• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

|

ಬಳ್ಳಾರಿ, ನವೆಂಬರ್ 06: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶವು ಮಂಗಳವಾರ(ನವೆಂಬರ್ 06) ಮಧ್ಯಾಹ್ನ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದೆ ಜೆ ಶಾಂತಾ ಅವರಿಗೆ ತೀವ್ರ ಮುಖಭಂಗವಾಗಿದೆ.

ಜನವಿರೋಧಿ, ಸರ್ವಾಧಿಕಾರಿ ಪ್ರವೃತ್ತಿ ತೋರುವವರ ವಿರುದ್ಧ ಜಾತ್ಯಾತೀತವಾದಿಗಳ ಗೆಲುವು ಇದಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಿಎಸ್ ಉಗ್ರಪ್ಪ ಅವರು ಘೋಷಿಸಿದ್ದಾರೆ.

ಬಳ್ಳಾರಿ ಲೋಕಸಭೆ ಉಪ ಚುನಾವಣೆ ಅಂತಿಮ ಫಲಿತಾಂಶ (ನವೆಂಬರ್ 06,2018)

ಬಳ್ಳಾರಿ ಲೋಕಸಭೆ ಚುನಾವಣೆ ಲೈವ್ ಅಪ್ಡೇಟ್: ವಿಎಸ್ ಉಗ್ರಪ್ಪಗೆ ದಾಖಲೆ ಜಯ

* ನವೆಂಬರ್ 03ರಂದು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ನಡೆದ ಮತದಾನದಲ್ಲಿ 63.85 % ರಷ್ಟು ದಾಖಲಾಗಿತ್ತು.

* ಒಟ್ಟು ಎಣಿಕೆಯಾದ ಮತಗಳು :10,34,980

* ತಿರಸ್ಕೃತಗೊಂಡ ಮತಗಳು: 226

* ನೋಟಾ : 12,413

* ವಿಎಸ್ ಉಗ್ರಪ್ಪ(ಕಾಂಗ್ರೆಸ್): 6,28,365 ಮತಗಳು

* ಜೆ ಶಾಂತಾ (ಬಿಜೆಪಿ) : 3,85,204 ಮತಗಳು

* ಗೆಲುವಿನ ಅಂತರ: 2,43,261 ಮತಗಳು

ಉಳಿದ ಪ್ರಮುಖ ಆಭ್ಯರ್ಥಿಗಳು:

* ವೈ ಪಂಪಾಪತಿ: 7,697 ಮತಗಳು

* ಡಾ. ಟಿ. ಆರ್ ಶ್ರೀನಿವಾಸ್ : 13,714ಮತಗಳು

ವಲಸಿಗರ ಗೆಲುವು: 1999ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಎದುರಾಳಿ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರು. 2004ರಲ್ಲಿ ಬಿಜೆಪಿ ಪಾಲಾದ ಬಳಿಕ ಕಾಂಗ್ರೆಸ್ಸಿಗೆ ಇಲ್ಲಿ ಗೆಲುವಿನ ನಗೆ ಬೀರಲು ಆಗಿರಲಿಲ್ಲ. 14 ವರ್ಷಗಳ ಬಳಿಕ ಉಗ್ರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ.

85,144 ಮತಗಳ ಅಂತರದಿಂದ ಗೆದ್ದಿದ್ದ ಶ್ರೀರಾಮುಲು, ಲಕ್ಷಾಂತರ ಮತಗಳಿಂದ ಗೆದ್ದಿದ್ದ ಕೂಳೂರು ಗೌಡರ ದಾಖಲೆಯನ್ನು ಉಗ್ರಪ್ಪ ಮುರಿದಿದ್ದಾರೆ.

English summary
Bellary Lok sabha By Elections Results 2018: Congress’ VS Ugrappa had a grand victory after defeating BJP’s J Shantha by a margin of 2,43,161 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X