ 70ರಷ್ಟು ಸರಾಸರಿಯೊಂದಿಗೆ 7 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಶೇ 30ರಷ್ಟು ಗೆಲುವಿನ ಸರಾಸರಿಯೊಂದಿಗೆ 3 ಬಾರಿ ಗೆಲುವು ಸಾಧಿಸಿದೆ.

ವಾಲ್ಮೀಕಿ ಜನಾಂಗ, ಕುರುಬ ಮತದಾರರು
ವಾಲ್ಮೀಕಿ ನಾಯಕ ಜನಾಂಗ, ಕುರುಬರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಮಿಕ್ಕಂತೆ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪ ಸಂಖ್ಯಾತರರು ಸಮಾನ ಅವಕಾಶವನ್ನು ಹೊಂದಿದ್ದಾರೆ. ಕುರುಬ ಸಮುದಾಯದ ಉಗ್ರಪ್ಪರನ್ನು ಕಣಕ್ಕಿಳಿಸಲಾಗಿತ್ತು. ವಾಲ್ಮೀಕಿ ಜನಾಂಗ ದೇವೇಂದ್ರಪ್ಪರನ್ನು ಬಿಜೆಪಿ ಕಣಕ್ಕಿಳಿಸಿ ತೀವ್ರ ಪೈಪೋಟಿ ನೀಡಿ, ಗೆಲುವು ಸಾಧಿಸಿದೆ

2018ರಲ್ಲಿ ನಡೆದ ಉಪ ಚುನಾವಣೆ
2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪ ಅವರು ಶೇ 59.99ರಷ್ಟು ಮತ (6,28,365 ಮತಗಳು) ಗಳಿಸಿ ಬಿಜೆಪಿಯ ಜೆ ಶಾಂತಾ ಅವರನ್ನು ಶೇ 36.78 ಮತ ಗಳಿಕೆ(3,85,204) ಸೋಲಿಸಿದರು.

ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ
ಬಳ್ಳಾರಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ, ಗಣಿ ಮತ್ತು ಕೃಷಿ ಕೂಲಿ ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತುಂಗ ಭದ್ರಾ ನದಿ ಹರಿದರೂ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.












Click it and Unblock the Notifications